ಮಗನ ವಿಷಯದಲ್ಲಿ ಇದೆಂತಹ ಎಡವಟ್ಟು ಮಾಡಿಕೊಂಡ್ರು ಅಮಿತಾಬ್ ಬಚ್ಚನ್ !

ಮುಂಬೈ, ಮಂಗಳವಾರ, 3 ಏಪ್ರಿಲ್ 2018 (07:24 IST)

ಮುಂಬೈ : ಬಾಲಿವುಡ್ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಹಿಂದೊಮ್ಮೆ ಟೀಂ ಇಂಡಿಯಾದ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಟ್ವೀಟ್ ಮೂಲಕ ಶುಭ ಕೋರಲು ಹೋಗಿ ಎಡವಟ್ಟು ಮಾಡಿಕೊಂಡು ಕ್ಷಮೆ ಕೇಳಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ. ಅದೇರೀತಿ ಇದೀಗ ಮತ್ತೊಮ್ಮೆ ತಮ್ಮ ಮಗ ನಟ ಅಭಿಷೇಕ್ ಬಚ್ಚನ್ ಅವರ  ಬಗ್ಗೆ ಟ್ವೀಟ್ ಮಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ.


ಶನಿವಾರ ನಟ ಅಭಿಷೇಕ್ ಬಚ್ಚನ್ ಪಂಜಾಬ್‍ನ ಅಟರಿ ಗ್ರಾಮದಲ್ಲಿರುವ ಭಾರತದ ಹಾಗೂ ಪಾಕ್ ಬಾರ್ಡರ್ ನಲ್ಲಿ ನಡೆದ ಕಾರ್ಯಕ್ರಮವನ್ನು ವೀಕ್ಷಿಸಲು ಹೋಗಿದ್ದರು. ಅಲ್ಲಿ ಅವರು ರಾಷ್ಟ್ರ ಧ್ವಜವನ್ನು ತಮ್ಮ ಕೈಯಲ್ಲಿ ಹಿಡಿದಿದ್ದು, ಆ ಫೋಟೋವನ್ನು  ಅಮಿತಾಬ್ ಬಚ್ಚನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಹಾಕಿ ,’ಅಭಿಷೇಕ್ ಬಚ್ಚನ್ ವಾಘಾ ಬಾರ್ಡರ್ ನಲ್ಲಿದ್ದಾರೆ. ಜೈ ಹಿಂದ್! ಭಾರತ್ ಮಾತಾ ಕೀ ಜೈ! ಅದು ಒಂದು ಅದ್ಭುತ ಅನುಭವವಾಗಿತ್ತು ಎಂದು ಅವರು ನನಗೆ ಹೇಳಿದರು. ದೇಶಭಕ್ತಿಯ ಭಾವನೆ ನೋಡಲು ನನಗೆ ಅವಕಾಶ ಸಿಕ್ಕಿತ್ತು ಹಾಗೂ ರೋಮಾಂಚನವಾಯಿತು. ಆ ಗಾರ್ಡ್ ಸೆರಮನಿಯಲ್ಲಿ ನಾನು ವಾಯ್ಸ್ ಓವರ್ ನೀಡಿದ್ದೆ ಎಂದು ಟ್ವೀಟ್ ಮಾಡಿದ್ದರು.


ಆದರೆ ಅವರು ಅದರಲ್ಲಿ ಅಟರಿ ಬಾರ್ಡರ್ ಬದಲು ವಾಘಾ ಬಾರ್ಡರ್ ಎಂದು ಬರೆದಿದ್ದರು. ನಂತರ ಅವರು ತಮ್ಮ ತಪ್ಪನ್ನು ಅರಿತು ಮತ್ತೊಂದು ಟ್ವೀಟ್ ಮಾಡಿ ಅಭಿಷೇಕ್ ರಾಷ್ಟ್ರಧ್ವಜ ಹಿಡಿದು ನಿಂತಿರೋದು ವಾಘಾ ಬಾರ್ಡರ್ ನಲ್ಲಿ ಅಲ್ಲ ಅಟಾರಿ ಬಾರ್ಡರ್ ನಲ್ಲಿ. ವಾಘಾ ಬಾರ್ಡರ್ ಪಾಕಿಸ್ತಾನದ ಹತ್ತಿರ ಇದೆ ಎಂದು ಬರೆದು ತಮ್ಮ ತಪ್ಪನ್ನು ಸರಿಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

‘ನಟಸಾರ್ವಭೌಮ’ ಚಿತ್ರ ರೀಮೇಕಾ? ಈ ಬಗ್ಗೆ ಚಿತ್ರದ ನಿರ್ದೇಶಕರು ಹೇಳಿದ್ದೇನು?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸುತ್ತಿರುವ ...

news

ನೈಜೀರಿಯಾ ಮೂಲದ ನಟ ಸ್ಯಾಮುಯೆಲ್ ರಾಬಿನ್ಸನ್ ಮಲಯಾಳಂ ಚಿತ್ರದ ನಿರ್ಮಾಪಕರ ಮೇಲೆ ಆರೋಪ ಮಾಡಿದ್ದಾದರೂ ಯಾಕೆ…?

ನೈಜೀರಿಯಾ : 'ಸುಡಾನಿ ಫ್ರಂ ನೈಜೀರಿಯಾ' ಎಂಬ ಮಲಯಾಳಂ ಚಿತ್ರದಲ್ಲಿ ನಟಿಸಿದ ನೈಜೀರಿಯಾ ಮೂಲದ ನಟನೊಬ್ಬ ...

news

ನಟಿ ಪ್ರಿಯಾಂಕಾ ಚೋಪ್ರಾ ಕ್ವಾಂಟಿಕೋ ಶೋನಿಂದ ಹೊರಬರಲು ನಿರ್ಧಾರ ಮಾಡಿದ್ದು ಯಾಕೆ..?

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೇರಿಕಾದ ಕ್ವಾಂಟಿಕೋ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ...

news

ಅಬ್ಬಾ! ಕೊನೆಗೂ ಮದುವೆಯಾಗುವ ನಿರ್ಧಾರ ಮಾಡಿದ್ದಾರಂತೆ ದೀಪಿಕಾ - ರಣ್‍ವೀರ್ ಜೋಡಿ!

ಮುಂಬೈ : ಬಾಲಿವುಡ್ ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಇಬ್ಬರು ಯಾವಾಗ ಮದುವೆ ...

Widgets Magazine
Widgets Magazine