Widgets Magazine
Widgets Magazine

ಬಜೆಟ್ ನಲ್ಲಿ ಅರುಣ್ ಜೇಟ್ಲಿಯಿಂದ ರೈತರಿಗೆ ಬಂಪರ್ ಕೊಡುಗೆ

ನವದೆಹಲಿ, ಗುರುವಾರ, 1 ಫೆಬ್ರವರಿ 2018 (11:30 IST)

Widgets Magazine

ನವದೆಹಲಿ: ಇದುವರೆಗೆ ಉದ್ದಿಮೆದಾರರ ಪರ ಎಂದೇ ಬಿಂಬಿತವಾಗಿದ್ದ ಕೇಂದ್ರದ ಮೋದಿ ಸರ್ಕಾರವನ್ನು ರೈತರ ಪರ ಎಂದು ಬದಲಾಯಿಸಲು ಈ ಬಜೆಟ್ ನಲ್ಲಿ ವಿತ್ತ ಸಚಿವರು ಪ್ರಯತ್ನಪಟ್ಟಿದ್ದಾರೆ.
 

ರೈತರ ಕಲ್ಯಾಣವೇ ನಮ್ಮ ಗುರಿ ಎಂದು ಆರಂಭದಲ್ಲಿಯೇ ವಿತ್ತ ಸಚಿವರು ಘೋಷಿಸಿದ್ದಾರೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ, ರೈತರ ಆದಾಯ ಹೆಚ್ಚಿಸುವ ಯೋಜನೆಗಳಿಗೆ ಚಾಲನೆ ನೀಡುವುದಾಗಿ ಹೇಳಿದ್ದಾರೆ.
 
ರಾಜ್ಯ ಸರ್ಕಾರಗಳ ಸಹಯೋದೊಂದಿಗೆ ರೈತರ ಕಲ್ಯಾಣ ಯೋಜನೆಗಳು, ಎಪಿಎಂಸಿ ಮಾರುಕಟ್ಟೆಗಳ ಡಿಜಿಟಲೀಕರಣ, ಸಾವಯವ ಕೃಷಿಗೆ ಉತ್ತೇಜನ, ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಗುರಿಯಾಗಲಿದೆ ಎಂದು ಅರುಣ್ ಜೇಟ್ಲಿ ಘೋಷಿಸಿದ್ದಾರೆ. ಕೃಷಿ ಮಾರುಕಟ್ಟೆಗಳ ಮೂಲಸೌಕರ್ಯಾಭಿವೃದ್ಧಿಗೆ 2 ಸಾವಿರ ಕೋಟಿ ರೂ. ನೀಡಲಾಗಿದೆ.
 
ಬೆಳೆದ ಜಾಗಕ್ಕೆ ಮಾರುಕಟ್ಟೆ ತಲುಪಿಸುವುದು, ರೈತರು ಬೆಳೆದ ಉತ್ಪನ್ನಗಳ ಸಂಸ್ಕರಣೆಗೆ ಯೋಜನೆ, ಒದಗಿಸುವುದು, ಆಹಾರ ಸಂಸ್ಕರಣೆಗಾಗಿ ಕೃಷಿ ಸಂಪದ ಯೋಜನೆ, ಆಪರೇಷನ್ ಗ್ರೀನ್ ಹೆಸರಿನಲ್ಲಿ 500 ಕೋಟಿ ರೂ. ನಿಧಿ, ಬೆಂಬಲ ಬೆಲೆ ನೇರವಾಗಿ ರೈತರಿಗೆ ತಲುಪಲು ಯೋಜನೆ, ಮೀನುಗಾರಿಕೆ, ಪಶು ಸಂಗೋಪನೆ ವಲಯದವರಿಗೂ ಕೃಷಿ ಕಾರ್ಡ್ ವಿತರಣೆ, 52 ಮೆಗಾಫುಡ್ ಪಾರ್ಕ್ ಸ್ಥಾಪನೆ ಮುಂತಾದ ಹೊಸ ಕೊಡುಗೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ನೀಡಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅರುಣ್ ಜೇಟ್ಲಿ ರಾಷ್ಟ್ರೀಯ ಸುದ್ದಿಗಳು ಬಜೆಟ್ 2018-19 Budget 2018-19 Arun Jatly National News

Widgets Magazine

ಸುದ್ದಿಗಳು

news

ಬಜೆಟ್‌ನ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನವದೆಹಲಿ: ಕೇಂದ್ರ ವಿತ್ತ ಖಾತೆ ಸಚಿವ ಅರುಣ್ ಜೇಟ್ಲಿ ಮಂಡಿಸುತ್ತಿರುವ ಪ್ರಧಾನಿ ಮೋದಿ ಸರಕಾರದ ಪೂರ್ಣ ...

news

ಕೇಂದ್ರ ಬಜೆಟ್ 2018: 30 ವರ್ಷಗಳ ಅವಧಿಯಲ್ಲಿ ಅದೃಷ್ಟಶಾಲಿ ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ

2018-19 ಸಾಲಿನ ಕೇಂದ್ರ ಬಜೆಟ್ ಸಿದ್ಧವಾಗಿದೆ. ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ ಅವರು ನಾಳೆಯ ದಿನ ...

news

ಬಜೆಟ್ ಭಾಷಣದಲ್ಲಿ ಅರುಣ್ ಜೇಟ್ಲಿ ಹೇಳಿದ ಪ್ರಮುಖ ಅಂಶಗಳು ಇಲ್ಲಿವೆ ನೋಡಿ

ನವದೆಹಲಿ: 2018-2019ನೇ ಸಾಲಿನ ಬಜೆಟ್ ಮಂಡನೆ ಹಿನ್ನೆಲೆ ಅರುಣ್ ಜೇಟ್ಲಿ ತಮ್ಮ ಭಾಷಣವನ್ನು ...

news

ಕೇಂದ್ರ ಬಜೆಟ್ ಗೆ ಸಚಿವ ಸಂಪುಟ ಒಪ್ಪಿಗೆ

ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಬಜೆಟ್ ಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

Widgets Magazine Widgets Magazine Widgets Magazine