ಭಾರತಕ್ಕೆ ಆಸರೆಯಾದ ಶಿಖರ್ ಧವನ್, ಕೆ.ಎಲ್. ರಾಹುಲ್: ತಿರುಗೇಟು ನೀಡಿದ ಶ್ರೀಲಂಕಾ

ಕೊಲಂಬೋ, ಶನಿವಾರ, 12 ಆಗಸ್ಟ್ 2017 (18:11 IST)

Widgets Magazine

ಕೊಲಂಬೋದಲ್ಲಿ ನಡೆಯುತ್ತಿರುವ 3ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ 6 ವಿಕೆಟ್ ನಷ್ಟಕ್ಕೆ 329 ರನ್ ಕಲೆಹಾಕಿದೆ.


ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾಗೆ ಶಿಖರ್ ಧವನ್ ಮತ್ತು ಕೆ.ಎಲ್. ರಾಹುಲ್ ಉತ್ತಮ ಆರಂಭ ಒದಗಿಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಶಿಖರ್ ಧವನ್ 123 ಎಸೆತಗಳಲ್ಲಿ 119 ರನ್ ಸಿಡಿಸಿ ಸಂಭ್ರಮಿಸಿದರು. ಧವನ್ ಉತ್ತಮ ಸಾಥ್ ನೀಡಿದ ಕೆ.ಎಲ್. ರಾಹುಲ್ 85 ರನ್ ಕಲೆ ಹಾಕಿದರು.

ಶಿಖರ್ ಧವನ್ ಮತ್ತು ರಾಹುಲ್ ಔಟಾದ ಬಳಿಕ ಮಧ್ಯಮ ಕ್ರಮಾಂಕ ಕೊಂಚ ವೈಫಲ್ಯ ಅನುಭವಿಸಿತು. ಪೂಜಾರ 8 ರನ್`ಗೆ ನಿರ್ಗಮಿಸಿದರು. ನಾಯಕ ವಿರಾಟ್ ಕೊಹ್ಲಿ 42 ಮತ್ತು ರಹಾನೆ 17 ರನ್`ಗೆ ಪೆವಿಲಿಯನ್ ಸೇರಿಕೊಂಡರು.  ಅಶ್ವಿನ್ ಸಹ 31 ರನ್`ಗಳಿಗೆ ಔಟಾಗಿದ್ದಾರೆ. 13 ವೃದ್ಧಿಮಾನ್ ಸಹಾ ಮತ್ತು 1 ರನ್ ಗಳಿಸಿರುವ ಹಾರ್ದಿಕ್ ಪಾಂಡ್ಯಾ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಳೆ ಭಾರತದ ಬಾಲಂಗೋಚಿಗಳು ಉತ್ತಮ ಬ್ಯಾಟಿಂಗ್ ಮಾಡಿದರೆ ಭಾರತ ಮತ್ತಷ್ಟು ಸ್ಕೋರ್ ಗುಡ್ಡೆ ಹಾಕಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಕೊಲಂಬೋ ಟೆಸ್ಟ್ ಟೀಮ್ ಇಂಡಿಯಾ ಕ್ರಿಕೆಟ್ Cricket Colombo Test Team India

Widgets Magazine

ಕ್ರಿಕೆಟ್‌

news

‘ನಾನು ಏಕದಿನ ಆಡಲ್ಲ ಅಂದವರು ಯಾರು?’ ಸಿಟ್ಟಿಗೆದ್ದ ಕೊಹ್ಲಿ

ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಕೊಹ್ಲಿಗೆ ಮನಸ್ಸಿಲ್ಲ ಎಂಬ ಸುದ್ದಿಗಳಿಗೆ ...

news

ಪಲ್ಲಿಕೆಲೆ ಟೆಸ್ಟ್: ಟೀಂ ಇಂಡಿಯಾಕ್ಕೆ ಬಂದ ಹಾಲುಗಲ್ಲದ ಹುಡುಗ

ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ...

news

ಬಿಸಿಸಿಐ ಏನು ದೇವರಿಗಿಂತ ದೊಡ್ಡದಾ? ಸಿಟ್ಟಿಗೆದ್ದ ಶ್ರೀಶಾಂತ್

ಕೊಚ್ಚಿ: ಕೇರಳ ಮೂಲದ ಕ್ರಿಕೆಟಿಗ ಎಸ್. ಶ್ರೀಶಾಂತ್ ಮೇಲಿನ ನಿಷೇಧ ಶಿಕ್ಷೆ ತೆರವುಗೊಳಿಸುವಂತೆ ಕೇರಳ ...

news

ಅಭಿನವ್ ಮುಕುಂದ್ ರ ವರ್ಣಬೇಧ ಆರೋಪಕ್ಕೆ ನಾಯಕ ಕೊಹ್ಲಿ ಪ್ರತಿಕ್ರಿಯೆ ಏನು ಗೊತ್ತಾ?

ಕೊಲೊಂಬೊ: ಕಪ್ಪು ವರ್ಣದವನೆಂದು ತಮಾಷೆ ಮಾಡಬೇಡಿ. ವರ್ಣದ ಆಧಾರದಲ್ಲಿ ಅಳೆಯಬೇಡಿ ಎಂದು ಟ್ವಿಟರ್ ಮೂಲಕ ...

Widgets Magazine