ಚೇತೇಶ್ವರ ಪೂಜಾರ ಅವರ ದ್ರಾವಿಡ್ ಮಾದರಿಯ ಶತಕದೊಂದಿಗೆ ದಿನದಾಟ ಮುಗಿಸಿದ ಟೀಂ ಇಂಡಿಯಾ

ಅಡಿಲೇಡ್, ಗುರುವಾರ, 6 ಡಿಸೆಂಬರ್ 2018 (13:10 IST)

ಅಡಿಲೇಡ್: ಟೆಸ್ಟ್ ಇನಿಂಗ್ಸ್ ಎಂದರೆ ಹೇಗಿರಬೇಕು ಎಂಬುದನ್ನು ರಾಹುಲ್ ದ್ರಾವಿಡ್ ಹಿಂದೆಯೇ ಮಾಡಿ ತೋರಿಸಿದ್ದಾರೆ. ಇಂದು ಅದೇ ದ್ರಾವಿಡ್ ರನ್ನು ನೆನಪಿಸುವಂತೆ ಇನಿಂಗ್ಸ್ ಕಟ್ಟಿ ಶತಕಗಳಿಸಿದ ಟೀಂ ಇಂಡಿಯಾದ ಮಾನ ಉಳಿಸಿದರು.


 
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಮುಗಿದಿದ್ದು, ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದೆ. ಒಂದು ಹಂತದಲ್ಲಿ ನೂರು ರನ್ ಒಳಗೇ ಆಲೌಟ್ ಆಗುವ ಭೀತಿಯಲ್ಲಿದ್ದ ಟೀಂ ಇಂಡಿಯಾಗೆ ಚೇತೇಶ್ವರ ಪೂಜಾರ ತಾಳ್ಮೆಯ ಆಟವಾಡಿ ಆಧಾರವಾದರು.
 
ದ್ರಾವಿಡ್ ರಂತೇ ತಾಳ್ಮೆಯಿಂದ ಸಾಕಷ್ಟು ಬಾಲ್ ಎದುರಿಸಿ ಇನಿಂಗ್ಸ್ ಕಟ್ಟಿದ ಪೂಜಾರ ದಿನದಂತ್ಯಕ್ಕೆ 246 ಎಸೆತಗಳಿಂದ 123 ರನ್ ಗಳಿಸಿ ಔಟಾದರು. ಇಂದು ಇಡೀ ದಿನ ಅವರು ಬ್ಯಾಟಿಂಗ್ ನಡೆಸದೇ ಹೋಗಿದ್ದರೆ ಭಾರತದ ಮಾನ ಹರಾಜಾಗುತ್ತಿತ್ತು. ಪೂಜಾರಗೆ ಕೊಂಚ ಹೊತ್ತು ಜತೆಯಾದ ರವಿಚಂದ್ರನ್ ಅಶ್ವಿನ್ 76 ಎಸೆತ ಎದುರಿಸಿ 25 ರನ್ ಗಳಿಸಿದರು. ದಿನದಂತ್ಯಕ್ಕೆ ಮೊಹಮ್ಮದ್ ಶಮಿ 6 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ನಾಳೆ ಜಸ್ಪ್ರೀತ್ ಬುಮ್ರಾ ಜತೆಗೆ ಭಾರತದ ಇನಿಂಗ್ಸ್ ಎಷ್ಟು ಹೊತ್ತು ಮುಂದುವರಿಯುತ್ತದೆ ಕಾದು ನೋಡಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಲು ಆಸ್ಟ್ರೇಲಿಯಾ ವಿಮಾನ ಹತ್ತಿದ ಅನುಷ್ಕಾ ಶರ್ಮಾ

ಮುಂಬೈ: ಪತಿ ವಿರಾಟ್ ಕೊಹ್ಲಿ ಜತೆ ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಿಸಲು ಬಾಲಿವುಡ್ ಬೆಡಗಿ ಅನುಷ್ಕಾ ...

news

ಕೆಎಲ್ ರಾಹುಲ್ ಮೇಲೆ ಸಿಟ್ಟಿಗೆದ್ದ ಅಭಿಮಾನಿಗಳು

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಪ್ಲಾಪ್ ಶೋ ನೀಡಿದ ಬಳಿಕ ಕನ್ನಡಿಗ ...

news

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಪೂಜಾರ ಮಾತು ಕೇಳಿ ವಿಕೆಟ್ ಕಳೆದುಕೊಂಡರೇ ರಿಷಬ್ ಪಂತ್?!

ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಚಹಾ ...

news

ಗಾಯಗೊಂಡಿರುವ ಪೃಥ್ವಿ ಶಾ ಸ್ಥಿತಿ ಏನಾಗಿದೆ ಗೊತ್ತಾ? ರವಿಶಾಸ್ತ್ರಿ ಹೇಳಿದ್ದೇನು?

ಅಡಿಲೇಡ್: ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಪಡೆದ ...

Widgets Magazine
Widgets Magazine