ಧವನ್ ಸಿಡಿಯಲಿಲ್ಲ! ಪೂಜಾರ ಕೈ ಹಿಡಿಯಲಿಲ್ಲ! ಟೀಂ ಇಂಡಿಯಾ ಗತಿ?

ದೆಹಲಿ, ಶನಿವಾರ, 2 ಡಿಸೆಂಬರ್ 2017 (11:38 IST)

ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತ ಊಟದ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದೆ.
 

ಆರಂಭದಲ್ಲೇ ದಿಲ್ರುವಾನ್ ರಿಂದ ಜೀವದಾನ ಪಡೆದರೂ ಅದನ್ನು ಬಳಸಿಕೊಳ್ಳದ ಶಿಖರ್ ಧವನ್  23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದಿಲ್ರುವಾನ್ ಗೆ ಇದು 100 ನೇ ಟೆಸ್ಟ್ ವಿಕೆಟ್ ಆಗಿತ್ತು. ಇದಾದ ಬಳಿಕ ಕ್ರೀಸ್ ಗೆ ಬಂದ ಎಂದಿನಂತೆ ತೀರಾ ರಕ್ಷಣಾತ್ಮಕವಾಗಿ ಆಡದೇ ಆಕ್ರಮಣಕಾರಿ ಆಟ ತೋರಿದರು.
 
ಪರಿಣಾಮ ನಾಲ್ಕು ಬೌಂಡರಿಗಳನ್ನು ಒಳಗೊಂಡ 23 ರನ್ ಗಳಿಸಿ ಅವರೂ ಬೇಗನೇ ಪೆವಿಲಿಯನ್ ಸೇರಿಕೊಂಡರು. ಈ ವಿಕೆಟ್ ಲಹಿರು ಗಾಮಗೆ ಪಾಲಾಯಿತು. ಹೀಗಾಗಿ ಭಾರತ ಸಂಕಷ್ಟಕ್ಕೆ ಸಿಲುಕಿತು. ಆದರೆ ಇನ್ನೊಂದೆಡೆ ಭದ್ರವಾಗಿ ನಿಂತ ಮುರಳಿ ವಿಜಯ್ ಆಕ್ರಮಣಕಾರಿಯಾಗಿದ್ದರೂ ಎಚ್ಚರಿಕೆಯಿಂದ ಆಡಿ 51 ರನ್ ಗಳಿಸಿದರು. ಇನ್ನೊಂದು ತುದಿಯಲ್ಲಿ ನಾಯಕ ವಿರಾಟ್ ಕೊಹ್ಲಿ 17 ರನ್ ಗಳಿಸಿ ಆಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಶಿಖರ್ ಧವನ್ ಚೇತೇಶ್ವರ ಪೂಜಾರ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ಶ್ರೀಲಂಕಾ ಟೆಸ್ಟ್ ಸರಣಿ Shikhar Dhawan Chetheshwara Pujara Virat Kohli Team India Cricket News Sports News India-srilanka Test Series

ಕ್ರಿಕೆಟ್‌

news

ಶಿಖರ್ ಧವನ್ ರಿಂದಾಗಿ ಕೆಎಲ್ ರಾಹುಲ್ ಗಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ!

ದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ...

news

ಟೀಂ ಇಂಡಿಯಾವನ್ನು ಲೇವಡಿ ಮಾಡಿದ ಲಂಕಾ ನಾಯಕ ಚಂಡಿಮಾಲ್

ದೆಹಲಿ: ಮುಂಬರುವ ದ.ಆಫ್ರಿಕಾ ಪ್ರವಾಸಕ್ಕೆ ಹೊಂದಿಕೊಳ್ಳಲು ಪ್ರಸಕ್ತ ಲಂಕಾ ಸರಣಿಯಲ್ಲಿ ಹಸಿರು ಹುಲ್ಲಿನ ...

news

ಕೊಹ್ಲಿಯ ತಲೆನೋವಿಗೆ ಕೆಎಲ್ ರಾಹುಲ್ ತಲೆದಂಡವಾಗುತ್ತಾ?!

ನವದೆಹಲಿ: ಶ್ರೀಲಂಕಾ ವಿರುದ್ಧ ಇಂದಿನಿಂದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ನಾಯಕ ...

news

ಅನಿಲ್ ಕುಂಬ್ಳೆಗಾಗಿ ಆಯ್ಕೆಗಾರರ ಜತೆ ಜಗಳವಾಡಿದ್ದರಂತೆ ಸೌರವ್ ಗಂಗೂಲಿ!

ಮುಂಬೈ: ಸೌರವ್ ಗಂಗೂಲಿ ಎಂದರೆ ಎಂತಹಾ ಹಠಮಾರಿ ಎನ್ನುವುದು ಕ್ರಿಕೆಟ್ ಪ್ರಿಯರಿಗೆ ಗೊತ್ತಿರುವುದೇ. ಇದೇ ...

Widgets Magazine
Widgets Magazine