ಪಾಕ್ ಕ್ರಿಕೆಟ್ ಅಭಿಮಾನಿ ಭಾರತದ ಜೆರ್ಸಿ ತೊಡುವಂತೆ ಮಾಡಿದ ಧೋನಿ

ಮುಂಬೈ, ಮಂಗಳವಾರ, 9 ಅಕ್ಟೋಬರ್ 2018 (09:06 IST)

ಮುಂಬೈ: ಪಾಕಿಸ್ತಾನ ಕ್ರಿಕೆಟ್ ತಂಡ ಪ್ರವಾಸ ಮಾಡುವಲ್ಲೆಲ್ಲಾ ಜತೆಗೇ ಸಾಗುವ ಅಧಿಕೃತ ಅಭಿಮಾನಿ ಬಶೀರ್ ಚಾಚಾ ಏಷ್ಯಾ ಕಪ್ ಫೈನಲ್ ನಲ್ಲಿ ಭಾರತದ ಜೆರ್ಸಿ ತೊಡುವಂತೆ ಧೋನಿ ಮಾಡಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ.
 
ಬಾಂಗ್ಲಾದೇಶ ವಿರುದ್ಧದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕ್ ಅಭಿಮಾನಿ ಬಶೀರ್ ಭಾರತ ತಂಡದ ಜೆರ್ಸಿ ತೊಟ್ಟು ರೋಹಿತ್ ಶರ್ಮಾ ಬಳಗವನ್ನು ಬೆಂಬಲಿಸಿದ್ದರು. ಟೀಂ ಇಂಡಿಯಾ ಆಟಗಾರರ ಜತೆಗೆ ಉತ್ತಮ ಬಾಂಧವ್ಯವಿಟ್ಟುಕೊಂಡಿರುವ ಬಶೀರ್ ಚಾಚಾಗೆ ಈ ಜೆರ್ಸಿ ತೊಡಲು ಪ್ರೇರಣೆಯಾಗಿದ್ದು ಧೋನಿಯಂತೆ.
 
ಏಷ್ಯಾ ಕಪ್ ಫೈನಲ್ ಗೂ ಮೊದಲು ಧೋನಿ ಬಶೀರ್ ಚಾಚಾ ಹೋಟೆಲ್ ಕೊಠಡಿಗೆ ತೆರಳಿ ಟೀಂ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ಕೊಟ್ಟು ನಾಳಿನ ಪಂದ್ಯದಲ್ಲಿ ಇದನ್ನೇ ತೊಡುವಂತೆ ಹೇಳಿದ್ದರಂತೆ. ಅದೇ ಕಾರಣಕ್ಕೆ ಪಾಕ್ ಅಪ್ಪಟ ಅಭಿಮಾನಿ ಭಾರತೀಯ ಜೆರ್ಸಿಯಲ್ಲಿ ಮಿಂಚಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತದ ಅಭಿಮಾನಿಗಳಿಗೆ ಶಾಕ್ ಕೊಟ್ಟ ಕ್ರಿಸ್ ಗೇಲ್

ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿರುವ ಏಕದಿನ ಸರಣಿಗೆ ವಿಂಡೀಸ್ ತಂಡದಿಂದ ಹೊಡೆಬಡಿಯ ...

news

ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್ ಈ ಪರಿ ಟ್ರೋಲ್ ಗೊಳಗಾಗಿದ್ದು ಏಕೆ ಗೊತ್ತಾ?

ಕರಾಚಿ: ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಚಿರಪರಿಚಿತರಾಗಿದ್ದ ಪಾಕ್ ವೇಗಿ ಶೊಯೇಬ್ ಅಖ್ತರ್ ತಮ್ಮನ್ನು ...

news

ಬೆಂಗಳೂರಿಗೆ ಬಂದ ಬಾರ್ಸ್ ಅಕಾಡೆಮಿ

ಬೆಂಗಳೂರು : ದೇಶದ ಶೈಕ್ಷಣಿಕ ವಲಯದಲ್ಲಿ ್ಲ ಅತ್ಯಂತ ಜನಪ್ರಿಯವಾಗಿರುವ ಬಾರ್ಸ (ಬಿಎಆರ್‍ಸಿಎ) ಅಕಾಡೆಮಿ ...

news

ಮದುವೆ ಬಗ್ಗೆ ಡೀಟೈಲ್ಸ್ ಬಿಟ್ಟುಕೊಟ್ಟ ಸೈನಾ ನೆಹ್ವಾಲ್

ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪುರುಷರ ಬ್ಯಾಡ್ಮಿಂಟನ್ ಚಾಂಪಿಯನ್ ಪಾರುಪಳ್ಳಿ ಕಶ್ಯಪ್ ...

Widgets Magazine