ಐಪಿಎಲ್: ನೋವು ಲೆಕ್ಕಿಸದೇ ಆಡಿದ ಧೋನಿ

ಮೊಹಾಲಿ, ಸೋಮವಾರ, 16 ಏಪ್ರಿಲ್ 2018 (08:29 IST)

ಮೊಹಾಲಿ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ 4 ರನ್ ಗಳಿಂದ ಸೋಲನುಭವಿಸಿದೆ.
 
ಗೆಲುವಿಗೆ 198 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಚೆನ್ನೈ ಕೇವಲ 4 ರನ್ ಗಳ ಹಿನ್ನಡೆ ಅನುಭವಿಸಿ ಸೋಲನುಭವಿಸಿತು. ಅದರಲ್ಲೂ ಧೋನಿ ಇನಿಂಗ್ಸ್ ವಿಶೇಷವಾಗಿತ್ತು. ವಿಪರೀತ ಬೆನ್ನು ನೋವಿದ್ದರೂ ಧೋನಿ ಕೊನೆಯವರೆಗೂ ಹೋರಾಡಿದರು. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದರಾದರೂ ಕೊನೆಗೂ ಅವರಿಗೆ ಗೆಲುವಿನ ರನ್ ಹೊಡೆಯಲಾಗಲೇ ಇಲ್ಲ. ಅಂತಿಮವಾಗಿ 44 ಎಸೆತಗಳಲ್ಲಿ 99 ರನ್ ಗಳಿಸಿ ಔಟಾಗದೇ ಉಳಿದರು.
 
ಎಲ್ಲಕ್ಕಿಂತ ಹೆಚ್ಚಾಗಿ ಧೋನಿಗೆ ತೀವ್ರವಾಗಿ ಬೆನ್ನು ನೋವು ಕಾಡಿತ್ತು. ನೋವಿನ ನಡುವೆಯೇ ಆಡಿದ್ದರ ಬಗ್ಗೆ ಪಂದ್ಯದ ನಂತರ ಧೋನಿ ಹೇಳಿಕೊಂಡರು. ‘ನನಗೆ ದೇವರು ಕೈಗೆ ಒಳ್ಳೆ ಶಕ್ತಿ ಕೊಟ್ಟಿದ್ದಾನೆ. ಅದಕ್ಕೇ ಬೆನ್ನಿನ ಮೇಲೆ ಹೆಚ್ಚು ಅವಲಂಬಿಸಬೇಕಾಗಿಲ್ಲ. ನೋವುಗಳು ನನಗೆ ಸಾಮಾನ್ಯ. ಅದರ ಜತೆಗೆ ಆಡುವುದು ನನಗೆ ಅಭ್ಯಾಸವಾಗಿದೆ. ನಾವು ಕಠಿಣವಾಗಬೇಕಿದೆ’ ಎಂದು ಧೋನಿ ಹೇಳಿಕೊಂಡಿದ್ದಾರೆ. ಅಂತಿಮ ಓವರ್ ಗೆ ಮೊದಲು ಫಿಸಿಯೋ ಧೋನಿ ಸಹಾಯಕ್ಕೆ ಮೈದಾನಕ್ಕೆ ಬರಲು ಹೊರಟಿದ್ದರೂ ಅವರನ್ನು ಹೊರಕ್ಕೆ ಕಳುಹಿಸಿ ಆಡಲು ಸಜ್ಜಾದರು. ಧೋನಿಯ ಈ ಸಾಹಸಮಯ ಇನಿಂಗ್ಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಕೆಎಲ್ ರಾಹುಲ್ ಅನುಭವಿಸಿದ ಸಂಕಟ ಇದೀಗ ಕನ್ನಡಿಗ ಕೆ ಗೌತಮ್ ಗೂ ಎದುರಾಗಿದೆ!

ಬೆಂಗಳೂರು: ಮೊನ್ನೆಯಷ್ಟೇ ಕೆಎಲ್ ರಾಹುಲ್ ತವರಿನ ಪ್ರೇಕ್ಷಕರ ಮುಂದೆಯೇ ತವರಿನ ತಂಡದ ವಿರುದ್ಧ ಆಡುವ ಉಭಯ ...

news

ಪಂದ್ಯ ಮುಗಿದ ಮೇಲೆ ಪತ್ನಿ ಅನುಷ್ಕಾಗೆ ಅಲ್ಲಿ ಸಿಗು ಎಂದರಾ ಕೊಹ್ಲಿ!

ಬೆಂಗಳೂರು: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಿನ ಪ್ರೇಮ ಸಂಭಾಷಣೆ ಮೈದಾನದವರೆಗೆ ತಲುಪಿದ್ದು ...

news

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರ ನಡುವೆ ಚಿನ್ನಕ್ಕಾಗಿ ಕಿತ್ತಾಟ!

ನವದೆಹಲಿ: ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಭಾರತದ ಎರಡು ಬ್ಯಾಡ್ಮಿಂಟನ್ ಕಲಿಗಳು ಪಿವಿ ಸಿಂದು, ಸೈನಾ ...

news

ಕಾಮನ್ ವೆಲ್ತ್ ಗೇಮ್ಸ್: ಮಹಿಳೆಯರ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ಮೇರಿ ಕೋಮ್

ನವದೆಹಲಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಕೂಟದಲ್ಲಿ ಭಾರತ ...

Widgets Magazine