ವಿರಾಟ್ ಕೊಹ್ಲಿ ಔಟಾಗಿದ್ದನ್ನು ಸಹಿಸದೇ ಸಜೀವವಾಗಿ ದಹಿಸಿಕೊಂಡ 65 ವರ್ಷದ ಕ್ರಿಕೆಟ್ ಪ್ರೇಮಿ

ರತ್ಲಾಮ್(ಮಧ್ಯಪ್ರದೇಶ), ಭಾನುವಾರ, 7 ಜನವರಿ 2018 (17:39 IST)

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಔಟ್ ಆಗಿದ್ದನ್ನು ಸಹಿಸದ 65 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮನ್ನು ತಾವೇ ಸಜೀವವಾಗಿ ದಹಿಸಿಕೊಂಡ ಆಘಾತಕಾರಿ ಘಟನೆ ಮಧ್ಯ.ಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ವರದಿಯಾಗಿದೆ.
ಸೀಮೆ ಎಣ್ಣೆ ಸುರಿದುಕೊಂಡು ಸಜೀವವಾಗಿ ದಹಿಸಿಕೊಳ್ಳಲು ಯತ್ನಿಸಿದ ವ್ಯಕ್ತಿ ಮಾಜಿ ಸೈನಿಕನಾಗಿದ್ದು ಆತನಿಗೆ ಶೇ.15 ರಷ್ಟು ಸುಟ್ಟ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಕ್ರಿಕೆಟ್ ಪಂದ್ಯವನ್ನು ನೋಡುತ್ತಿದ್ದ ಮಾಜಿ ಸೈನಿಕ ಬಾಬುಲಾಲ್ ಬೈರ್ವಾ, ದಕ್ಷಿಣ ಆಫ್ರಿಕಾದ ವೇಗಿ ಮೊರ್ನೆ ಮೊರ್ಕಲ್ ಎಸೆತದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡುತ್ತಿದ್ದಂತೆ ನಿರಾಶೆಗೊಂಡು ಇಂತಹ ಕೃತ್ಯ ಎಸಗಿದ್ದಾರೆ. ಮುಖ, ತಲೆ ಮತ್ತು ಕೈಗಳಿಗೆ ಗಂಭೀರವಾದ ಸುಟ್ಟಗಾಯಗಳಾಗಿವೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.    
 
ಬಾಬುಲಾಲ್ ಮನೆಯಲ್ಲಿ ಏಕಾಂಗಿಯಾಗಿದ್ದಾಗ ಇಂತಹ ಕೃತ್ಯ ಎಸಗಿದ್ದಾನೆ. ನಂತರ ಆತನ ಕೂಗಾಟ ಕೇಳಿದ ನೆರೆಹೊರೆಯ ಜನರು ಧಾವಿಸಿ ನೆರವು ನೀಡಿದ್ದಾರೆ ಎಂದು ಆತನ ಸಂಬಂಧಿಕರು ತಿಳಿಸಿದ್ದಾರೆ.
 
ಸಜೀವವಾಗಿ ದಹಿಸಿಕೊಳ್ಳಲು ಯತ್ನಿಸಿದ ಬಾಬುಲಾಲ್, ಪೊಲೀಸರಿಗೆ ವಿರಾಟ್ ಕೊಹ್ಲಿ ಔಟಾಗಿದ್ದರಿಂದ ಬೇಸರಗೊಂಡು ಹೀಗೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಆದರೆ, ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ವಿರಾಟ್ ಕೊಹ್ಲಿ ಭಾರತ ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯ ಕೇಪ್‌ಟೌನ್ ಟೆಸ್ಟ್ ಬಾಬುಲಾಲ್ ಬೈರ್ವಾ3 Virat Kohli India Vs South Africa Capetown Test Virat Kohli Fan Ratlam Madhya Pradesh Man Burns

ಕ್ರಿಕೆಟ್‌

news

ಧೋನಿ ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದರೆ ಪಕ್ಕದಲ್ಲಿದ್ದ ಪುತ್ರಿ ಜೀವಾ ಏನು ಮಾಡುತ್ತಿದ್ದಳು ಗೊತ್ತೇ? (ವಿಡಿಯೋ)

ರಾಂಚಿ: ಈ ಬಾರಿಯ ಐಪಿಎಲ್ ನಲ್ಲಿ ಧೋನಿ ಮರಳಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಮರಳುತ್ತಿರುವುದು ಎಲ್ಲರಿಗೂ ...

news

ಎದುರಾಳಿ ಕಡೆಯಿಂದ ಟೀಂ ಇಂಡಿಯಾಗೆ ಬಂತು ಭರ್ಜರಿ ಸುದ್ದಿ!

ಕೇಪ್ ಟೌನ್: ಭಾರತದ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ದ.ಆಫ್ರಿಕಾ ತಂಡಕ್ಕೆ ಶಾಕಿಂಗ್ ಸುದ್ದಿಯೊಂದು ...

news

ಶ್ರೀಲಂಕಾ ತಂಡದ ಮಾಜಿ ಕ್ರಿಕೆಟ್ ಆಟಗಾರರಾದ ಸನತ್ ಜಯಸೂರ್ಯ ಸ್ಥಿತಿ ಹೇಗಿದೆ ನೋಡಿ...?

ಕೊಲಂಬೊ : ಶ್ರೀಲಂಕಾ ತಂಡದ ಕ್ರಿಕೆಟ್ ಮಾಜಿ ಆಟಗಾರರಾದ ಆಲ್ ರೌಂಡರ ಸನತ್ ಜಯಸೂರ್ಯ ಅವರು ಈಗ ನಡೆದಾಡಲು ...

news

ಹರ್ಭಜನ್ ಸಿಂಗ್ ಅವರು ಪಿಸಿಎ ಮೈದಾನದ ಸಿಬ್ಬಂದಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸಿದ್ದು ಹೇಗೆ ಗೊತ್ತಾ...?

ಮುಂಬೈ : ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರು ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಮೈದಾನದ ...

Widgets Magazine