ಕ್ರೀಡಾ ಸ್ಪೂರ್ತಿ ಮೆರೆದ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರೇಕ್ಷಕರು ಗೌರವ ಸಲ್ಲಿಸಿದ್ದು ಹೇಗೆ ಗೊತ್ತಾ?

ಟ್ರೆಂಟ್ ಬ್ರಿಡ್ಜ್, ಶನಿವಾರ, 14 ಜುಲೈ 2018 (09:28 IST)

ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವರ್ತನೆಯೊಂದು ಇಂಗ್ಲೆಂಡ್ ಪ್ರೇಕ್ಷಕರ ಮನ ಗೆದ್ದಿದೆ.
 
ಅಷ್ಟಕ್ಕೂ ಕೊಹ್ಲಿ ಏನು ಮಾಡಿದರು ಎಂಬ ಕುತೂಹಲವೇ? ಸಾಮಾನ್ಯವಾಗಿ ಕೊಹ್ಲಿ ಅಗ್ರೆಸಿವ್ ವರ್ತನೆಗೆ ಹೆಸರು ವಾಸಿ. ಆದರೆ ತಾವು ಎಷ್ಟು ಒಳ್ಳೆಯ ಕ್ರೀಡಾ ಸ್ಪೂರ್ತಿಯ ಮನುಷ್ಯ ಎನ್ನುವುದನ್ನು ಅವರು ಮೊದಲ ಏಕದಿನ ಪಂದ್ಯದಲ್ಲಿ ನಿರೂಪಿಸಿದ್ದಾರೆ.
 
ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ ಇಂಗ್ಲೆಂಡ್ ನ ಆದಿಲ್ ರಶೀದ್ ಬೌಲಿಂಗ್ ನಲ್ಲಿ ಸ್ಟಂಪ್ ಔಟ್ ಆದರು. ಆದರೆ ಅಂಪಾಯರ್ ತಕ್ಷಣ ಔಟ್ ತೀರ್ಪು ಕೊಡದೇ ಥರ್ಡ್ ಅಂಪಾಯರ್ ಗೆ ಸಿಗ್ನಲ್ ಕೊಟ್ಟರು. ಆದರೆ ಕೊಹ್ಲಿಗೆ ತಾನು ಔಟ್ ಎನ್ನುವುದು ಖಚಿತವಾಗಿತ್ತು.
 
ಹಾಗಾಗಿ ಕೊಹ್ಲಿ ಅಂಪಾಯರ್ ತೀರ್ಪಿಗೆ ಕಾಯದೇ ಪೆವಿಲಿಯನ್ ನತ್ತ ಮರಳಿದರು. ಕೊಹ್ಲಿಯ  ಈ ಕ್ರೀಡಾ ಸ್ಪೂರ್ತಿ ಇಂಗ್ಲೆಂಡ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕೊಹ್ಲಿ ಪೆವಿಲಿಯನ್ ನತ್ತ ಮರಳುತ್ತಿದ್ದರೆ ಮೈದಾನದಲ್ಲಿದ್ದ ಇಂಗ್ಲೆಂಡ್ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾ ಕ್ರಿಕೆಟಿಗರಿಗೂ ಶುರುವಾಗಿದೆ ಫುಟ್ಬಾಲ್ ಜ್ವರ!

ಲಾರ್ಡ್ಸ್: ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ದ್ವಿತೀಯ ಏಕದಿನ ಪಂದ್ಯ ಕ್ರಿಕೆಟ್ ಕಾಶಿ ಲಾರ್ಡ್ಸ್ ...

news

ಅಂದು ಕೊಹ್ಲಿಗೆ ಧೋನಿ ಮಾಡಿದ್ದನ್ನೇ ಇಂದು ಕೆಎಲ್ ರಾಹುಲ್ ಗೆ ಕೊಹ್ಲಿ ಮಾಡಲಿಲ್ಲ!

ಟ್ರೆಂಟ್ ಬ್ರಿಡ್ಜ್: ವಿರಾಟ್ ಕೊಹ್ಲಿ ಟೀಂ ಇಂಡಿಯಾಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರ ಬ್ಯಾಟಿಂಗ್ ಕ್ರಮಾಂಕದ ...

news

ಕುಲದೀಪ್ ಯಾದವ್, ರೋಹಿತ್ ಶರ್ಮಾ ದಾಳಿಗೆ ಪುಡಿಯಾಯಿತು ದಾಖಲೆಗಳು

ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹಲವು ದಾಖಲೆಗಳು ...

news

ರೋಹಿತ್ ಶರ್ಮಾ ಮನಮೋಹಕ ಹೊಡೆತ ನೋಡುತ್ತಾ ನಿಂತುಬಿಟ್ಟ ಕೊಹ್ಲಿ, ಕೆಎಲ್ ರಾಹುಲ್!

ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಗಳ ಭರ್ಜರಿ ...

Widgets Magazine