Widgets Magazine
Widgets Magazine

ಸ್ಟಂಪಿಂಗ್ ಶತಕಕ್ಕೆ ಸಿದ್ಧವಾದ ಧೋನಿ: 300ನೇ ಪಂದ್ಯದಲ್ಲಿ ಮತ್ತೆರಡು ದಾಖಲೆ ನಿರೀಕ್ಷೆ

ಕೊಲಂಬೋ, ಬುಧವಾರ, 30 ಆಗಸ್ಟ್ 2017 (13:04 IST)

Widgets Magazine

ಶ್ರೀಲಂಕಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಆಯ್ಕೆ ಸಮಿತಿಯಿಂದ ಪರೋಕ್ಷ ಎಚ್ಚರಿಕೆ ಪಡೆದಿದ್ದ ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ, ಎರಡು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಆಟ ಪ್ರದರ್ಶಿಸುವ ಮೂಲಕ ಮತ್ತೆ ಭರವಸೆ ಮೂಡಿಸಿದ್ಧಾರೆ. ಇದರ ಜೊತೆಗೆ ನಾಳೆ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆ.
 


ಹೌದು, ನಾಳೆ ಶ್ರೀಲಂಕಾ ವಿರುದ್ಧ ಧೋನಿ 300ನೇ ಏಕದಿನ ಪಂದ್ಯವನ್ನಾಡುತ್ತಿದ್ದಾರೆ.  ಇದರ ಜೊತೆಗೆ ಎರಡು ದಾಖಲೆಗಳನ್ನ ಬರೆಯಲಿದ್ದಾರೆ. ಬ್ಯಾಟಿಂಗ್`ನಲ್ಲಷ್ಟೇ ಅಲ್ಲದೆ ವಿಕೆಟ್ ಹಿಂದೆ ಸ್ಟಂಪಿಂಗ್ ಮೂಲಕ ಗಮನ ಸೆಳೆಯುವ ಧೋನಿ ಇದುವರೆಗೆ 99 ಸ್ಟಂಪಿಂಗ್ ಮಾಡಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕರ ಜೊತೆ 99 ಸ್ಟಂಪ್ ಔಟ್ ಮಾಡಿದ ಅಗ್ರ ಸ್ಥಾನ ಹಂಚಿಕೊಂಡಿರುವ ಧೋನಿ ನಾಳೆ ಮತ್ತೊಂದು ಸ್ಟಂಪಿಂಗ್ ಮಾಡಿದರೆ. 100 ಸ್ಟಂಪ್ ಮಾಡಿದ ಏಕೈಕ ಕೀಪರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
 
ಇದರ ಜೊತೆಗೆ ಅಜೇಯರಾಗಿ ಆಡಿದ ಮತ್ತೊಂದು ಸಾಧನೆಯ ಹೊಸ್ತಿಲಲ್ಲಿ ಧೋನಿ ಇದ್ದಾರೆ. ಸದ್ಯ, ಶಾನ್ ಪೊಲಾಕ್ ಮತ್ತು ಚಮಿಂದಾ ವಾಸ್ ಜೊತೆ 72 ಅಜೇಯ ಏಕದಿನ ಪಂದ್ಯವಾಡಿದ ಸ್ಥಾನ ಹಂಚಿಕೊಂಡಿರುವ ಧೋನಿ ನಾಳಿನ ಪಂದ್ಯದಲ್ಲೂ ಅಜೇಯರಾಗುಳಿದರೆ ಹೊಸ ದಾಖಲೆ ಬರೆಯಲಿದ್ದಾರೆ.
 
ಶ್ರೀಲಂಕಾ ಸರಣಿಯಲ್ಲಿ ಸಾಮರ್ಥ್ಯಕ್ಕೆ ತಕ್ಕ ಆಡುತ್ತಾ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿರುವ ಧೋನಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಇದೇ ಪ್ರದರ್ಶನ ಮುಂದುವರೆದಲ್ಲಿ 2019ರ ವಿಶ್ವಕಪ್ ತಂಡದಲ್ಲೂ ಧೋನಿ ಇರಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಅಭ್ಯಾಸ ಮಾಡುತ್ತಿದ್ದ ಧೋನಿಗೆ ಕಿರಿ ಕಿರಿ ಮಾಡಿದ ಲಂಕಾ ಅಭಿಮಾನಿ

ಕೊಲೊಂಬೊ: ಕ್ರಿಕೆಟಿಗ ಧೋನಿಯನ್ನು ಆರಾಧಿಸುವ ಎಂತೆಂತಹಾ ಅಭಿಮಾನಿಗಳಿದ್ದಾರೆ ಎಂಬುದನ್ನು ನಾವು ...

news

ಇಂಗ್ಲೆಂಡ್ ನಲ್ಲಿ ಖಾತೆ ಓಪನ್ ಮಾಡಿದ ಆರ್ ಅಶ್ವಿನ್

ಲಂಡನ್: ಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಇದೀಗ ...

news

ಮುಂಬೈ ಮಳೆ: ರಕ್ಷಣೆಗಾಗಿ ಗಂಡನ ಗ್ರಾನ್ ಸ್ಲಾಮ್ ಟವಲ್ ಬಳಸಿದ ಮಹೇಶ್ ಭೂಪತಿ ಪತ್ನಿ

ಮುಂಬೈ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಹಾನಗರಿ ಮುಂಬೈ ತತ್ತರಿಸಿ ಹೋಗಿದೆ. ಮಳೆಗೆ ಬಡವರಾದೇನು? ...

news

ನಿವೃತ್ತಿ ಬಗ್ಗೆ ಧೋನಿ ತಮ್ಮ ಬಾಲ್ಯದ ಕೋಚ್ ಗೆ ಹೇಳಿದ್ದೇನು ಗೊತ್ತಾ?

ರಾಂಚಿ: ಟೀಂ ಇಂಡಿಯಾ ಕಂಡ ಯಶಸ್ವೀ ನಾಯಕ ಧೋನಿ ನಿವೃತ್ತಿ ಬಗ್ಗೆ ಆಗಾಗ ಅವರ ವಿರೋಧಿಗಳು ಪುಕಾರು ...

Widgets Magazine Widgets Magazine Widgets Magazine