Widgets Magazine

ಶೂನ್ಯಕ್ಕೆ ಔಟಾಗಿ ಅಪರೂಪದ ದಾಖಲೆ ಮಾಡಿದ ಹನುಮ ವಿಹಾರಿ

ದಿ ಓವಲ್| Krishnaveni K| Last Modified ಬುಧವಾರ, 12 ಸೆಪ್ಟಂಬರ್ 2018 (09:00 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಪಂದ್ಯವಾಡಿದ ಟೀಂ ಇಂಡಿಯಾ ಯುವ ಕ್ರಿಕೆಟಿಗ ಹನುಮ ವಿಹಾರಿ ಅಪರೂಪದ ದಾಖಲೆ ಮಾಡಿದ್ದಾರೆ.


ಮೊದಲ ಇನಿಂಗ್ಸ್ ನಲ್ಲಿ ಭಾರತ ತಂಡ ಒತ್ತಡದಲ್ಲಿದ್ದಾಗ ಅರ್ಧಶತಕ ಗಳಿಸಿ ಭರವಸೆ ಮೂಡಿಸಿದ್ದ ಹನುಮ ವಿಹಾರಿ ದ್ವಿತೀಯ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದರು.


ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಮತ್ತು ಶೂನ್ಯಕ್ಕೆ ಔಟಾದ ಭಾರತದ ಮೂರನೇ ಕ್ರಿಕೆಟಿಗ ಎಂಬ ದಾಖಲೆ ಮಾಡಿದರು. ಇದಕ್ಕೂ ಮೊದಲು ಕರ್ನಾಟಕದವರೇ ಆದ ಗುಂಡಪ್ಪ ವಿಶ್ವನಾಥ್ 1969 ರಲ್ಲಿ ಮತ್ತು 1999 ರಲ್ಲಿ ದೇವಾಂಗ್ ಗಾಂಧಿ ಈ ದಾಖಲೆ ಮಾಡಿದ್ದರು. ಇದೀಗ ಹನುಮ ವಿಹಾರಿ ಮೂರನೆಯವರಾಗಿ ಈ ಪಟ್ಟಿಗೆ ಸೇರ್ಪಡೆಯಾದದರು.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :