ಫಾರ್ಮ್ ನಲ್ಲಿಲ್ಲದ ರೋಹಿತ್ ಶರ್ಮಾ ಸ್ಥಾನಕ್ಕೆ ಕೆಎಲ್ ರಾಹುಲ್ ಗೆ ಸಿಗುತ್ತಾ ಛಾನ್ಸ್?

ಬೆಂಗಳೂರು, ಶನಿವಾರ, 24 ಫೆಬ್ರವರಿ 2018 (08:22 IST)

ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಮೂರನೇ ಮತ್ತು ನಿರ್ಣಾಯಕ ಟಿ20 ಪಂದ್ಯ ನಡೆಯಲಿದೆ. ಅಂತೂ ಭಾರತದ ಸುದೀರ್ಘ ಆಫ್ರಿಕಾ ಪ್ರವಾಸಕ್ಕೆ ಇಂದು ತೆರೆ ಬೀಳಲಿದೆ.
 

ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ, ಧೋನಿ ಸಿಡಿಯುವುದರೊಂದಿಗೆ ಕೆಳ ಕ್ರಮಾಂಕದ ಬ್ಯಾಟಿಂಗ್ ಹಳಿಗೆ ಬಂದಂತಾಗಿದೆ. ಆದರೆ ಆರಂಭಿರದ್ದೇ ಚಿಂತೆ. ಇದುವರೆಗೆ ಆರಂಭ ಉತ್ತಮವಾಗಿರಲೇ ಇಲ್ಲ.
 
ರೋಹಿತ್ ಶರ್ಮಾ ಒಂದು ಪಂದ್ಯದಲ್ಲಿ ಶತಕ ಬಿಟ್ಟರೆ ಇನ್ಯಾವ ಪಂದ್ಯದಲ್ಲೂ ಚೆನ್ನಾಗಿ ಆಡಿಲ್ಲ. ಹೀಗಾಗಿ ನಿರ್ಣಾಯಕ ಪಂದ್ಯಕ್ಕಾದರೂ ಕನ್ನಡಿಗ ಕೆಎಲ್ ರಾಹುಲ್ ಗೆ ಕೊಹ್ಲಿ ಅವಕಾಶ ನೀಡುತ್ತಾರಾ? ಅಥವಾ ಕೊನೆ ಪಂದ್ಯವೆಂದು ತಂಡದಲ್ಲಿ ಯಾವುದೇ ಬದಲಾವಣೆ ಮಾಡೋದಿಲ್ವಾ? ಕಾದು ನೋಡಬೇಕು.
 
ಬೌಲಿಂಗ್ ನಲ್ಲೂ ಕಳೆದ ಪಂದ್ಯದಲ್ಲಿ ಬದಲಾವಣೆ ಮಾಡಿ ಕೈ ಸುಟ್ಟುಕೊಂಡಿದ್ದ ಕೊಹ್ಲಿ ಈ ಪಂದ್ಯಕ್ಕೆ ಕುಲದೀಪ್ ಯಾದವ್ ಮತ್ತು ಬುಮ್ರಾರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು. ಈ ಅಘೋಷಿತ ಫೈನಲ್ ಪಂದ್ಯ ಆರಂಭವಾಗುವುದು ರಾತ್ರಿ 9.30 ರಿಂದ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಪ್ಪನಾದ ಖುಷಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಚೇತೇಶ್ವರ ಪೂಜಾರ

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಚೇತೇಶ್ವರ ಪೂಜಾರ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಪೂಜಾರ ಪತ್ನಿ ...

news

ರಾಹುಲ್ ದ್ರಾವಿಡ್ ಎಂದರೆ ಈ ಕ್ರಿಕೆಟಿಗನಿಗೆ ಭಯವಂತೆ!

ಮುಂಬೈ: ಅಂಡರ್ 19 ಭಾರತ ತಂಡದ ಕೋಚ್ ಆಗಿ ಯಶಸ್ಸು ಸಾಧಿಸಿದ ರಾಹುಲ್ ದ್ರಾವಿಡ್ ಬಗ್ಗೆ ಯುವ ಕ್ರಿಕೆಟಿಗ ...

news

ವಿರಾಟ್ ಕೊಹ್ಲಿಗೆ ಬಿಸಿಸಿಐ ನೀಡಲಿದೆ ಹನಿಮೂನ್ ಗಿಫ್ಟ್?!

ಮುಂಬೈ: ಡಿಸೆಂಬರ್ ನಲ್ಲಿ ಅನುಷ್ಕಾ ಶರ್ಮಾ ಕೈ ಹಿಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದುವರೆಗೆ ...

news

ಡಕ್ ವೀರ ರೋಹಿತ್ ಶರ್ಮಾಗೆ ಅಭಿಮಾನಿಗಳ ಲೇವಡಿ!

ಸೆಂಚೂರಿಯನ್: ದ.ಆಫ್ರಿಕಾಗೆ ಕಾಲಿಟ್ಟಾಗಿನಿಂದ ಯಾಕೋ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ನಸೀಬೇ ಸರಿ ...

Widgets Magazine
Widgets Magazine