ಇಂಗ್ಲೆಂಡ್ ನಲ್ಲಿ ದಕ್ಕಿದ ಯಶಸ್ಸಿಗೆ ಕುಲದೀಪ್ ಯಾದವ್ ಗೆ ಸಿಗಲಿದೆ ದೊಡ್ಡ ಉಡುಗೊರೆ!

ಟ್ರೆಂಟ್ ಬ್ರಿಡ್ಜ್, ಶನಿವಾರ, 14 ಜುಲೈ 2018 (10:10 IST)

ಟ್ರೆಂಟ್ ಬ್ರಿಡ್ಜ್: ಟಿ20 ಸರಣಿ ನಂತರ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಕಮಾಲ್ ಮಾಡಿದ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಗೆ ದೊಡ್ಡ ಉಡುಗೊರೆಯೇ ಸಿಗುವ ಸಾಧ್ಯತೆಯಿದೆ.


 
ಮೊದಲ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕುಲದೀಪ್ ನಾನೀಗ ಟೆಸ್ಟ್ ಕ್ರಿಕೆಟ್ ಗೆ ಆಯ್ಕೆಯಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದರು. ಇದರ ಬಳಿಕ ಇದೀಗ ನಾಯಕ ವಿರಾಟ್ ಕೊಹ್ಲಿ ಕೂಡಾ ಇದೇ ಸುಳಿವು ನೀಡಿದ್ದಾರೆ.
 
ಕಿರು ಮಾದರಿಯಲ್ಲಿ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಸ್ಪಿನ್ ಜೋಡಿ ಮಾಡುತ್ತಿರುವ ಮೋಡಿ ನೋಡಿದರೆ ಟೆಸ್ಟ್ ತಂಡಕ್ಕೂ ಆಯ್ಕೆ ಮಾಡಬೇಕೆಂದು ಬಯಕೆಯಾಗುತ್ತಿದೆ ಎಂದು ನಾಯಕ ಕೊಹ್ಲಿ ಹೇಳಿಕೊಂಡಿದ್ದಾರೆ. ಹೀಗಾದರೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಕುಲದೀಪ್ ಆಯ್ಕೆಯಾದರೂ ಅಚ್ಚರಿಯಿಲ್ಲ.
 
ಒಂದು ವೇಳೆ ಕುಲದೀಪ್ –ಚಾಹಲ್ ಜೋಡಿ ಟೆಸ್ಟ್ ತಂಡಕ್ಕೆ ಆಯ್ಕೆಯಾದರೆ ಈಗಾಗಲೇ ಏಕದಿನ ಕ್ರಿಕೆಟ್ ನಲ್ಲಿ ಮೂಲೆಗುಂಪಾಗಿರುವ ಹಿರಿಯ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲೂ ಸ್ಥಾನ ತೊರೆಯಬೇಕಾಗಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಏಕದಿನ ಸರಣಿ ನಡೆಯುತ್ತಿರುವುದು ಇಂಗ್ಲೆಂಡ್ ನಲ್ಲೋ, ಟೀಂ ಇಂಡಿಯಾದಲ್ಲೋ?! ಹೀಗೊಂದು ಪ್ರಶ್ನೆ ಮೂಡಿದ್ದೇಕೆ ಗೊತ್ತಾ?

ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿಯನ್ನು ಕೈವಶ ಮಾಡಿಕೊಂಡ ಮೇಲೆ ಟೀಂ ಇಂಡಿಯಾ ...

news

ಕ್ರೀಡಾ ಸ್ಪೂರ್ತಿ ಮೆರೆದ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರೇಕ್ಷಕರು ಗೌರವ ಸಲ್ಲಿಸಿದ್ದು ಹೇಗೆ ಗೊತ್ತಾ?

ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ...

news

ಟೀಂ ಇಂಡಿಯಾ ಕ್ರಿಕೆಟಿಗರಿಗೂ ಶುರುವಾಗಿದೆ ಫುಟ್ಬಾಲ್ ಜ್ವರ!

ಲಾರ್ಡ್ಸ್: ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ದ್ವಿತೀಯ ಏಕದಿನ ಪಂದ್ಯ ಕ್ರಿಕೆಟ್ ಕಾಶಿ ಲಾರ್ಡ್ಸ್ ...

news

ಅಂದು ಕೊಹ್ಲಿಗೆ ಧೋನಿ ಮಾಡಿದ್ದನ್ನೇ ಇಂದು ಕೆಎಲ್ ರಾಹುಲ್ ಗೆ ಕೊಹ್ಲಿ ಮಾಡಲಿಲ್ಲ!

ಟ್ರೆಂಟ್ ಬ್ರಿಡ್ಜ್: ವಿರಾಟ್ ಕೊಹ್ಲಿ ಟೀಂ ಇಂಡಿಯಾಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರ ಬ್ಯಾಟಿಂಗ್ ಕ್ರಮಾಂಕದ ...

Widgets Magazine
Widgets Magazine