ವಿಶ್ವಕಪ್ ಕ್ರಿಕೆಟ್ ಗೆ ಮಳೆ ಕಾಟ: ಎರಡು ದಿನದಿಂದ ಪಂದ್ಯವೇ ನಡೆದಿಲ್ಲ

ಲಂಡನ್, ಬುಧವಾರ, 12 ಜೂನ್ 2019 (09:30 IST)

ಲಂಡನ್: ರ ರೋಚಕತೆಗೆ ಮಳೆ ತಣ್ಣೀರೆರಚಿದೆ. ಮಳೆಯಿಂದಾಗಿ ಕಳೆದ ಎರಡು ದಿನಗಳಿಂದ ಪಂದ್ಯಗಳೇ ನಡೆದಿಲ್ಲ.


 
ನಿನ್ನೆ ನಡೆಯಬೇಕಿದ್ದ ಶ್ರೀಲಂಕಾ-ಬಾಂಗ್ಲಾದೇಶ ಪಂದ್ಯ ಮೊನ್ನೆ ನಡೆಯಬೇಕಿದ್ದ ದ.ಆಫ್ರಿಕಾ-ವೆಸ್ಟ್ ಇಂಡೀಸ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಅದಕ್ಕೂ ಮೊದಲು ಲಂಕಾ-ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮದನ್ವಯ ನಿರ್ಧಾರವಾಗಿತ್ತು. ಇದಲ್ಲದೆ ಲಂಕಾ-ಪಾಕಿಸ್ತಾನ ನಡುವಿನ ಪಂದ್ಯ ರದ್ದಾಗಿತ್ತು. ಇದರೊಂದಿಗೆ ಒಟ್ಟು ನಾಲ್ಕು ಪಂದ್ಯಗಳು ಮಳೆಗೆ ಆಹುತಿಯಾಗಿವೆ.
 
ಇದರಿಂದ ಹೆಚ್ಚು ನಷ್ಟವಾಗಿದ್ದು ಶ್ರೀಲಂಕಾ ತಂಡಕ್ಕೆ ಆ ತಂಡಕ್ಕೆ ಸತತವಾಗಿ ಎರಡು ಪಂದ್ಯಗಳಲ್ಲಿ ಆಡಲು ಸಾಧ್ಯವಾಗದೇ ಎದುರಾಳಿಯೊಂದಿಗೆ ಅಂಕ ಹಂಚಿಕೊಳ್ಳಬೇಕಾಗಿದೆ. ಬಾಂಗ್ಲಾದೇಶಕ್ಕೂ ಲಂಕಾ ವಿರುದ್ಧ ಗೆದ್ದು ಸೆಮಿಫೈನಲ್ ಹಾದಿ ಸುಗಮಗೊಳಿಸುವ ವಿಶ್ವಾಸವಿತ್ತು. ಆದರೆ ಮಳೆಯಿಂದಾಗಿ ಸಂಕಟ ಎದುರಾಗಿದೆ.
 
ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ ಕೆಲವು ದಿನ ಇಂಗ್ಲೆಂಡ್ ನಲ್ಲಿ ಮಳೆ ಮುಂದುವರಿಯಲಿದೆ. ಹೀಗಾಗಿ ಮತ್ತಷ್ಟು ಪಂದ್ಯಗಳು ಮಳೆಗೆ ಆಹುತಿಯಾಗುವ ಸಾಧ್ಯತೆಯಿದೆ. ಇದು ಅಭಿಮಾನಿಗಳು ಮತ್ತು ಕ್ರಿಕೆಟಿಗರನ್ನು ನಿರಾಸೆಗೆ ನೂಕಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ಸಮರಕ್ಕೆ ಮೊದಲು ಅಭಿನಂದನ್ ಜೈನ್ ಲೇವಡಿ ಮಾಡಿದ ಪಾಕ್ ಟಿವಿ ವಾಹಿನಿ

ಇಸ್ಲಾಮಾಬಾದ್: ವಿಶ್ವಕಪ್ ಕೂಟದಲ್ಲಿ ಜೂನ್ 16 ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ...

news

ಶಿಖರ್ ಧವನ್ ವಿಶ್ವಕಪ್ ನಿಂದ ಹೊರಬಿದ್ದಿದ್ದನ್ನೇ ಜೋಕ್ ಮಾಡಿಕೊಂಡ ಟ್ವಿಟರಿಗರು

ಲಂಡನ್: ಶಿಖರ್ ಧವನ್ ಗಾಯದ ಕಾರಣದಿಂದ ವಿಶ್ವಕಪ್ ನಿಂದ ಹೊರಬಿದ್ದ ಸುದ್ದಿ ತಿಳಿಯುತ್ತಿದ್ದಂತೇ ಅಭಿಮಾನಿಗಳು ...

news

ಶಿಖರ್ ಧವನ್ ವಿಶ್ವಕಪ್ ನಿಂದ ಔಟ್: ಕೆಎಲ್ ರಾಹುಲ್ ಗೆ ಛಾನ್ಸ್!

ಲಂಡನ್: ಶಿಖರ್ ಧವನ್ ಗಾಯದಿಂದಾಗಿ ವಿಶ್ವಕಪ್ ತಂಡದಿಂದ ಹೊರಬೀಳುತ್ತಿದ್ದಂತೆ ಅವರ ಸ್ಥಾನಕ್ಕೆ ಟೀಂ ...

news

ಇದಕ್ಕಿಂತ ಉತ್ತಮ ಬೀಳ್ಕೊಡುಗೆ ಸಿಗಬೇಕಿತ್ತು ಎಂದ ರೋಹಿತ್ ಶರ್ಮಾಗೆ ಯುವರಾಜ್ ಸಿಂಗ್ ಹೇಳಿದ್ದೇನು ಗೊತ್ತಾ?

ಮುಂಬೈ: ಭಾರತೀಯ ಕ್ರಿಕೆಟ್ ರಂಗದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಸದ್ದಿಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ ...