ಆರ್ ಸಿಬಿಗೆ ಇಂದು ಕನ್ನಡಿಗರಿಂದಲೇ ಸವಾಲು

ಇಂಧೋರ್, ಸೋಮವಾರ, 14 ಮೇ 2018 (09:52 IST)

ಇಂಧೋರ್: ಐಪಿಎಲ್ ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕನ್ನಡಿಗರೇ ತುಂಬಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸವಾಲೊಡ್ಡಲಿದೆ.
 
ಕೆಎಲ್ ರಾಹುಲ್, ಕರುಣ್ ನಾಯರ್ ನಂತಹ ಕನ್ನಡಿಗ ಆಟಗಾರರೇ ಆಧಾರ ಸ್ತಂಬವಾಗಿರುವ ಪಂಜಾಬ್ ತಂಡಕ್ಕೆ ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ನಿರ್ಣಾಯಕ ಪಂದ್ಯವಾಡಲಿದೆ.
 
ಈ ಪಂದ್ಯ ಗೆದ್ದರಷ್ಟೇ ಕೊಹ್ಲಿ ಪಡೆಯ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಅತ್ತ ಪಂಜಾಬ್ ಗೂ ಇದೇ ಸ್ಥಿತಿ. ಕಳೆದೆರಡು ಪಂದ್ಯಗಳನ್ನು ಸೋತಿರುವ ರವಿಚಂದ್ರನ್ ಅಶ್ವಿನ್ ನೇತೃತ್ವದ ತಂಡ ಇಂದು ಗೆಲ್ಲಲೇಬೇಕಾಗಿದೆ.
 
ಆದರೆ ಕ್ರಿಸ್ ಗೇಲ್, ಏರಾನ್ ಪಿಂಚ್ ಸೇರಿದಂತೆ ಪ್ರಮುಖ ಬ್ಯಾಟ್ಸ್ ಮನ್ ಗಳು ಕೈ ಕೊಡುತ್ತಿರುವುದು ಅದರ ಚಿಂತೆಗೆ ಕಾರಣವಾಗಿದೆ. ಇತ್ತ ಆರ್ ಸಿಬಿಯದ್ದೂ ಅದೇ ಸ್ಥಿತಿ. ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಬಿಟ್ಟರೆ ಇದುವರೆಗೆ ಯಾರೂ ಮಿಂಚಿಲ್ಲ. ಹೀಗಾಗಿ ಕೊಹ್ಲಿ ಪಡೆ ಕೇವಲ 4 ಜಯದೊಂದಿಗೆ 7 ನೇ ಸ್ಥಾನದಲ್ಲಿಯೇ ಇದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಶೇನ್ ವ್ಯಾಟ್ಸನ್ ವಿರುದ್ಧ ಮೈದಾನದಲ್ಲೇ ಸಿಟ್ಟಿಗೆದ್ದ ಧೋನಿ!

ಪುಣೆ:ಸಾಮಾನ್ಯವಾಗಿ ಕ್ರಿಕೆಟಿಗ ಧೋನಿ ಮೈದಾನದಲ್ಲಿ ತಾಳ್ಮೆ ಕಳೆದುಕೊಳ್ಳುವುದು ಕಡಿಮೆ. ಆದರೆ ರಾಜಸ್ಥಾನ್ ...

news

ಧೋನಿ ಆಯ್ತು, ಇದೀಗ ಕೊಹ್ಲಿಗೂ ಅದೇ ಗತಿ!

ನವದೆಹಲಿ: ಇತ್ತೀಚೆಗೆ ಐಪಿಎಲ್ ಪಂದ್ಯದ ನಡುವೆ ಧೋನಿಗೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಎಲ್ಲರಿಗೂ ...

news

ನಿರ್ಣಾಯಕ ಪಂದ್ಯದಲ್ಲಿ ಆರ್ ಸಿಬಿ ಕಾಪಾಡಿದ ಗೆಳೆಯರು!

ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ...

news

ಐಪಿಎಲ್: ಪ್ರೀತಿ ಜಿಂಟಾ ಜತೆ ವೀರೇಂದ್ರ ಸೆಹ್ವಾಗ್ ಕಾದಾಡಿದ್ದು ನಿಜವೇ?!

ಮೊಹಾಲಿ: ಐಪಿಎಲ್ ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಉತ್ತಮ ನಿರ್ವಹಣೆ ತೋರುತ್ತಿರುವ ...

Widgets Magazine
Widgets Magazine