ಟೀಂ ಇಂಡಿಯಾ ಏಕದಿನ ಪಂದ್ಯಕ್ಕೆ ಮೊದಲು ಇಂಗ್ಲೆಂಡ್ ಗೆ ಚಿಯರ್ ಅಪ್ ಮಾಡಿದ ಸಚಿನ್ ತೆಂಡುಲ್ಕರ್!

ಮುಂಬೈ: ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಆದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇಂಗ್ಲೆಂಡ್ ಬೆಂಬಲಿಸಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಸಂದೇಶ ಕಳುಹಿಸಿದ್ದಾರೆ.
ಅರೇ.. ಇದ್ಯಾಕೆ ಹೀಗೆ? ಸಚಿನ್ ಗೆ ತಮ್ಮ ದೇಶವನ್ನು ಬಿಟ್ಟು ಎದುರಾಳಿ ತಂಡದ ಮೇಲೆ ಯಾಕಿಷ್ಟು ವ್ಯಾಮೋಹ ಬೆಳೆಯಿತು ಎಂದು ನಿಮಗೆ ಅಚ್ಚರಿಯಾಗಬಹುದು. ಅಸಲಿಗೆ ಸಚಿನ್ ಇಂಗ್ಲೆಂಡ್ ಬೆಂಬಲಿಸಿದ್ದು ನಿಜ. ಆದರೆ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನಲ್ಲ. ಫುಟ್ ಬಾಲ್ ತಂಡವನ್ನು.
ಫಿಫಾ 2018 ರ ಸೆಮಿಫೈನಲ್ ನಲ್ಲಿ ನಿನ್ನೆ ತಡರಾತ್ರಿ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತು ಹೋಗಿತ್ತು. ಆದರೆ ಈ ಪಂದ್ಯಕ್ಕೆ ಮೊದಲು ಸಚಿನ್ ಇಂಗ್ಲೆಂಡ್ ಬೆಂಬಲಿಸಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಚಿಯರ್ ಅಪ್ ಸಂದೇಶ ಪ್ರಕಟಿಸಿದ್ದರು. ಆದರೆ ಕ್ರಿಕೆಟ್ ವಿಚಾರದಲ್ಲಿ ಸಚಿನ್ ತಪ್ಪಿಯೂ ಟೀಂ ಇಂಡಿಯಾವನ್ನು ಬಿಟ್ಟುಕೊಡಲ್ಲ ಬಿಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
|
|
- ಫಿಫಾ 2018: ಫೈನಲ್ ನಲ್ಲಿ ಸೆಣಸಲಿವೆ ಈ ಎರಡು ತಂಡಗಳು
- ವಿರಾಟ್ ಕೊಹ್ಲಿ ನಮ್ಮ ಎದುರು ಈ ಬಾರಿ ಒಂದೇ ಒಂದು ಶತಕವೂ ಹೊಡೆಯಲ್ಲ! ಹೀಗಂತ ಸವಾಲು ಹಾಕಿದವರಾರು?
- ಟೀಂ ಇಂಡಿಯಾವನ್ನು ಹೊಗಳಿದ್ದಕ್ಕೆ ಟ್ರೋಲ್ ಗೊಳಗಾದ ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್
- ಇನ್ಮುಂದೆ ಜುಲೈ 9 ಕ್ಕೆ ಹುಟ್ಟಿದವರು ಟೀಂ ಇಂಡಿಯಾ ಕ್ರಿಕೆಟ್ ತಂಡಕ್ಕೆ ನಾಯಕ!
- ‘ನಂಗೇನು ಹುಚ್ಚಾ?’ ಕುಲದೀಪ್ ಯಾದವ್ ಮೇಲೆ ಧೋನಿ ಇಷ್ಟೊಂದು ಸಿಟ್ಟಾಗಿದ್ದು ಯಾಕೆ ಗೊತ್ತಾ?