ನಮ್ಮ ಪ್ರಾಂತ್ಯಗಳನ್ನೇ ನೋಡುವ ತಾಕತ್ತಿಲ್ಲ, ಕಾಶ್ಮೀರ ಯಾಕೆ? ಪಾಕ್ ಗೆ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪ್ರಶ್ನೆ

ಕರಾಚಿ, ಗುರುವಾರ, 15 ನವೆಂಬರ್ 2018 (07:18 IST)

ಕರಾಚಿ: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಇದಕ್ಕೂ ಮೊದಲು ಹಲವು ಬಾರಿ ಕಾಶ್ಮೀರ ವಿಚಾರವಾಗಿ ಮಾತನಾಡಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಈ ಬಾರಿ ತಮ್ಮ ರಾಷ್ಟ್ರವನ್ನೇ ಈ ವಿಚಾರದಲ್ಲಿ ಪ್ರಶ್ನೆ ಮಾಡಿದ್ದಾರೆ.
 
ನಮಗೆ ನಮ್ಮ ದೇಶದ ನಾಲ್ಕು ಪ್ರಾಂತ್ಯಗಳನ್ನೇ ನೋಡಿಕೊಳ‍್ಳಲು ಕಷ್ಟವಾಗಿದೆ. ಹೀಗಿರುವಾಗ ಕಾಶ್ಮೀರದ ಉಸಾಬರಿ ಯಾಕೆ ಎಂದು ಅಫ್ರಿದಿ ಪಾಕ್ ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.
 
ಪಾಕಿಸ್ತಾನದ ತಮ್ಮ ಸಹ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ಪತ್ರಿಕಾಗೋಷ್ಠಿಯೊಂದರಲ್ಲಿ ಸಲಹೆ ಕೊಟ್ಟಿರುವ ಅಫ್ರಿದಿ ‘ನಮ್ಮ ರಾಷ್ಟ್ರದ ಪ್ರಾಂತ್ಯವನ್ನೇ ನೋಡಿಕೊಳ್ಳಲು ಕಷ್ಟವಾಗಿರುವಾಗ ಕಾಶ್ಮೀರಕ್ಕಾಗಿ ಬೇಡಿಕೆ ಇಡುವುದರಲ್ಲಿ ಅರ್ಥವಿಲ್ಲ. ಕಾಶ್ಮೀರದಲ್ಲಿ ದಿನ ನಿತ್ಯ ಸಾಮಾನ್ಯ ಜನ ಸಾಯುತ್ತಿರುವುದನ್ನು ನೋಡಲು ನೋವಾಗುತ್ತದೆ. ಹಾಗಂತ ಕಾಶ್ಮೀರವನ್ನು ಭಾರತಕ್ಕೂ ಬಿಟ್ಟುಕೊಡಬೇಡಿ. ಅದು ಪ್ರತ್ಯೇಕ ರಾಷ್ಟ್ರವಾಗಲಿ’ ಎಂದು ಅಫ್ರಿದಿ ಹೇಳುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದು ಮತ್ತೊಂದು ವಿವಾದವಾಗುವುದರಲ್ಲಿ ಸಂಶಯವಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಣಜಿ ಟ್ರೋಫಿ ಕ್ರಿಕೆಟ್: ಚಾಂಪಿಯನ್ ಗಳಿಗೇ ಚಳ್ಳೆ ಹಣ್ಣು ತಿನ್ನಿಸಿದ ಕರ್ನಾಟಕ

ನಾಗ್ಪುರ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮೊದಲ ಲೀಗ್ ಪಂದ್ಯವಾಡುತ್ತಿರುವ ಕರ್ನಾಟಕ ಹಾಲಿ ಚಾಂಪಿಯನ್ ...

news

ಭಾರತ ಎ ತಂಡಕ್ಕೆ ಬರುತ್ತಿರುವ ಟೀಂ ಇಂಡಿಯಾ ಆಟಗಾರರ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು ಗೊತ್ತಾ?

ಮುಂಬೈ: ಆಸ್ಟ್ರೇಲಿಯಾ ಸರಣಿಗೆ ಮೊದಲು ನ್ಯೂಜಿಲೆಂಡ್ ನಲ್ಲಿ ಭಾರತ ಎ ತಂಡ ಟೆಸ್ಟ್ ಸರಣಿ ಆಡಲಿದೆ. ಈ ...

news

ಟೀಂ ಇಂಡಿಯಾದಲ್ಲಿ ಈ ಆಟಗಾರನನ್ನು ಮಿಸ್ ಮಾಡಿಕೊಳ್ಳೇನೆ ಎಂದು ರೋಹಿತ್ ಶರ್ಮಾ ಬೇಸರ

ಮುಂಬೈ: ಟೀಂ ಇಂಡಿಯಾದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಟಿ20 ಸರಣಿಗೆ ಧೋನಿ ಆಯ್ಕೆಯಾಗಿಲ್ಲ. ಈ ಬೇಸರ ...

news

ಅಭಿಮಾನಿಗಳಿಗೆ ಬೇಸರದ ಸಂಗತಿ ಹೇಳಿದ ಮಹಿಳಾ ಸ್ಟಾರ್ ಆಟಗಾರ್ತಿ ಮಿಥಾಲಿ ರಾಜ್

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ ಎಂದರೆ ಮಿಥಾಲಿ ರಾಜ್ ಎನ್ನುವಷ್ಟರ ಮಟ್ಟಿಗೆ ಅವರು ಹಲವು ವರ್ಷಗಳಿಂದ ...

Widgets Magazine