ಫಾರ್ಮ್ ಕಳೆದುಕೊಂಡಿರುವ ಶ್ರೀಲಂಕಾ ಕ್ರಿಕೆಟಿಗರಿಗೆ ಇನ್ನು ‘ಇದಕ್ಕೂ’ ನಿಷೇಧ!

ಕೊಲೊಂಬೊ, ಶನಿವಾರ, 30 ಡಿಸೆಂಬರ್ 2017 (07:58 IST)

ಕೊಲೊಂಬೊ: ಭಾರತದ ವಿರುದ್ಧ ಟೆಸ್, ಏಕದಿನ ಮತ್ತು ಟಿ20 ಸರಣಿ ಸೇರಿದಂತೆ ಈ ವರ್ಷ ಅತ್ಯಂತ ಹೀನಾಯವಾಗಿ ಸೋತಿರುವುದಕ್ಕೆ ಶ್ರೀಲಂಕಾ ಕ್ರಿಕೆಟಿಗರಿಗೆ ದೊಡ್ಡ ಲಾಸ್ ಆಗಲಿದೆ.
 

ಕ್ರಿಕೆಟಿಗರ ಮೇಲೆ ನಿಯಂತ್ರಣ ಹೇರಲು ತರಬೇತುದಾರ ಚಂದ್ರಿಕಾ ಹತುರುಸಿಂಘ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ. ಇದರಿಂದಾಗಿ ಇನ್ನು ಮುಂದೆ ಅಭ್ಯಾಸ ಮಾಡುವಾಗ ಲಂಕಾ ಕ್ರಿಕೆಟಿಗರು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಮ್ಯೂಸಿಕ್ ಕೇಳುವ ಹಾಗಿಲ್ಲ.
 
‘ಹಾಗೊಂದು ವೇಳೆ ಮ್ಯೂಸಿಕ್ ಕೇಳಲೇಬೇಕೆಂದರೆ ಅಂತಹ ಆಟಗಾರರು ಮನೆಗೆ ಹೋಗಬಹುದು. ಅಭ್ಯಾಸದ ವೇಳೆ ಅಭ್ಯಾಸದ ಕಡೆಗೆ ಮಾತ್ರ ಧ್ಯಾನವಿದ್ದರೆ ಸಾಕು’ ಎಂದು ಲಂಕಾ ಕೋಚ್ ಸ್ಟ್ರಿಕ್ಟಾಗಿ ಆರ್ಡರ್ ಮಾಡಿದ್ದಾರೆ.
 
ಸತತ ಸೋಲಿನ ನಂತರ ಲಂಕಾ ಕ್ರೀಡಾ ಸಚಿವರೂ ಕ್ರಿಕೆಟಿಗರ ಫಿಟ್ ನೆಸ್ ಬಗ್ಗೆ ಗಂಭೀರವಾದ ಎಚ್ಚರಿಕೆ ನೀಡಿದ್ದು, ಮುಂಬರುವ ಬಾಂಗ್ಲಾದೇಶ ಪ್ರವಾಸಕ್ಕೆ ದಡೂತಿ ದೇಹದ ಆಟಗಾರರಿಗೆ ಕೊಕ್ ಕೊಡಲು ಆದೇಶಿಸಿದ್ದಾರೆ. ಮುಂಬರುವ ವಿಶ್ವಕಪ್ ದೃಷ್ಟಿಯಿಂದ ತಂಡವನ್ನು ಕಟ್ಟಲು ಏನು ಮಾಡಬೇಕೋ ಅದೆಲ್ಲವನ್ನೂ ಮಾಡಲು ಲಂಕಾ ಕ್ರಿಕೆಟ್ ಕೋಚ್ ನಿರ್ಧರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಶಿಖರ್ ಧವನ್ ಪತ್ನಿ, ಮಕ್ಕಳನ್ನು ದುಬೈನಿಂದ ವಿಮಾನವೇರಲು ನಿರಾಕರಿಸಿದ ವಿಮಾನ ಸಿಬ್ಬಂದಿ!

ನವದೆಹಲಿ: ದುಬೈ ಮಾರ್ಗವಾಗಿ ದ. ಆಫ್ರಿಕಾಗೆ ತೆರಳುತ್ತಿದ್ದ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಜತೆಗಿದ್ದ ...

news

ರೋಜರ್ ಫೆಡರರ್ ಖುಷಿಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಯಾರ ಜತೆ ಗೊತ್ತಾ...?

ರಾಟ್ನೇಸ್ಟ್: ವಿಶ್ವದಲ್ಲಿ ಅತಿ ಹೆಚ್ಚು ಸಂತೋಷವಾಗಿರುವ ಪ್ರಾಣಿ ಕೋಕಾ ಜತೆ ವಿಶ್ವದ ಶೇಷ್ಠ ಟೆನಿಸ್ ಆಟಗಾರ ...

news

ಯುವರಾಜ್ ಸಿಂಗ್ ಪತ್ನಿ ಹೇಝೆಲ್ ಹೊಟ್ಟೆ ಉರಿದುಕೊಂಡಿದ್ದು ಯಾಕೆ ಗೊತ್ತಾ?

ಮುಂಬೈ: ವಿರಾಟ್ ಅನುಷ್ಕಾ ಅವರ ಮದುವೆ ಪಾರ್ಟಿಯಲ್ಲಿ ನಡೆದ ಘಟನೆಗಳು ಈಗಲೂ ಚರ್ಚೆಗೆ ಕಾರಣವಾಗುತ್ತಿದೆ. ...

news

‘ಟೀಂ ಇಂಡಿಯಾ ಯಾರಿಗೂ ಭಯಪಡಲ್ಲ’

ನವದೆಹಲಿ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾಗೆ ಎದುರಾಳಿ ...

Widgets Magazine