ಐಪಿಎಲ್: ಕೂದಲೆಳೆಯ ಅಂತರದಲ್ಲಿ ಫೈನಲ್ ಛಾನ್ಸ್ ಕಳೆದುಕೊಂಡ ಕೆಕೆಆರ್

ಕೋಲ್ಕೊತ್ತಾ, ಶನಿವಾರ, 26 ಮೇ 2018 (09:06 IST)

ಕೋಲ್ಕೊತ್ತಾ: ಈ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಿಂದಲೂ ಅದ್ಭುತವಾಗಿಯೇ ಆಡಿದ್ದ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಫೈನಲ್ ಗೆ ಇನ್ನೇನು ತಲುಪಿಯೇ ಬಿಟ್ಟಿತು ಎನ್ನುವಷ್ಟರಲ್ಲಿ ಜಾರಿ ಬಿದ್ದಿದೆ.
 
ಈ ಐಪಿಎಲ್ ಕೂಟದಲ್ಲಿ ಸೈಲಂಟ್ ಕಿಲ್ಲರ್ ಗಳಂತೆ ಮೆರೆದ ಸನ್ ರೈಸರ್ಸ್ ಹೈದರಾಬಾದ್ ಎದುರು 17 ರನ್ ಗಳಿಂದ ಸೋತು ಕೆಕೆಆರ್ ಫೈನಲ್ ಛಾನ್ಸ್ ಕಳೆದುಕೊಂಡರೆ ಹೈದರಾಬಾದ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಲಿದೆ.
 
ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಸಾಂಘಿಕ ಹೋರಾಟದ ಫಲದಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಇದರ ಬೆನ್ನತ್ತಿದ್ದ ಹೈದರಾಬಾದ್ ಉತ್ತಮ ಆರಂಭ ಪಡೆಯಿತಾದರೂ ನಂತರ ಕೆಳ ಕ್ರಮಾಂಕದಲ್ಲಿ ಸಾಥ್ ಸಿಗದೇ ಸೊರಗಿತು. ಆರಂಭಿಕ ಕ್ರಿಸ್ ಲಿನ್ 48 ರನ್ ಗಳಿಸಿದರು. ಹೈದರಾಬಾದ್ ಪರ ರಶೀದ್ ಖಾನ್ ಮೂರು ವಿಕೆಟ್ ಕಿತ್ತಿದ್ದಲ್ಲದೆ, ಒಂದು ರನೌಟ್ ಮಾಡಿದರು. ಇದರಿಂದಾಗಿ ಕೆಕೆಆರ್ ನಿಗದಿನ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಹೈದರಾಬಾದ್ ಫೈನಲ್ ಗೇರಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಬಗ್ಗೆ ಕೇಳಿದರೆ ಕೋಚ್ ರವಿಶಾಸ್ತ್ರಿಗೆ ಇಷ್ಟೊಂದು ಸಿಟ್ಟು ಬಂದಿದ್ದೇಕೆ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದಾಗಿ ಕೌಂಟಿ ಕ್ರಿಕೆಟ್ ಆಡುವುದರಿಂದ ಹಿಂದೆ ...

news

ಕೆಎಲ್ ರಾಹುಲ್ ಕೊಟ್ಟ ಸವಾಲು ಪೂರ್ತಿ ಮಾಡ್ತಾರಾ ಸ್ನೇಹಿತರು?!

ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ನಾಯಕ ವಿರಾಟ್ ಕೊಹ್ಲಿ ನೀಡಿದ ಫಿಟ್ ...

news

ಆರ್ ಸಿಬಿ ಅಭಿಮಾನಿಗಳ ಕ್ಷಮೆ ಕೇಳಿದ ವಿರಾಟ್ ಕೊಹ್ಲಿ

ಮುಂಬೈ: ಈ ಆವೃತ್ತಿಯಲ್ಲಿ ಕಪ್ ನಮ್ದೇ ಎಂದು ಆರಂಭದಲ್ಲೇ ಜಾಹೀರಾತು ನೀಡುತ್ತಿದ್ದ ರಾಯಲ್ ಚಾಲೆಂಜರ್ಸ್ ...

news

ಕೌಂಟಿ ಕ್ರಿಕೆಟ್ ಗೆ ಪದಾರ್ಪಣೆ ಮಾಡುವ ಮೊದಲೇ ವಿರಾಟ್ ಕೊಹ್ಲಿಗೆ ಶಾಕ್

ಮುಂಬೈ; ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡಲು ಹೊರಟಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ...

Widgets Magazine