ಇತಿಹಾಸ ಬರೆಯಲು ಟೀಂ ಇಂಡಿಯಾಗೆ ಇನ್ನೊಂದೇ ಹೆಜ್ಜೆ

ವಾಂಡರರ್ಸ್, ಶನಿವಾರ, 10 ಫೆಬ್ರವರಿ 2018 (08:42 IST)

ವಾಂಡರರ್ಸ್: ದ.ಆಫ್ರಿಕಾದಲ್ಲಿ ಟೆಸ್ಟ್ ಕ್ರಿಕೆಟ್ ಸರಣಿ ಗೆಲ್ಲಬೇಕೆಂಬ ಟೀಂ ಇಂಡಿಯಾ ಕನಸು ನನಸಾಗಲಿಲ್ಲ. ಆದರೆ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಇನ್ನೊಂದು ಮೆಟ್ಟಿಲು ಸಾಕು.
 

ಇಂದು ಭಾರತ ಮತ್ತು ದ.ಆಫ್ರಿಕಾ ನಡುವೆ ವಾಂಡರರ್ಸ್ ಅಂಗಣದಲ್ಲಿ ನಾಲ್ಕನೇ ಏಕದಿನ ಪಂದ್ಯ ನಡೆಯಲಿದ್ದು, ಕಾಮನ ಬಿಲ್ಲಿನ ನಾಡಿನಲ್ಲಿ ಮೊದಲ ಏಕದಿನ ಸರಣಿ ಗೆಲ್ಲಲು ಭಾರತ ಸಜ್ಜಾಗಿದೆ.
 
ಟೀಂ ಇಂಡಿಯಾದ ಸದ್ಯದ ಫಾರ್ಮ್ ನೋಡಿದರೆ ಅದು ಕಷ್ಟವೇನಲ್ಲ. ಬೌಲರ್ ಗಳು ಅದರಲ್ಲೂ ಸ್ಪಿನ್ನರ್ ಗಳು ಆಫ್ರಿಕನ್ನರ ನಿದ್ದೆಗೆಡಿಸಿದ್ದಾರೆ. ಆದರೆ ಬ್ಯಾಟ್ಸ್ ಮನ್ ಗಳ ಬಗ್ಗೆ ನಾಯಕ ಕೊಹ್ಲಿ ಕೊಂಚ ಗಂಭೀರವಾಗಿ ಯೋಚಿಸಲೇಬೇಕು. ಆರಂಭಿಕ ರೋಹಿತ್ ಶರ್ಮಾ ಫಾರ್ಮ್ ಕಳೆದುಕೊಂಡಿದ್ದಾರೆ. ಅತ್ತ ಮಧ್ಯಮ ಕ್ರಮಾಂಕದಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಕೊಹ್ಲಿ ಎಂಬ ಆಲದ ಮರ ಇವೆಲ್ಲಾ ಕಪ್ಪು ಮಸಿ ನುಂಗಿ ಹಾಕಿದೆ.
 
ಹಾಗಿದ್ದರೂ ಪ್ರತೀ ಬಾರಿಯೂ ಕೊಹ್ಲಿಯ ಮೇಲೆಯೇ ನಿರೀಕ್ಷೆಯ ಭಾರ ಹಾಕಲು ಸಾಧ್ಯವಿಲ್ಲ. ಅತ್ತ ದ.ಆಫ್ರಿಕಾಗೂ ಎಬಿಡಿ ವಿಲಿಯರ್ಸ್ ಆಗಮನದ ಸಂತಸ. ಸಿಡಿಲ ಮರಿಯ ಆಗಮನದಿಂದಾದರೂ ಪರಿಸ್ಥಿತಿ ಸುಧಾರಿಸೀತು ಎಂಬ ಆಶಾಭಾವನೆ ಅತಿಥೇಯ ತಂಡದ್ದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ದ.ಆಫ್ರಿಕಾ ಏಕದಿನ ಸರಣಿ Team India Cricket News Sports News India-s Africa Odi

ಕ್ರಿಕೆಟ್‌

news

ಅನುಷ್ಕಾ ಶರ್ಮಾ ತಂದೆ ಅಳಿಯ ವಿರಾಟ್ ಕೊಹ್ಲಿಗೆ ಕೊಟ್ಟ ಆ ಸ್ಪೆಷಲ್ ಗಿಫ್ಟ್ ಏನು?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ ವಿವಾಹವಾಗಿದ್ದಾರೆ. ...

news

‘ಸಚಿನ್, ದ್ರಾವಿಡ್, ಸೆಹ್ವಾಗ್, ಲಕ್ಷ್ಮಣ್ ನಂತರ ಕೊಹ್ಲಿಯೇ ಶ್ರೇಷ್ಠ’

ಕೋಲ್ಕೊತ್ತಾ: ಭಾರತ ಕ್ರಿಕೆಟ್ ಕಂಡ ಅತ್ಯಪೂರ್ವ ಆಟಗಾರರಾದ ಸಚಿನ್, ದ್ರಾವಿಡ್, ಸೆಹ್ವಾಗ್ ಮತ್ತು ಲಕ್ಷ್ಮಣ್ ...

news

ವಿರಾಟ್ ಕೊಹ್ಲಿಗೆ ಈ ಡೌಟ್ ಕ್ಲಿಯರ್ ಮಾಡಬೇಕಿತ್ತಂತೆ!

ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಸುಮಾರು 100 ರನ್ ಗಳನ್ನು ...

news

ಟೀಂ ಇಂಡಿಯಾ ಸ್ಪಿನ್ನರ್ ಗಳ ಕಾಟಕ್ಕೆ ಬೇಸತ್ತಿದ್ದ ದ.ಆಫ್ರಿಕಾಗೆ ಶುಭ ತರಲಿದೆ ಈ ಸುದ್ದಿ!

ವಾಂಡರರ್ಸ್: ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ದ.ಆಫ್ರಿಕಾಗೆ ಈಗ ...

Widgets Magazine
Widgets Magazine