ಮೂರನೇ ಮ್ಯಾಜಿಕ್ ಇಂದೇ ಮಾಡುತ್ತಾ ಟೀಂ ಇಂಡಿಯಾ?

ಕೇಪ್ ಟೌನ್, ಬುಧವಾರ, 7 ಫೆಬ್ರವರಿ 2018 (08:18 IST)

ಕೇಪ್ ಟೌನ್: ಟೆಸ್ಟ್ ನಲ್ಲಿ ಕಳೆದ ಮಾನ ಈಗಾಗಲೇ ಟೀಂ ಇಂಡಿಯಾ ಏಕದಿನದಲ್ಲಿ ಮರಳಿ ಪಡೆಯಲು ಯಶಸ್ವಿಯಾಗಿದೆ. ಆದರೆ ಇನ್ನೂ ಅರ್ಧ ಕೆಲಸವೂ ಮುಗಿದಿಲ್ಲ. ಅದೆಲ್ಲವನ್ನೂ ಟೀಂ ಇಂಡಿಯಾ ಮಾಡುತ್ತದೆಯೇ?
 

ಈಗಾಗಲೇ ಸರಣಿಯ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಭಾರತ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಆಫ್ರಿಕನ್ನರ ಸ್ಪಿನ್ ಹುಳುಕು ಭಾರತಕ್ಕೆ ವರದಾನವಾಗಿದೆ. ಸ್ಪಿನ್ ಗೆ ಕೊಂಚ ನೆರವೂ ಸಿಕ್ಕರೂ ಭಾರತವನ್ನು ಹಿಡಿಯುವವರು ಯಾರೂ ಇಲ್ಲ.
 
ಇಂದು ಕೇಪ್ ಟೌನ್ ನಲ್ಲಿ ಮೂರನೇ ಏಕದಿನ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಭಾರತ ತಂಡ ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಆರಂಭಿಕರೂ ಯಶಸ್ವಿಯಾಗಿರುವುದರಿಂದ ಕನ್ನಡಿಗ ಕೆಎಲ್ ರಾಹುಲ್ ಮತ್ತೆ ಬೆಂಚ್ ಕಾಯಿಸಬೇಕಾದೀತು.
 
ಅತ್ತ ದ.ಆಫ್ರಿಕಾಗೆ ಭಾರತೀಯ ಸ್ಪಿನ್ನರ್ ಗಳನ್ನು ಎದುರಿಸುವುದರ ಜತೆಗೆ ಗಾಯಾಳುಗಳ ಚಿಂತೆ ಕಾಡುತ್ತಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವುದೇ ನಾಯಕನಿಗೆ ತಲೆನೋವಾಗಿದೆ. ಹೀಗಿರುವಾಗ ಈ ಪಂದ್ಯವೂ ಪೈಪೋಟಿಯಿಲ್ಲದೇ ನೀರಸವಾಗುತ್ತಾ? ಕಾದು ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ದ.ಆಫ್ರಿಕಾ ಏಕದಿನ ಸರಣಿ Team India Cricket News Sports News India-s Africa Odi Series

ಕ್ರಿಕೆಟ್‌

news

ಗುಡ್ ನ್ಯೂಸ್! ಐಪಿಎಲ್ ಗೆ ಮರಳಲಿದ್ದಾರಂತೆ ಶೇನ್ ವಾರ್ನ್!

ನವದೆಹಲಿ: ರಾಜಸ್ಥಾನ್ ರಾಯಲ್ಸ್ ತಂಡವೆಂದರೆ ನೆನಪಿಗೆ ಬರುವುದು ಶೇನ್ ವಾರ್ನ್ ಎಂಬ ಸ್ಪಿನ್ ಮಾಂತ್ರಿಕನ ...

news

‘ಡ್ರೆಸ್ಸಿಂಗ್ ರೂಂನಲ್ಲಿ ಯಾವಾಗಲೂ ಉರಿಯುವ ಕೊಹ್ಲಿಗೆ ಕೂಲರ್ ಕೋಚ್ ಬೇಕು’

ಬೆಂಗಳೂರು: ಸ್ವಭಾವತಃ ಆಕ್ರಮಣಕಾರಿಯಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಶಾಂತಗೊಳಿಸಲು ...

news

ಭಾರತೀಯ ಕ್ರಿಕೆಟ್ ಗೆ ಇನ್ನು ಬೆಂಗಳೂರು ರಿಮೋಟ್ ಕಂಟ್ರೋಲ್?!

ಬೆಂಗಳೂರು: ಪ್ರತೀ ವರ್ಷ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುವುದು, ಎನ್ ಸಿಎ ಘಟಕವಿರುವುದು ಸೇರಿದಂತೆ ...

news

ದ.ಆಫ್ರಿಕಾ ಕ್ರಿಕೆಟಿಗರಿಗೆ ಭಾರತೀಯ ಮಹಿಳೆಯರ ಚಳ್ಳೆ ಹಣ್ಣು!

ಕಿಂಬರ್ಲಿ: ಒಂದೆಡೆ ಭಾರತ ಪುರುಷರ ಕ್ರಿಕೆಟ್ ತಂಡ ದ.ಆಫ್ರಿಕಾವನ್ನು ಅದರದ್ದೇ ನೆಲದಲ್ಲಿ ...

Widgets Magazine
Widgets Magazine