ದ. ಆಫ್ರಿಕಾದಲ್ಲಿ ಟೀಂ ಇಂಡಿಯಾಗೆ ಈ ಕೆಂಪು ಚೆಂಡಿನ ಭಯ ಕಾಡಿದೆಯಂತೆ!

ಕೇಪ್ ಟೌನ್, ಸೋಮವಾರ, 1 ಜನವರಿ 2018 (08:30 IST)

ಕೇಪ್ ಟೌನ್: ಟೆಸ್ಟ್ ಸರಣಿ ಆಡಲು ದ. ಆಫ್ರಿಕಾಗೆ ಬಂದಿಳಿದಿರುವ ಟೀಂ ಇಂಡಿಯಾಗೆ ಈಗ ವೇಗದ ಪಿಚ್ ನಲ್ಲಿ ಆಡುವ ಆತಂಕ ಕಾಡಿದೆ. ಎಷ್ಟೇ ಭಯವಿಲ್ಲದೇ ಆಡುತ್ತೇವೆ ಎಂದರೂ ಇಲ್ಲಿ ಟೆಸ್ಟ್ ಸರಣಿಗೆ ಬಳಸಲು ಕುಕ್ ಬೆರಾ ಚೆಂಡಿನಲ್ಲಿ ಬೌಲಿಂಗ್ ನಡೆಸುವುದು ಕಷ್ಟ ಎಂದು ವೇಗಿ ಭುವನೇಶ್ವರ್ ಕುಮಾರ್ ಹೇಳಿಕೊಂಡಿದ್ದಾರೆ.
 

‘ಇಲ್ಲಿ ನಮಗೆ ಯಾವ ರೀತಿಯ ಪಿಚ್ ನೀಡಬಹುದು ಎಂದು ಗೊತ್ತಿಲ್ಲ. ಬೌನ್ಸಿ ಪಿಚ್ ಆದರೆ ಕುಕ್ ಬೆರಾ ಬೌಲ್ ನಲ್ಲಿ ಬೌಲ್ ಮಾಡುವುದು ಕಷ್ಟ. 20-25 ಓವರ್ ಆದ ಮೇಲೆ ಈ ಕಂಪನಿಯ ಕೆಂಪು ಚೆಂಡು ಬೇಕಾದ ಹಾಗೆ ತಿರುವು ಪಡೆಯುವುದಿಲ್ಲ’ ಎಂದು ಭುವನೇಶ್ವರ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
 
ಸಾಮಾನ್ಯವಾಗಿ ಆಸ್ಟ್ರೇಲಿಯಾ, ಆಫ್ರಿಕಾಗಳಲ್ಲಿ ಕುಕ್ ಬೆರಾ ಚೆಂಡನ್ನು ಬಳಸಲಾಗುತ್ತದೆ. ಭಾರತದಲ್ಲಿ ಎಸ್ ಜಿ ಬಾಲ್ ಗಳನ್ನು ಟೆಸ್ಟ್ ಪಂದ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಈ ಬಾಲ್ ಗಳಿಗೆ ಹೋಲಿಸಿದರೆ ಕುಕ್ ಬೆರಾ ಬಾಲ್ ಗಳಲ್ಲಿ ಬಾಲ್ ಮಾಡುವುದು ಕೊಂಚ ಸವಾಲಿನ ಕೆಲಸ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಶಿಖರ್ ಧವನ್ ಮೇಲೆ ನಾಯಕ ಕೊಹ್ಲಿಗೆ ಅಸಮಾಧಾನ ಹುಟ್ಟಿಕೊಂಡಿದ್ದೇಕೆ?!

ಕೇಪ್ ಟೌನ್: ದ. ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಟೀಂ ಇಂಡಿಯಾ ದ. ಆಫ್ರಿಕಾಗೆ ಬಂದಿಳಿದಿದೆ. ಆದರೆ ...

news

ನೊವಾಕ್ ಜೊಕೊವಿಚ್ ಕತಾರ್ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದು ಯಾಕೆ ಗೊತ್ತಾ…?

ಅಬುಧಾಬಿ : ಸರ್ಬಿಯಾದ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌, ಮುಂದಿನ ವಾರ ದೋಹಾದಲ್ಲಿ ನಡೆಯಲಿರುವ ಕತಾರ್‌ ...

news

ದ್ರಾವಿಡ್ ರನ್ನು ಭೇಟಿಯಾದ ಪಾಕ್ ಕ್ರಿಕೆಟಿಗ ಹೇಳಿದ್ದೇನು ಗೊತ್ತಾ?

ನವದೆಹಲಿ: ರಾಹುಲ್ ದ್ರಾವಿಡ್ ಎಂದರೆ ಜಂಟಲ್ ಮ್ಯಾನ್ ಆಫ್ ದಿ ಕ್ರಿಕೆಟ್ ಎಂದೇ ಜನಪ್ರಿಯ. ಅವರಿಗೆ ಗೌರವ ...

news

ಸೈನಾ ನೆಹ್ವಾಲ್-ಸಿಂಧು ನಡುವೆ ಕೋಲ್ಡ್ ವಾರ್!

ಹೈದರಾಬಾದ್: ಭಾರತೀಯ ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಇಬ್ಬರೂ ಎರಡು ಮಿನುಗುವ ...

Widgets Magazine
Widgets Magazine