Widgets Magazine

ಇಟಲಿಯಲ್ಲಿ ಮುಂದಿನ ವಾರ ವಿರಾಟ್- ಅನುಷ್ಕಾ ವಿವಾಹ

ಮುಂಬೈ| Rajesh patil| Last Modified ಬುಧವಾರ, 6 ಡಿಸೆಂಬರ್ 2017 (19:08 IST)
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಸಿ ಬಾಲಿವುಡ್ ಹಾಟ್ ನಟಿ ಅನುಷ್ಕಾ ಶರ್ಮಾ ಪ್ರಸಕ್ತ ತಿಂಗಳಲ್ಲಿಯೇ ವಿವಾಹವಾಗಲು ಸಿದ್ದತೆ ನಡೆಸಿದ್ದಾರೆ ಎಂದು ತಾಜಾ ಮೂಲಗಳು ತಿಳಿಸಿವೆ. 
ಈ ವರ್ಷದ ಡಿಸೆಂಬರ್ ಎರಡನೇ ವಾರದಲ್ಲಿ ಪ್ರೇಮ ಹಕ್ಕಿಗಳು ಅಂತಿಮವಾಗಿ ಸಪ್ತಪದಿ ತುಳಿಯಲು ನಿರ್ಧರಿಸಿವೆ. ಡಿಸೆಂಬರ್ 9, 10, 11 ಮತ್ತು 12 ದಿನಾಂಕಗಳನ್ನು ವಿವಾಹಕ್ಕಾಗಿ ಆಯ್ಕೆ ಮಾಡಲಾಗಿದೆ. ವಿರಾಟ್ ನಾಳೆ ಇಟಲಿಗೆ ಹೋಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ವಾರ ವಿನ್ಯಾಸಕಿ ಸವ್ಯಸಾಚಿ ಅನುಷ್ಕಾ ಮನೆಗೆ ತೆರಳಿ ಭೇಟಿ ಮಾಡಿದ್ದರಿಂದ ಅನುಷ್ಕಾ ಶರ್ಮಾಳ ವಧುವಿನ ಉಡುಗೆಯನ್ನು ಅವರೇ ವಿನ್ಯಾಸ ಮಾಡಬಹುದು ಎನ್ನಲಾಗಿದೆ.
 
ಇಟಲಿಯ ಮಿಲನ್ ನಗರದಲ್ಲಿ ವಿರಾಟ್ ಮತ್ತು ಅನುಷ್ಕಾ ವಿವಾಹಕ್ಕಾಗಿ ಸ್ಥಳವನ್ನು ಬುಕ್ ಮಾಡಲಾಗಿದ್ದು, ವಿರಾಟ್ ಮತ್ತು ಅನುಷ್ಕಾ ಸ್ನೇಹಿತರು ಮಾತ್ರ ಉಪಸ್ಥಿತರಿರಲಿದ್ದಾರೆ. ಯಾವುದೇ ಕ್ರಿಕೆಟಿಗರಿಗೆ ಆಹ್ವಾನ ನೀಡಿಲ್ಲ. ಇದೊಂದು ಖಾಸಗಿ ಕಾರ್ಯಕ್ರಮವಾಗಲಿದೆ ಎಂದು ಮೂಲಗಳು ತಿಳಿಸಿವೆ.
 
ಮುಂಬೈನಲ್ಲಿ ಡಿಸೆಂಬರ್ 21 ರಂದು ನಡೆಯಲಿರುವ ಔತಣಕೂಟಕ್ಕೆ ವಿರಾಟ್ ಮತ್ತು ಅನುಷ್ಕಾ ಸ್ನೇಹಿತರಿಗೆ ಆಹ್ವಾನ ನೀಡಲಾಗುತ್ತಿದೆ. 
 
ಬಾಲಿವುಡ್ ನಟಿ ಅನುಷ್ಕಾ ಮ್ಯಾನೇಜರ್ ಪ್ರತಿಕ್ರಿಯೆ ನೀಡಿ, ಅಂತಹ ಯಾವುದೇ ಕಾರ್ಯಕ್ರಮದ ಬಗ್ಗೆ ಯೋಜನೆಯಿಲ್ಲ. ಆದರೆ, ಅನುಷ್ಕಾ ಮುಂದಿನ ವಾರ ಇಟಲಿಗೆ ತೆರಳಲಿದ್ದಾರೆ. ವಿವಾಹ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :