ಪಾಕ್ ಕ್ರಿಕೆಟಿಗನ ದಾಖಲೆ ಮುರಿಯಲಿರುವ ವಿರಾಟ್ ಕೊಹ್ಲಿ

ಮುಂಬೈ, ಗುರುವಾರ, 11 ಅಕ್ಟೋಬರ್ 2018 (07:38 IST)

ಮುಂಬೈ: ನಾಳೆಯಿಂದ ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಾಕ್ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ ದಾಖಲೆ ಮುರಿಯುವ ಅವಕಾಶ ಪಡೆದಿದ್ದಾರೆ.
 
ಟೀಂ ಇಂಡಿಯಾ ನಾಯಕ ಈ ಪಂದ್ಯದಲ್ಲಿ ಶತಕ ಗಳಿಸಿದರೆ ಇಂಜಮಾಮ್ ದಾಖಲೆಯನ್ನು ಮೀರಿ ನಡೆಯಲಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ಇದುವರೆಗೆ 24 ಶತಕ ಗಳಿಸಿದ್ದಾರೆ.
 
25 ನೇ ಶತಕ ಗಳಿಸಿದರೆ ಅವರು ಪಾಕ್ ಕ್ರಿಕೆಟಿಗ ಇಂಜಮಾಮ್ ರ 25 ಶತಕಗಳ ಸಂಖ್ಯೆಯನ್ನು ದಾಟಿ ಮುನ್ನಡೆಯಲಿದ್ದಾರೆ. ಇಂಜಮಾಮ್ ಒಟ್ಟು 120 ಪಂದ್ಯಗಳಿಂದ 25 ಶತಕ ಗಳಿಸಿದ್ದರು. ಆದರೆ ಕೊಹ್ಲಿ ಇದುವರೆಗೆ ಕೇವಲ 72 ಟೆಸ್ಟ್ ಪಂದ್ಯ ಆಡಿದ್ದಾರಷ್ಟೇ. ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ಶತಕಗಳ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಅವರು ಒಟ್ಟು 51 ಶತಕ ಸಿಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಮಾನದಲ್ಲಿ ಅಭಿಮಾನಿಗೆ ಸರ್ಪ್ರೈಸ್ ನೀಡಿದ ಅನಿಲ್ ಕುಂಬ್ಳೆ

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆಗೆ ಕ್ರಿಕೆಟ್ ಜಗತ್ತು ಇಂದಿಗೂ ವಿಶೇಷ ಗೌರವ ನೀಡುತ್ತದೆ. ...

news

ನೀಳಕಾಯದ ಹುಡುಗಿ ಎದುರು ವಿರಾಟ್ ಕೊಹ್ಲಿ ಹೀಗೆ ಮಾಡಿದ್ದೇ ತಪ್ಪಾಯ್ತು!

ಮುಂಬೈ: ವಿರಾಟ್ ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ಉದಯೋನ್ಮುಖ ಟೆನಿಸ್ ಆಟಗಾರ್ತಿ ಕರ್ಮನ್ ಕೌರ್ ಎದುರು ಹೀಗೆ ...

news

ಬೇಡದ ದಾಖಲೆಯ ಅಪಾಯದಲ್ಲಿ ಕೆಎಲ್ ರಾಹುಲ್

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ಟೀಕೆಗೊಳಗಾಗಿದ್ದ ...

news

ಈಗಿನ ಆಯ್ಕೆಗಾರರಿಗೆ ವಿರಾಟ್ ಕೊಹ್ಲಿ, ರವಿಶಾಸ್ತ್ರಿಯನ್ನು ಪ್ರಶ್ನೆ ಮಾಡುವ ಧೈರ್ಯವೇ ಇಲ್ಲವಂತೆ!

ಮುಂಬೈ: ಪ್ರಸಕ್ತಿ ಬಿಸಿಸಿಐ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಗೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತು ...

Widgets Magazine