ಬೇರೆ ಕ್ರಿಕೆಟಿಗರಿಗೆ ಅನ್ವಯವಾಗುವ ನಿಯಮ ಧೋನಿ, ಶಿಖರ್ ಧವನ್ ಗೆ ಏಕಿಲ್ಲ?

ಮುಂಬೈ, ಬುಧವಾರ, 5 ಡಿಸೆಂಬರ್ 2018 (08:59 IST)

ಮುಂಬೈ: ರಾಷ್ಟ್ರೀಯ ತಂಡದಲ್ಲಿ ಆಡದ, ಫಾರ್ಮ್ ಕಳೆದುಕೊಂಡ ಕ್ರಿಕೆಟಿಗರು ದೇಶೀಯ ಕ್ರಿಕೆಟ್ ನಲ್ಲಿ ತಮ್ಮ ತವರು ತಂಡದ ಪರ ಆಡಬೇಕೆಂಬುದು ಬಿಸಿಸಿಐ ನಿಯಮ. ಆದರೆ ಧೋನಿ ಮತ್ತು ಶಿಖರ್ ಧವನ್ ಗೆ ಈ ನಿಯಮ ಏಕೆ ಅನ್ವಯವಾಗಿಲ್ಲ ಎಂದು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.
 
ಇಬ್ಬರೂ ಪ್ರಸಕ್ತ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿಲ್ಲ. ಬಿಡುವಿನ ವೇಳೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಈ ಕ್ರಿಕೆಟಿಗರು ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ತಮ್ಮ ತವರು ತಂಡದ ಪರ ಏಕೆ ಆಡುತ್ತಿಲ್ಲ ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.
 
ಹಿಂದೆ ಧೋನಿಗೆ ಬಿಸಿಸಿಐ ಆಯ್ಕೆ ಸಮಿತಿ ದೇಶೀಯ ಕ್ರಿಕೆಟ್ ಆಡಲು ಸೂಚಿಸಿತ್ತು. ಆದರೆ ಹಿರಿಯ ವಿಕೆಟ್ ಕೀಪರ್ ಇದನ್ನು ತಿರಸ್ಕರಿಸಿದ್ದರು. ‘ಧೋನಿ ಮತ್ತು ಶಿಖರ್ ದೇಶೀಯ ಟೂರ್ನಿಯಲ್ಲಿ ಯಾಕೆ ಆಡುತ್ತಿಲ್ಲ ಎಂದು ನಾವು ಬಿಸಿಸಿಐಯನ್ನು ಕೇಳಬೇಕಿದೆ. ಇಬ್ಬರೂ ಸದ್ಯಕ್ಕೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿಲ್ಲ. ಹೀಗಿರುವಾಗ ಇಬ್ಬರಿಗೂ ದೇಶೀಯ ಕ್ರಿಕೆಟ್ ನಿಂದ ವಿನಾಯಿತಿ ನೀಡಿರುವುದೇಕೆ’ ಎಂದು ಗವಾಸ್ಕರ್ ಕಿಡಿ ಕಾರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಿವೃತ್ತಿಗೂ ಮೊದಲು ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ್ದ ಗೌತಮ್ ಗಂಭೀರ್

ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಲು ವಿಫಲವಾದ ಸಿಎಂ ಕೇಜ್ರಿವಾಲ್ ...

news

ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗೌತಮ್ ಗಂಭೀರ್ ವಿದಾಯ ಹೇಳಿದ್ದರ ಹಿಂದಿನ ಮರ್ಮವೇನು?!

ನವದೆಹಲಿ: ಭಾರತ ತಂಡ ಕಂಡ ಶ್ರೇಷ್ಠ ಎಡಗೈ ಬ್ಯಾಟ್ಸ್ ಮನ್ ಗಳಲ್ಲೊಬ್ಬರಾದ ಗೌತಮ್ ಗಂಭೀರ್ ಎಲ್ಲಾ ಮಾದರಿಯ ...

news

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅವಮಾನ ಮಾಡಿದ ಆಸ್ಟ್ರೇಲಿಯನ್ ಪತ್ರಿಕೆ

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರನ್ನು ಅಲ್ಲಿನ ಮಾಧ್ಯಮವೊಂದು ಅವಮಾನ ...

news

ರಜಾ ದಿನವೂ ರವಿಶಾಸ್ತ್ರಿ ಕಣ್ಗಾವಲಿನಲ್ಲಿ ಸ್ಪೆಷಲ್ ತರಬೇತಿ ಪಡೆದ ರೋಹಿತ್ ಶರ್ಮಾ, ಆರ್ ಅಶ್ವಿನ್

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 6 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ...

Widgets Magazine