ಧೋನಿ ಮಾತು ಕೇಳಿ ಮತ್ತೆ ಎಡವಿದ ನಾಯಕ ಕೊಹ್ಲಿ

ಗುವಾಹಟಿ, ಬುಧವಾರ, 11 ಅಕ್ಟೋಬರ್ 2017 (09:01 IST)

ಗುವಾಹಟಿ: ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯನ್ನರ ಸರ್ವಾಂಗೀಣ ಪ್ರದರ್ಶನದಿಂದಾಗಿ 8 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ. ಇದಕ್ಕೆ ಕಾರಣ ಧೋನಿಯ ತಪ್ಪಾದ ಜಡ್ಜ್ ಮೆಂಟ್ ಮತ್ತು ಅದನ್ನು ಒಪ್ಪಿಕೊಂಡ ನಾಯಕ ಕೊಹ್ಲಿ ಎಂದರೆ ನೀವು ನಂಬಲೇ ಬೇಕು.


 
ಇದು ನಡೆದಿದ್ದು ಆಸ್ಟ್ರೇಲಿಯಾ ಇನಿಂಗ್ಸ್ ನ 5 ನೇ ಓವರ್ ನಲ್ಲಿ. ಆಸ್ಟ್ರೇಲಿಯಾವನ್ನು ಗೆಲುವಿನ ದಡ ಮುಟ್ಟಿಸಿದ ಹೆನ್ರಿಕ್ ಆಗಷ್ಟೇ ಕ್ರೀಸ್ ಗೆ ಬಂದಿದ್ದರು. ಭುವನೇಶ್ವರ್ ಕುಮಾರ್ ಎಸೆದ ಬಾಲ್ ಹೆನ್ರಿಕ್ ಬ್ಯಾಟ್ ಅಂಚಿಗೆ ಸವರಿ ವಿಕೆಟ್ ಕೀಪರ್ ಕೈ ಸೇರಿತ್ತು.
 
ಆದರೆ ಸದಾ ಕರಾರುವಾಕ್ ಆಗಿ ಔಟ್ ನಾಟೌಟ್ ಊಹಿಸುವ ಧೋನಿ ಎಡವಿದರು. ಬೌಲರ್ ಮತ್ತು ನಾಯಕ ಕೊಹ್ಲಿ ಔಟ್ ಗಾಗಿ ಅಪೀಲ್ ಮಾಡಿದರೂ ಧೋನಿ ನಾಟೌಟ್ ಆಗಿರಬಹುದು ಎಂದು ಸಲಹೆಕೊಟ್ಟರು. ಧೋನಿ ಸಲಹೆಯನ್ನು ಒಪ್ಪಿಕೊಂಡ ಕೊಹ್ಲಿ ಡಿಆರ್ ಎಸ್ ಗೆ ಮನವಿ ಸಲ್ಲಿಸಲಿಲ್ಲ. ಆದರೆ ಸ್ನಿಕೋ ಮೀಟರ್ ನಲ್ಲಿ ಬಾಲ್ ಬ್ಯಾಟ್ ಅಂಚಿಗೆ ಸವರಿದ್ದು ಸ್ಪಷ್ಟವಾಗಿತ್ತು. ಗೊಂದಲದ ಲಾಭ ಪಡೆದ ಹೆನ್ರಿಕ್ ಅಜೇಯ 62 ರನ್ ಗಳಿಸಿ ಆಸೀಸ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಧೋನಿ ಮಾತು ಕೇಳಿ ಕೊಹ್ಲಿ ಪೆಚ್ಚಾದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆಶಿಷ್ ನೆಹ್ರಾ ನಿವೃತ್ತಿಗೆ ವೇದಿಕೆಯೇ?

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ವೇಗಿ ಆಶಿಷ್ ನೆಹ್ರಾಗೆ ಇದು ...

news

ಕ್ರಿಕೆಟಿಗ ರಾಬಿನ್ ಉತ್ತಪ್ಪರಿಗೆ ಗಂಡು ಮಗುವಿನ ಭಾಗ್ಯ

ಬೆಂಗಳೂರು: ಖ್ಯಾತ ಕ್ರಿಕೆಟಿಗ ರಾಬಿನ್ ಉತ್ತಪ್ಪ ಗಂಡು ಮಗುವಿನ ತಂದೆಯಾಗಿದ್ದಾರೆ. ಮಗು ಆರೋಗ್ಯವಾಗಿದೆ ...

news

ಈ ಕಾರಣಕ್ಕೆ ಬಿಸಿಸಿಐ ಹಿಂದೆ ಬಿದ್ದಿರುವ ಯುವರಾಜ್ ಸಿಂಗ್

ಮುಂಬೈ: ಟೀಂ ಇಂಡಿಯಾದಿಂದ ಸ್ಥಾನ ವಂಚಿತರಾಗಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಇದೀಗ ಐಪಿಎಲ್ ಬಾಕಿ ...

news

‘ಶೇನ್ ವಾರ್ನ್ ನ ಶೇ.50 ರಷ್ಟು ನಾನು ಸಾಧಿಸಿದರೂ ಜೀವನ ಸಾರ್ಥಕ’

ಗುವಾಹಟಿ: ಟೀಂ ಇಂಡಿಯಾದ ಹೊಸ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ ಶೇನ್ ವಾರ್ನ್ ಗಿದ್ದ ಪ್ರತಿಭೆಯ ...

Widgets Magazine
Widgets Magazine