ವಿಂಡೀಸ್ ಕ್ರಿಕೆಟಿಗನ ಚೆಲ್ಲಾಟದಿಂದ ಅರೆಸ್ಟ್ ಆಗಲಿದ್ದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ!

ಮುಂಬೈ, ಭಾನುವಾರ, 3 ಡಿಸೆಂಬರ್ 2017 (09:20 IST)

ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಕಾರಣ ವಿಂಡೀಸ್ ಕ್ರಿಕೆಟಿಗ ಕಿರನ್ ಪೊಲ್ಲಾರ್ಡ್ ನಿಕಟವರ್ತಿಯಾಗಿದ್ದಾರೆ.
 

ಕಿರನ್ ತನ್ನ ಸಹೋದರನಂತೆ ಎಂದು ಹೇಳಿಕೊಳ್ಳುವ ಹಾರ್ದಿಕ್ ಇದೇ ವಿಂಡೀಸ್ ಕ್ರಿಕೆಟಿಗನ ದೆಸೆಯಿಂದ ವಿಂಡೀಸ್ ಪ್ರವಾಸಕ್ಕೆ ಹೋಗಿದ್ದಾಗ ಅರೆಸ್ಟ್ ಆಗುವುದರಲ್ಲಿದ್ದರಂತೆ. ಪೊಲೀಸ್ ಅಧಿಕಾರಿಯೊಬ್ಬ ಹಾರ್ದಿಕ್ ನೊಂದಿಗೆ ವಾಗ್ವಾದ ನಡೆಸಿ ಕೊನೆಗೆ ಅರೆಸ್ಟ್ ಮಾಡಲು ಮುಂದಾಗಿದ್ದರಂತೆ.
 
ಆದರೆ ತಾನು ಯಾವುದೇ ತಪ್ಪು ಮಾಡಿರಲಿಲ್ಲ. ಹಾಗಿದ್ದರೂ ಈ ಪೊಲೀಸ್ ಕಾಟದಿಂದ ಗಾಬರಿಗೊಂಡು ಟೀಂ ಇಂಡಿಯಾದವರನ್ನೇ ಕರೆಸುವ ಯೋಚನೆ ಮಾಡಿದ್ದರಂತೆ ಹಾರ್ದಿಕ್. ಕೊನೆಗೆ ಈ ಪೊಲೀಸ್ ವಾಗ್ವಾದದ ನಡುವೆ ಬೇಕೆಂದೇ ಯಾರೊಂದಿಗೋ ಫೋನ್ ಮಾಡುವಂತೆ ನಟಿಸುವಾಗ ಸಿಕ್ಕಿಬಿದ್ದನಂತೆ. ಆತ ಫೋನನ್ನು ಉಲ್ಟಾ ಹಿಡಿದುಕೊಂಡು ಮಾತನಾಡುವುದು ನೋಡಿ ಹಾರ್ದಿಕ್ ಗೆ ಇದೆಲ್ಲಾ ಪೊಲ್ಲಾರ್ಡ್ ಚೆಲ್ಲಾಟ ಎಂದು ತಿಳಿದು ನಿಟ್ಟುಸಿರಿಟ್ಟರಂತೆ. ಈ ಘಟನೆಯನ್ನು ಹಾರ್ದಿಕ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧವನ್ ಸಿಡಿಯಲಿಲ್ಲ! ಪೂಜಾರ ಕೈ ಹಿಡಿಯಲಿಲ್ಲ! ಟೀಂ ಇಂಡಿಯಾ ಗತಿ?

ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ...

news

ಶಿಖರ್ ಧವನ್ ರಿಂದಾಗಿ ಕೆಎಲ್ ರಾಹುಲ್ ಗಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ!

ದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ...

news

ಟೀಂ ಇಂಡಿಯಾವನ್ನು ಲೇವಡಿ ಮಾಡಿದ ಲಂಕಾ ನಾಯಕ ಚಂಡಿಮಾಲ್

ದೆಹಲಿ: ಮುಂಬರುವ ದ.ಆಫ್ರಿಕಾ ಪ್ರವಾಸಕ್ಕೆ ಹೊಂದಿಕೊಳ್ಳಲು ಪ್ರಸಕ್ತ ಲಂಕಾ ಸರಣಿಯಲ್ಲಿ ಹಸಿರು ಹುಲ್ಲಿನ ...

news

ಕೊಹ್ಲಿಯ ತಲೆನೋವಿಗೆ ಕೆಎಲ್ ರಾಹುಲ್ ತಲೆದಂಡವಾಗುತ್ತಾ?!

ನವದೆಹಲಿ: ಶ್ರೀಲಂಕಾ ವಿರುದ್ಧ ಇಂದಿನಿಂದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ನಾಯಕ ...

Widgets Magazine
Widgets Magazine