ಭಾರತ-ಶ್ರೀಲಂಕಾ ಟಿ20 ಪಂದ್ಯದಲ್ಲಿ ಇದುವರೆಗೆ ಮಾಡದ ದಾಖಲೆ ಮಾಡಿದರು ರೋಹಿತ್ ಶರ್ಮಾ!

ಕೊಲೊಂಬೋ, ಬುಧವಾರ, 7 ಮಾರ್ಚ್ 2018 (09:13 IST)

ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವೆ ನಿನ್ನೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದುವರೆಗೆ ಮಾಡದ ದಾಖಲೆಯೊಂದನ್ನು ಮಾಡಿದರು.
 
ಇದುವರೆಗೆ ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಒಂದೂ ಪಂದ್ಯ ಸೋತಿರಲಿಲ್ಲ. ಆದರೆ ನಿನ್ನೆಯ ಪಂದ್ಯ ಸೋಲುವ ಮೂಲಕ ಮೊದಲ ಬಾರಿಗೆ ತಮ್ಮ ನಾಯಕತ್ವದಲ್ಲಿ ಸೋಲಿನ ಕಹಿ ಉಂಡರು.
 
ಶ್ರೀಲಂಕಾ ವಿರುದ್ಧ ಭಾರತದ ಗೆಲುವಿನ ಸರಪಳಿ ಕೊನೆಗೂ ಕಳಚಿ ಬಿದ್ದಿದೆ. ಕಳೆದ 7 ಪಂದ್ಯಗಳನ್ನು ಸತತವಾಗಿ ಗೆದ್ದಿದ್ದ ಟೀಂ ಇಂಡಿಯಾ ನಿನ್ನೆಯ ಸೋಲಿನೊಂದಿಗೆ ಗೆಲವಿನ ಸರಣಿ ಕಡಿದುಕೊಂಡಿದೆ.
 
ಭಾರತ ನೀಡಿದ 175 ರನ್ ಗಳ ಮೊತ್ತ  ಬೆನ್ನಟ್ಟಿದ ಶ್ರೀಲಂಕಾ ಈ ಮೂಲಕ ಭಾರತದ ವಿರುದ್ಧ ಗರಿಷ್ಠ ರನ್ ಯಶಸ್ವಿಯಾಗಿ ಬೆನ್ನತ್ತಿದ ದಾಖಲೆ  ಮಾಡಿತು.  ಶಿಖರ್ ಧವನ್ ಈ ಪಂದ್ಯದಲ್ಲಿ 90 ರನ್ ಗಳಿಸಿದ್ದರು. ಈ ಮೂಲಕ ಸೋತ ಪಂದ್ಯದಲ್ಲಿ ಭಾರತ ಪರ ಗರಿಷ್ಠ ರನ್ ಮಾಡಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು. ಮೊದಲೆರಡು ಸ್ಥಾನ, ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಹೆಸರಲ್ಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹೇಳಿದಂತೇ ಮಾಡಿಬಿಟ್ಟರು ರೋಹಿತ್ ಶರ್ಮಾ!

ಕೊಲೊಂಬೋ: ತ್ರಿಕೋನ ಟಿ 20 ಸರಣಿ ಆರಂಭಕ್ಕೆ ಮೊದಲು ಈ ಸರಣಿ ಗೆಲ್ಲುವ ಫೇವರಿಟ್ ತಂಡ ನಾವಲ್ಲ ಎಂದು ಹಂಗಾಮಿ ...

news

ತ್ರಿಕೋನ ಸರಣಿ ಗೆಲ್ಲುವ ಅಸಾಮಿಗಳು ನಾವಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದೇಕೆ?

ಕೊಲೊಂಬೊ: ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡವನ್ನೊಳಗೊಂಡ ಟಿ 20 ಸರಣಿ ಇಂದಿನಿಂದ ...

news

ರಾಬಿನ್ ಉತ್ತಪ್ಪ ಬಿಟ್ಟು ದಿನೇಶ್ ಕಾರ್ತಿಕ್ ರನ್ನು ಕೆಕೆಆರ್ ಕ್ಯಾಪ್ಟನ್ ಮಾಡಿದ ಶಾರುಖ್ ಖಾನ್ ಹೇಳಿದ್ದೇನು?

ಮುಂಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡಕ್ಕೆ ಹೊಸದಾಗಿ ದಿನೇಶ್ ಕಾರ್ತಿಕ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ...

news

ಟೀ ಬ್ರೇಕ್ ವೇಳೆ ಡೇವಿಡ್ ವಾರ್ನರ್-ಕ್ವಿಂಟನ್ ಡಿ ಕಾಕ್ ನಡುವೆ ನಡೆಯಿತು ವಾರ್!

ಡರ್ಬನ್: ದ.ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಡರ್ಬನ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಲ್ಲಿ ...

Widgets Magazine
Widgets Magazine