ಕೆಎಲ್ ರಾಹುಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್!

ಜೊಹಾನ್ಸ್ ಬರ್ಗ್, ಶುಕ್ರವಾರ, 12 ಜನವರಿ 2018 (07:49 IST)

ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರತಿಭಾವಂತ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಅವಕಾಶ ನೀಡದ ವಿರಾಟ್ ಕೊಹ್ಲಿ ನಿರ್ಧಾರ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಇದೀಗ ಸೋತ ಮೇಲೆ ಬುದ್ಧಿ ಬಂತು ಎನ್ನುವಂತೆ ಕೊಹ್ಲಿ ದ್ವಿತೀಯ ಟೆಸ್ಟ್ ಗೆ ರಾಹುಲ್ ಗೆ ಅವಕಾಶ ನೀಡಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.
 

ಈ ಬಗ್ಗೆ ತಂಡದ ಮೂಲಗಳನ್ನು ಆಧರಿಸಿ ಆಂಗ್ಲ ಮಾಧ್ಯವೊಂದು ವರದಿ ಮಾಡಿದ್ದು, ಶನಿವಾರದಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮುರಳಿ ವಿಜಯ್ ಗೆ ಕೊಕ್ ಕೊಟ್ಟು ರಾಹುಲ್ ಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
 
ಮುರಳಿ ವಿಜಯ್ ಫೀಲ್ಡಿಂಗ್ ನಲ್ಲೂ ಚುರುಕಾಗಿ ಕೆಲಸ ಮಾಡದೇ ಇರುವುದರಿಂದ ಅವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಲೆಫ್ಟ್ ಮತ್ತು ರೈಟ್ ಕಾಂಬಿನೇಷನ್ ಬೇಕು ಎನ್ನುವ ಕಾರಣಕ್ಕೆ ಎಡಗೈ ಆಟಗಾರ ಧವನ್ ರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗದರೆ ವಿಜಯ್ ಸ್ಥಾನ ಬಿಟ್ಟುಕೊಡಬೇಕಾದೀತು.  ಅಂತೂ ಕೊನೆಗೂ ಕೆಎಲ್ ರಾಹುಲ್ ಗೆ ತಂಡದಲ್ಲಿ ಸ್ಥಾನ ಸಿಗುವ ಸುದ್ದಿ ಕನ್ನಡಿಗ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಾಹುಲ್ ದ್ರಾವಿಡ್ ಅವರಿಗೆ ಟಾಪ್ ಲೆಸ್ ಫೋಟೋದ ಮೂಲಕ ಬರ್ತ್ ಡೇ ವಿಶ್ ಮಾಡಿದಳಂತೆ ಈ ನಟಿ!

ಬೆಂಗಳೂರು : ನಟಿ ಪೂನಂ ಪಾಂಡೆ ಅವರು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಹುಟ್ಟು ...

news

ರಾಹುಲ್ ದ್ರಾವಿಡ್ ಬರ್ತ್ ಡೇಗೆ ಪುತ್ರ ಸಮಿತ್ ನೀಡಿದ ಪರ್ಫೆಕ್ಟ್ ಗಿಫ್ಟ್ ಏನು ಗೊತ್ತಾ?!

ಬೆಂಗಳೂರು: ಅಪ್ಪನಿಗೆ ತಕ್ಕ ಮಗ ಎನ್ನುವುದನ್ನು ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ...

news

ದ.ಆಫ್ರಿಕಾ ಸರಣಿಗೆ ತಯಾರಾಗಲು ಬಿಸಿಸಿಐ ಮಾಡಿದ್ದ ಯೋಜನೆಯನ್ನು ತಿರಸ್ಕರಿಸಿದ್ದ ವಿರಾಟ್ ಪಡೆ!

ಮುಂಬೈ: ದ.ಆಫ್ರಿಕಾದಲ್ಲಿರುವ ಟೀಂ ಇಂಡಿಯಾ ಈಗ ಅಭ್ಯಾಸಕ್ಕೆ ಸಮಯ ಸಿಕ್ಕಿರಲಿಲ್ಲ, ವ್ಯವಸ್ಥೆಯಿಲ್ಲ ...

news

ಟೀಂ ಇಂಡಿಯಾ ಗಾಯದ ಮೇಲೆ ಬರೆ ಎಳೆದ ದ.ಆಫ್ರಿಕಾ ಕ್ರಿಕೆಟಿಗ!

ಸೆಂಚೂರಿಯನ್: ಭಾರತ-ದ.ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಈಗಲೂ ಟೀಂ ಇಂಡಿಯಾ ಗೆಲ್ಲಬಹುದು ಎಂಬ ...

Widgets Magazine
Widgets Magazine