ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾಯುವ ಪರಿಸ್ಥಿತಿಗೆ ಮನೀಶ್ ಪಾಂಡೆಗೆ ಬೇಸರ

ಸೆಂಚೂರಿಯನ್, ಶುಕ್ರವಾರ, 23 ಫೆಬ್ರವರಿ 2018 (08:21 IST)

ಸೆಂಚೂರಿಯನ್: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಪ್ರತಿಭಾವಂತರ ಗುಂಪೇ ಇದೆ. ಪ್ರತಿಭೆಯಿದ್ದೂ ಅವಕಾಶ ಸಿಗುವುದು ಅಷ್ಟು ಸುಲಭವಿಲ್ಲ. ಈ ಪರಿಸ್ಥಿತಿ ಬಗ್ಗೆ ಕನ್ನಡಿಗ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಬೇಸರ ವ್ಯಕ್ತಪಡಿಸಿದ್ದಾರೆ.
 

ವಿಶೇಷವಾಗಿ ಈ ಸರಣಿಯಲ್ಲಿ ಅವಕಾಶಕ್ಕಾಗಿ ತುಂಬಾ ಕಾಯಬೇಕಾಯಿತು. ಅದರಲ್ಲಿ ಅಚ್ಚರಿಯೇನೂ ಇಲ್ಲ. ಭಾರತ ತಂಡಕ್ಕಾಗಿ ಆಡಲು ಸಾಕಷ್ಟು ಪ್ರತಿಭಾವಂತರ ಗುಂಪೇ ಕಾಯುತ್ತಿದೆ. ಹೀಗಾಗಿ ಈ ತಂಡಕ್ಕೆ ಆಡಲು ಅವಕಾಶ ಸಿಗುವುದು ಸುಲಭದ ಕೆಲಸವಲ್ಲ.
 
ಅದರಲ್ಲೂ ನಾನು 4 ಅಥವಾ 5ನೇ ಕ್ರಮಾಂಕದಲ್ಲಿ ಆಡುತ್ತೇನೆ. ಟೀಂ ಇಂಡಿಯಾ ಅಗ್ರ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶಿಖರ್ ಧವನ್ ರಂತಹ ಆಟಗಾರರು ಬಹುಭಾಗ ಆಟ ಮುಗಿಸಿರುತ್ತಾರೆ. ಹೀಗಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಅವಕಾಶ ಸಿಗುವುದೇ ಕಡಿಮೆ. ಹಾಗಿದ್ದರೂ ನಾನು ಆಡುವ ಸ್ಥಾನದಲ್ಲಿ ಹಿಂದೆ ಯುವರಾಜ್, ಸುರೇಶ್ ರೈನಾರಂತಹ ಹಿರಿಯ ಆಟಗಾರರು ಆಡಿದ ಕ್ರಮಾಂಕ. ಅವರ ಸ್ಥಾನವನ್ನು ತುಂಬುವುದು ಸುಲಭದ ಕೆಲಸವಲ್ಲ ಎಂದು ಮನೀಶ್ ಪಂದ್ಯದ ನಂತರ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪತಿ ಕೊಹ್ಲಿ ಅಪ್ಪುಗೆಯ ಫೋಟೋ ನೋಡಿ ಕರಗಿದ ಅನುಷ್ಕಾ ಶರ್ಮಾ ಹೇಳಿದ್ದೇನು ಗೊತ್ತಾ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ತಮ್ಮ ಮುದ್ದಿನ ಮಡದಿ ಅನುಷ್ಕಾರನ್ನು ...

news

ಮನೀಶ್ ಪಾಂಡೆ ಮೇಲೆ ಮೈದಾನದಲ್ಲೇ ಕೂಗಾಡಿದ ಧೋನಿ!

ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತಕ್ಕೆ ಬ್ಯಾಟಿಂಗ್ ...

news

ವಿರಾಟ್ ಕೊಹ್ಲಿ ಕೈ ತಪ್ಪಿದ ದಾಖಲೆ

ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು 6 ವಿಕೆಟ್ ಗಳಿಂದ ಸೋತ ಟೀಂ ...

news

ತನ್ನ ತಪ್ಪಿಗೆ ತಾನೇ ಬೆಲೆ ತೆತ್ತ ವಿರಾಟ್ ಕೊಹ್ಲಿ

ಸೆಂಚೂರಿಯನ್: ಗೆಲುವಿನ ಹುಮ್ಮಸ್ಸಿನಲ್ಲಿ ಮೈ ಮರೆತಿದ್ದ ಭಾರತಕ್ಕೆ ದ.ಆಫ್ರಿಕಾ ದ್ವಿತೀಯ ಟಿ20 ಪಂದ್ಯದಲ್ಲಿ ...

Widgets Magazine
Widgets Magazine