ಪಾಕ್ ಬಗ್ಗೆ ಏನೋ ಹೇಳಲು ಹೋಗಿ ಜಾಡಿಸಿಕೊಂಡ ಶೊಯೇಬ್ ಅಖ್ತರ್

Karachi, ಬುಧವಾರ, 9 ಆಗಸ್ಟ್ 2017 (09:16 IST)

Widgets Magazine

ಕರಾಚಿ: ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ತಮ್ಮ ದೇಶದ ಬಗ್ಗೆ ಹೊಗಳಲು ಹೋಗಿ ಟ್ವಿಟರ್ ನಲ್ಲಿ ಸರಿಯಾಗಿ ಜಾಡಿಸಿಕೊಂಡಿದ್ದಾರೆ.


 
ಪಾಕಿಸ್ತಾನದಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ದರ್ಶನ್ ಲಾಲ್ ಎಂಬ ಹಿಂದೂ ಧರ್ಮಕ್ಕೆ ಸೇರಿದ ಸಂಸದರೂ ಸಚಿವರಾಗಿದ್ದಾರೆ. ಇದನ್ನೇ ತಮ್ಮ ಟ್ವಿಟರ್ ನಲ್ಲಿ ಉಲ್ಲೇಖಿಸಿ ಶೊಯೇಬ್ ಪೇಚಿಗೆ ಸಿಲುಕಿದ್ದಾರೆ.
 
‘ದರ್ಶನ್ ಲಾಲ್ ಎಂಬ ಹಿಂದೂ ವ್ಯಕ್ತಿ ಇದೀಗ ನಮ್ಮ ಸರ್ಕಾರದಲ್ಲಿ ಸಚಿವರು. ನಮ್ಮದು ಜಾತ್ಯಾತೀತ ರಾಷ್ಟ್ರ ಎಂದು ಹೇಳುವ ವಿನಮ್ರ ರೀತಿಯಿದು’ ಎಂದು ಫೋಟೋ ಸಮೇತ ಶೊಯೇಬ್ ಟ್ವೀಟ್ ಮಾಡಿದ್ದರು. ಆದರೆ ಫೋಟೋದಲ್ಲಿ ದರ್ಶನ್ ಲಾಲ್ ಬದಲು ಪ್ರಧಾನಿ ಹುಸೈನ್ ಫೋಟೋ ಮಾತ್ರ ಹಾಕಿದ್ದರು.
 
ಇದಕ್ಕೆ ಕೆಲವು ಅಭಿಮಾನಿಗಳು ಶೊಯೇಬ್ ರನ್ನು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಪಾಕಿಸ್ತಾನದಂತಹ ಪಕ್ಕಾ ಮುಸ್ಲಿಂ ರಾಷ್ಟ್ರವನ್ನು ಜಾತ್ಯಾತೀತ ರಾಷ್ಟ್ರ ಎಂದಿದ್ದಕ್ಕೆ  ಜಾಡಿಸಿದ್ದಾರೆ. ಮತ್ತೆ ಕೆಲವರು ಕ್ರಿಕೆಟ್ ಬಗ್ಗೆ ಮಾತ್ರ ತಲೆಕೆಡಿಸು ಎಂದು ಸಲಹೆ ನೀಡಿದ್ದಾರೆ.
 
ಇದನ್ನೂ ಓದಿ.. ‘ದೃಶ್ಯಗಳಿಗೆ ಕತ್ತರಿ ಹಾಕಲು ನಾನು ಪೋರ್ನ್ ಸಿನಿಮಾ ಮಾಡಿಲ್ಲ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ನಂಬರ್ ಒನ್ ಸ್ಥಾನಕ್ಕೇರಿದ ರವೀಂದ್ರ ಜಡೇಜಾ

ಟೀಮ್ ಇಂಡಿಯಾದ ಅನುಭವಿ ಆಲ್ರೌಂಡರ್ ರವಿಂದ್ರ ಜಡೇಜಾ ಐಸಿಸಿ ಟೆಸ್ಟ್ ಆಲ್ರೌಂಡರ್ ಶ್ರೇಯಾಂಕದಲ್ಲಿ ಇದೇ ಮೊದಲ ...

news

ರಾಖಿ ಕಟ್ಟಿಸಿಕೊಂಡಿದ್ದೇ ತಪ್ಪಾಯ್ತು..! ಇರ್ಫಾನ್ ಪಠಾಣ್`ಗೆ ಟೀಕೆಗಳ ಸುರಿಮಳೆ

ಇತ್ತೀಚೆಗೆ ಪತ್ನಿ ಉಗುರು ಬಣ್ಣ ಹಾಕಿಕೊಂಡಿದ್ದಕ್ಕೆ ಆನ್`ಲೈನ್`ನಲ್ಲಿ ಟೀಕೆಗೆ ಗುರಿಯಾಗಿದ್ದ ವೇಗಿ ...

news

ನಿಷೇಧ ಶಿಕ್ಷೆಗೆ ರವೀಂದ್ರ ಜಡೇಜಾ ಕಾವ್ಯಾತ್ಮಕ ಪ್ರತಿಕ್ರಿಯೆ

ಕೊಲೊಂಬೊ: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ತಮಗೆ ಐಸಿಸಿ ವಿಧಿಸಿರುವ ಒಂದು ಟೆಸ್ಟ್ ಪಂದ್ಯದ ...

news

ಪಾಕಿಸ್ತಾನದ ವಿರಾಟ್ ಕೊಹ್ಲಿ ಎಂದಿದ್ದಕ್ಕೆ ಪಾಕ್ ಬ್ಯಾಟ್ಸ್ ಮನ್ ಉತ್ತರ ಹೇಗಿತ್ತು?

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟ್ಸ್ ಮನ್ ಬಾಬರ್ ಅಜಮ್ ರನ್ನು ವಿರಾಟ್ ಕೊಹ್ಲಿಗೆ ...

Widgets Magazine