ಕೊಹ್ಲಿ ಎಂದರೆ ಯಾರು? ಎಂದು ಕೇಳಿದ್ದಕ್ಕೆ ಆಕೆಗೆ ಸಿಕ್ಕ ಉತ್ತರ ನೋಡಿ!

ಕರಾಚಿ, ಸೋಮವಾರ, 11 ಸೆಪ್ಟಂಬರ್ 2017 (08:12 IST)

ಕರಾಚಿ: ವಿರಾಟ್ ಕೊಹ್ಲಿ ಎಂಬ ಹೆಸರು ಕೇಳದವರು ಯಾರಿದ್ದಾರೆ? ಹಾಗಂತ ನಾವಂದುಕೊಂಡಿದ್ದರೆ ತಪ್ಪು. ಪಾಕಿಸ್ತಾನದ ಯುವತಿಯೊಬ್ಬರು ಕೊಹ್ಲಿ ಯಾರು ಎಂದು ಕೇಳಿದ್ದಾಳೆ.


 
ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ತಮಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕ್ರಿಕೆಟ್ ಕಲಿಸಿದ ಎಲ್ಲಾ ಗುರುಗಳಿಗೆ ವಂದನೆ ಸಲ್ಲಿಸಿದ್ದರು. ಇದರಲ್ಲಿ ಪಾಕ್ ಕ್ರಿಕೆಟಿಗರ ಹೆಸರೂ ಇತ್ತು. ಅದನ್ನು ನೋಡಿ ಅದೆಷ್ಟೋ ಪಾಕ್ ಅಭಿಮಾನಿಗಳು ಕೊಹ್ಲಿಗೆ ಧನ್ಯವಾದ ಸಲ್ಲಿಸಿದ್ದರು.
 
ಆದರೆ ಯುವತಿಯೊಬ್ಬಳು ‘ದಯವಿಟ್ಟು ಯಾರಾದರೂ ಹೇಳಿ? ಯಾರು ಈ ಜಂಟಲ್ ಮ್ಯಾನ್?’ ಎಂದು ಪ್ರಶ್ನಿಸಿದ್ದಳು. ಅದಕ್ಕೆ ಉತ್ತರಿಸಿದ ಇನ್ನೊಬ್ಬ ಪಾಕ್ ನಾಗರಿಕ  ಭಾರತೀಯರು ಹೆಮ್ಮೆ ಪಡುವಂತೆ ವಿವರಿಸಿದ್ದಾನೆ.
 
‘ಕೊಹ್ಲಿ ಎಂದರೆ ಪ್ರಸಕ್ತ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ. ವಿಶ್ವದ ದಿಗ್ಗಜ ಬ್ಯಾಟ್ಸ್ ಮನ್. ಸದ್ಯಕ್ಕೆ ಉಳಿದೆಲ್ಲಾ ಕ್ರಿಕೆಟಿಗರ ಹೆಸರು ಈತನ ನಂತರ ಬರುತ್ತದೆ’ ಎಂದು ಆ ಅಭಿಮಾನಿ ಉತ್ತರಿಸಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ವಿರಾಟ್ ಕೊಹ್ಲಿ ಟ್ವಿಟರ್ ಪಾಕ್ ಅಭಿಮಾನಿಗಳು ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Twitter Virat Kohli Team India Cricket News Sports News Pak Cricket Fans

ಕ್ರಿಕೆಟ್‌

news

ಆಸೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಅಶ್ವಿನ್, ಜಡೇಜಾಗೆ ಮತ್ತೆ ರೆಸ್ಟ್

ಸೆಪ್ಟೆಂಬರ್ 17ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ 15 ಸದಸ್ಯರ ಟೀಮ್ ...

news

ಆಸೀಸ್ ಸರಣಿಗೆ ರವಿಚಂದ್ರನ್ ಅಶ್ವಿನ್ ಗೇ ಕೊಕ್ ಕೊಡುತ್ತಾ ಬಿಸಿಸಿಐ?

ಮುಂಬೈ: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ರವಿಚಂದ್ರನ್ ಅಶ್ವಿನ್ ...

news

‘ಟೀಂ ಇಂಡಿಯಾ ಕ್ರಿಕೆಟಿಗರಿಗೆ ರಜಾ ಕೊಡಿ’

ಮುಂಬೈ: ಟೀಂ ಇಂಡಿಯಾ ಆಟಗಾರರು ಬಿಡುವಿಲ್ಲದೇ ಕ್ರಿಕೆಟ್ ಆಡುತ್ತಿದ್ದಾರೆ. ರಿಲ್ಯಾಕ್ಸ್ ಆಗಲು ಅವರಿಗೂ ...

news

ಲವ್ ಅಫೇರ್ ಬಗ್ಗೆ ಬಾಯ್ಬಿಟ್ಟ ಹಾರ್ದಿಕ್ ಪಾಂಡ್ಯ

ಮುಂಬೈ: ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ರೊಮ್ಯಾಂಟಿಕ್ ಟ್ವಿಟರ್ ...

Widgets Magazine