ವೇತನಕ್ಕಾಗಿ ಜಿಟಿ20 ಲೀಗ್ ವಿರುದ್ಧ ಬಂಡಾಯವೆದ್ದ ಕ್ರಿಕೆಟಿಗ ಯುವರಾಜ್ ಸಿಂಗ್ ಬಳಗ

ಮುಂಬೈ, ಶುಕ್ರವಾರ, 9 ಆಗಸ್ಟ್ 2019 (10:55 IST)

ಮುಂಬೈ: ಗ್ಲೋಬಲ್ ಟಿ20 ಕ್ರಿಕೆಟ್ ಲೀಗ್ ನಲ್ಲಿ ಆಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಅವರ ತಂಡದ ಸದಸ್ಯರು ಬಾಕಿ ವೇತನಕ್ಕಾಗಿ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಬಂದಿದೆ.


 
ಕೆನಡಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಟೊರೆಂಟೋ ನ್ಯಾಷನಲ್ಸ್ ತಂಡದ ನಾಯಕರಾಗಿದ್ದಾರೆ. ಇದೀಗ ಟೊರೆಂಟೋ ಮತ್ತು ಮಾಂಟ್ರಿಯಾಲ್ ಟೈಗರ್ಸ್ ನಡುವಿನ ಪಂದ್ಯಕ್ಕೆ ಮೊದಲು ಹೋಟೆಲ್ ರೂಂನಲ್ಲೇ ಉಳಿದುಕೊಂಡು ಬಾಕಿ ವೇತನ ಸಮಸ್ಯೆ ಬಗೆಹರಿಸುವಂತೆ ಯುವಿ ಮತ್ತು ಬಳಗ ಪ್ರತಿಭಟನೆ ನಡೆಸಿದೆ ಎನ್ನಲಾಗಿದೆ.
 
ಇದರಿಂದಾಗಿಯೇ ಈ ಎರಡೂ ತಂಡಗಳ ನಡುವಿನ ಪಂದ್ಯ ಎರಡು ಗಂಟೆಗಳಷ್ಟು ತಡವಾಗಿ ಆರಂಭವಾಯಿತು. ಕೊನೆಗೆ ಫ್ರಾಂಚೈಸಿಗಳು, ಜಿ20 ಲೀಗ್ ವ್ಯವಸ್ಥಾಪಕರು ಸಭೆ ನಡೆಸಿ ಭರವಸೆ ನೀಡಿದ ಬಳಿಕವೇ ಪಂದ್ಯವಾಡಲು ಆಟಗಾರರು ತೆರಳಿದರು ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕಾಶ್ಮೀರದಲ್ಲಿ ಧೋನಿಗೆ ‘ಬೂಮ್ ಬೂಮ್ ಅಫ್ರಿದಿ’ ಘೋಷಣೆಯ ಸ್ವಾಗತ

ಜಮ್ಮು ಕಾಶ್ಮೀರ: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಕಾಶ್ಮೀರಕ್ಕೆ ತೆರಳಿರುವ ಕ್ರಿಕೆಟಿಗ ಧೋನಿಗೆ ...

news

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕೈ ಕೊಟ್ಟ ಟೀಂ ಇಂಡಿಯಾ ಕೋಚ್ ಹುದ್ದೆ ಆಕಾಂಕ್ಷಿ ಮೈಕ್ ಹಸನ್

ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿದ್ದ ಮೈಕ್ ಹಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ...

news

ಭಾರತ-ವಿಂಡೀಸ್ ಮೊದಲ ಏಕದಿನ ಮಳೆಯಿಂದಾಗಿ ವಾಶ್ ಔಟ್

ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಿನ್ನೆ ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ...

news

ಮೂರು ವಿಶ್ವ ದಾಖಲೆ ಮಾಡುವ ಹೊಸ್ತಿಲಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ನಾಯಕ ...