ಗರ್ಭಿಣಿಯನ್ನು ಕತ್ತು ಹಿಸುಕಿ ಕೊಲೆಗೈದ ಪ್ರಿಯತಮ!

ಕರ್ನೂಲ್, ಸೋಮವಾರ, 4 ಡಿಸೆಂಬರ್ 2017 (14:56 IST)

ಮದುವೆ ಮಾಡಿಕೊಳ್ಳುವಂತೆ ಕೇಳಿದ್ದಕ್ಕೆ ಗರ್ಭಿಣಿಯನ್ನು ಪ್ರಿಯತಮ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಡೋನ್ ಮಂಡಲದ ಯರಗುಂಟಾದಲ್ಲಿ ಈ ಘಟನೆ ನವೆಂಬರ್ 20ರಂದು ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿರುವ ರಮಿಜಬಿ ಅವರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪ್ರಕರಣ ಬೆಳಕು ಕಂಡಿದೆ.

ಪತಿಯೊಂದಿಗೆ ವಿಚ್ಚೇಧನ ಪಡೆದಿರುವ ರಮಿಜಬಿ ತನ್ನ ಮಗನ ಜೊತೆ ಪೋಷಕರೊಂದಿಗೆ ವಾಸವಿದ್ದಾಳೆ. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಮಿಜಬಿಗೆ ಮಾಲೀಕನ ಮಗನೊಂದಿಗೆ ಪ್ರೇಮಾಂಕುರವಾಗಿ ಹೊಂದಿದ್ದರು.

ಈ ಹಿಂದೆಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮದುವೆ ಪ್ರಕರಣ ಮಾತುಕತೆಯ ಮೂಲಕ ಬಗೆಹರಿದಿತ್ತು. ಆದರೆ, ಪುನಃ ದೈಹಿಕ ಸಂಬಂಧ ಬೆಳೆಸಿದ್ದರಿಂದ ಆಕೆ ಗರ್ಭಿಣಿಯಾಗಿದ್ದಳು. ವಿಚಾರ ತಿಳಿದ ನಂತರ ಮದುವೆ ಪ್ರಸ್ತಾಪ ಮಾಡಿದ್ದ ಗರ್ಭಿಣಿಯನ್ನು ಅರಣ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ ಆರೋಪಿ ರಶೀದ್‍‍ ಕತ್ತು ಹಿಸುಕಿ ಕೊಲೆಗೈದಿದ್ದಾನೆ.

ಮಗಳು ಕಾಣೆಯಾದ ಬಗ್ಗೆ ಪೋಷಕರು ದೂರು ನೀಡಿದ ನಂತರ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಸ್ಥಳದಲ್ಲೇ ಶವಪರೀಕ್ಷೆ ನಡೆಸಿ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೊದಲ ರಾತ್ರಿಯೇ ಪತ್ನಿಯೊಂದಿಗೆ ರಾಕ್ಷಸನಂತೆ ನಡೆದುಕೊಂಡ ಪತಿ!

ಮದುವೆ ಮಾಡಿಕೊಂಡ ನಂತರ ಮೊದಲ ರಾತ್ರಿಯಲ್ಲೇ ಪತ್ನಿಯೊಂದಿಗೆ ರಾಕ್ಷಸನಂತೆ ನಡೆದುಕೊಂಡಿರುವ ಪತಿ, ಪತ್ನಿಗೆ ...

news

ಕರಂದ್ಲಾಜೆ, ಪ್ರತಾಪ್ ಸಿಂಹರಿಂದ ನನ್ನ ಪತ್ನಿ, ಕುಟುಂಬದ ವಿರುದ್ಧ ಹೇಳಿಕೆ: ದಿನೇಶ್ ಗುಂಡೂರಾವ್

ಬೆಂಗಳೂರು: ಬಿಜೆಪಿ ಸಂಸರು ಮನಬಂದಂತೆ ಅಸಭ್ಯ ಹೇಳಿಕೆ ನೀಡುವವರಿಗೆ ಏನೆಂದು ಪ್ರತಿಕ್ರಿಯೆ ನೀಡುವುದು ಎಂದು ...

news

ಎಐಸಿಸಿ ಅಧ್ಯಕ್ಷ ಸ್ಥಾನರಾಹುಲ್‍ ಗಾಂಧಿಗೆ: ಔರಂಗಜೇಬನ ಆಡಳಿತ ಆರಂಭ- ಮೋದಿ

ಕಾಂಗ್ರೆಸ್ ಯುವ ನೇತಾರ ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಕಾಂಗ್ರೆಸ್‍‍ ಪಕ್ಷ ...

news

ಅಮಿತ್ ಶಾ ಮೆಚ್ಚಿಸಲು ಉದ್ಧಟತನ ತೋರಿದ ಪ್ರತಾಪ ಸಿಂಹ : ಸಿಎಂ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೆಚ್ಚಿಸಲು ಮೈಸೂರು ಸಂಸದ ಪ್ರತಾಪ್ ಸಿಂಹ್ ಇಂತಹ ...

Widgets Magazine