ಚಿತ್ರದುರ್ಗದ ರ್ಯಾಲಿಯ ವೇಳೆ ಪ್ರಧಾನಿ ಮೋದಿ ತಂದ ಟ್ರಂಕ್ ರಹಸ್ಯ ಬಯಲು

ಚಿತ್ರದುರ್ಗ, ಸೋಮವಾರ, 15 ಏಪ್ರಿಲ್ 2019 (09:46 IST)

: ರ್ಯಾಲಿ ವೇಳೆ ಪ್ರಧಾನಿ ಮೋದಿ ಹೆಲಿಕಾಪ್ಟರ್ ನಿಂದ ಇನ್ನೋವಾ ಕಾರಿಗೆ ತುಂಬಿಸಿದ ಟ್ರಂಕ್ ನಲ್ಲಿ ಏನಿದೆ ಎಂಬ ರಹಸ್ಯ ಇದೀಗ ಬಯಲಾಗಿದೆ.


ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 9ರಂದು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದು, ಅವರಿದ್ದ ಹೆಲಿಕಾಪ್ಟರ್ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಬಂದಿಳಿದ ವೇಳೆ ಅದರಲ್ಲಿದ್ದ ಟ್ರಂಕ್ ಒಂದನ್ನು ಮೂರ್ನಾಲ್ಕು ಮಂದಿ ಹೊತ್ತುಕೊಂಡು ಹೋಗಿ ಅಲ್ಲಿಯೇ ನಿಲ್ಲಿಸಿದ್ದ ಇನ್ನೋವಾ ಒಂದರಲ್ಲಿ ಇಟ್ಟಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚುನಾವಣೆಯಲ್ಲಿ ಬಳಸಲು ಈ ಟ್ರಂಕ್ ನಲ್ಲಿ ಅಪಾರ ಹಣವನ್ನು ತರಲಾಗಿದೆ ಎಂದು ಆರೋಪಿಸಿ  ಕಾಂಗ್ರೆಸ್ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿತ್ತು.


ಆದರೆ ಇದೀಗ ಆ ಟ್ರಂಕ್ ನಲ್ಲಿ ಭದ್ರತೆಗೆ ಸಂಬಂಧಿಸಿದ ಸಲಕರಣೆಗಳು ಇದ್ದವು. ಆ ಕಾರು ಕೂಡ ಬೆಂಗಾವಲು ಪಡೆಯ ವಾಹನವಾಗಿತ್ತು. ಈ ಕುರಿತು ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿರುವುದಾಗಿ ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ಡಾ. ಕೆ. ಅರುಣ್ ಟ್ರಂಕ್ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಕೈ ನಾಯಕ ರಾಜಣ್ಣ ಪರೋಕ್ಷವಾಗಿ ನಮಗೆ ಬೆಂಬಲ ನೀಡುತ್ತಾರೆ - ಬಿಜೆಪಿ ನಾಯಕರಿಂದ ಅಚ್ಚರಿಯ ಹೇಳಿಕೆ

ತುಮಕೂರು : ಕಾಂಗ್ರೆಸ್ ಮಾಜಿ ಶಾಸಕ ಕೆಎನ್ ರಾಜಣ್ಣ ಅವರು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಮಗೆ ಬೆಂಬಲ ...

news

ಸುಮಲತಾ ನನ್ನ ಹೆಸರು ಬಳಸಿಕೊಂಡರೆ ತಕ್ಕ ಶಾಸ್ತಿ ಮಾಡಿ ಎಂದ ಸಿದ್ಧರಾಮಯ್ಯ

ಮೈಸೂರು : ಮಂಡ್ಯ ಲೋಕಸಭೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನನ್ನ ಹೆಸರು ಬಳಸಿಕೊಂಡರೆ ತಕ್ಕ ಶಾಸ್ತಿ ...

news

ಇಂದು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಲಿರುವವರು ಯಾರು ಗೊತ್ತಾ?

ಮಂಡ್ಯ: ಮಂಡ್ಯ ಚುನಾವಣೆ ರಣ ಕಣ ಕೊನೇ ಕ್ಷಣದ ರಂಗೇರಿದ್ದು, ಇಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ...

news

ಯಶ್, ದರ್ಶನ್ ಗೆ ಟಾಂಗ್ ನೀಡಿದ MLC

ಮಂಡ್ಯದಲ್ಲಿ ನಮಗೆ ಹಿನ್ನಡೆ ಯಾಗುವ ಪ್ರಶ್ನೆಯೇ ಇಲ್ಲ. ನಾನು ಒಂದು ನ್ಯೂಸ್ ಚಾನೆಲ್ ಎಪಿಸೋಡ್ ಬಗ್ಗೆ ಕೇಳಿದ ...

Widgets Magazine