ಸಂವಿಧಾನ ಸುಡುತ್ತೇವೆ ಎನ್ನುವ ಬಿಜೆಪಿಯವರಿಗೆ ಬೆಂಬಲ ಸೂಚಿಸುತ್ತಿರುವ ನಿಮಗೆ ನಾಚಿಕೆಯಾಗಲ್ವಾ- ಸ್ಪೀಕರ್ ವಿರುದ್ಧ ಮುನಿಯಪ್ಪ ವಾಗ್ದಾಳಿ

ಕೋಲಾರ, ಮಂಗಳವಾರ, 16 ಏಪ್ರಿಲ್ 2019 (09:40 IST)

: ಸಂಸದ, ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಅವರು ವಿರೋಧಿ ಬಣದ ದಲಿತ ಮುಖಂಡರು ಹಾಗೂ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ನಗರದಲ್ಲಿ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ಸ್ಥಾನದಲ್ಲಿ ಇದ್ದುಕೊಂಡು ಸರ್ಕಾರನ್ನು ಹಾಗೂ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡುತ್ತೀರಿ. ನಿಮಗೇನಾದರೂ ತಾಕತ್ತು ಇದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಕಣಕ್ಕೆ ಬನ್ನಿ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.


ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು 30 ವರ್ಷ ಜೀವನ ಮಾಡಿದ್ದೀರಿ. ಆದರೆ ಈಗ ಸಂವಿಧಾನ ಸುಡುತ್ತೇವೆ ಎನ್ನುವ ಬಿಜೆಪಿಯವರಿಗೆ ಸೂಚಿಸುತ್ತಿರುವ ನಿಮಗೆ ನಾಚಿಕೆಯಾಗಲ್ವಾ? ನೀವು ಹೋರಾಟಗಾರರಾ? ಸಮಾಜ ಸೇವಕರಾ? ಸತ್ಯಕ್ಕೆ ಕಾಲವಿದೆ. ಈ ನೀಚರಿಗೆ ಜನ ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

 



ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಮತ್ತೆ ಜೆಡಿಎಸ್ ನಾಯಕರ ಆಪ್ತರ ಮೇಲೆ ಐಟಿ ದಾಳಿ

ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಲೇ ಜೆಡಿಎಸ್ ನಾಯಕರು ಮತ್ತು ಅವರ ಆಪ್ತರ ಮನೆಯ ...

news

ಸುಮಲತಾ ಬಿಜೆಪಿ ಸೇರಲು ಚರ್ಚೆ ನಡೆಸಿದ ವಿಡಿಯೋ ರಿಲೀಸ್ ಮಾಡುತ್ತೇವೆ-ಹೊಸ ಬಾಂಬ್ ಸಿಡಿಸಿದ ಪುಟ್ಟರಾಜು

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಬಿಜೆಪಿ ಸೇರಲು ಸಿದ್ಧತೆ ...

news

ಯಾವನೋ ಅವನು ಯಶ್? ರಾಕಿಂಗ್ ಸ್ಟಾರ್ ವಿರುದ್ಧ ಸಿಎಂ ಕುಮಾರಸ್ವಾಮಿ ಏಕವಚನದ ವಾಗ್ದಾಳಿ

ಮಂಡ್ಯ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬಹಿರಂಗ ಪ್ರಚಾರದ ಅಂತಿಮ ದಿನವಾದ ನಿನ್ನೆ ಮಂಡ್ಯ ರಣ ಕಣ ...

news

ಸಿಎಂ ಮತ್ತೆ ಕಣ್ಣೀರು ಹಾಕಿದ್ದು ಏಕೆ?

ಚುನಾವಣೆ ಹೊಸ್ತಿಲಲ್ಲಿ ಅದೂ ಪ್ರಚಾರದ ವೇಳೆ ಭಾವುಕರಾದ ಸಿಎಂ ಕುಮಾರಸ್ವಾಮಿ ಮತ್ತೆ ಕಣ್ಣೀರು ಹಾಕಿದ್ದಾರೆ.

Widgets Magazine