ನಿಮ್ಮ ಥೈರಾಯ್ಡ್ ಆರೋಗ್ಯಕ್ಕೆ ಉತ್ತಮ ಆಹಾರಗಳು ಯಾವುವು ಎಂದು ನಿಮಗೆ ತಿಳಿದಿದೆಯೇ?

ಬೆಂಗಳೂರು, ಮಂಗಳವಾರ, 21 ಆಗಸ್ಟ್ 2018 (17:23 IST)

ದಿನನಿತ್ಯ ಮನುಷ್ಯ ಹೊಸ ಹೊಸ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಹೆಸರುಗಳೇ ಗೊತ್ತಿಲ್ಲದ ಸಾಂಕ್ರಾಮಿಕ ರೋಗಗಳು, ಭೀಕರ ಖಾಯಿಲೆಗಳು ಮನುಷ್ಯನ ದೇಹವನ್ನು ಆಕ್ರಮಿಸುತ್ತಿದೆ. ಅಂತಹ ಖಾಯಿಲೆಗಳಲ್ಲಿ ಈ ಥೈರಾಯ್ಡ್ ಕೂಡಾ ಒಂದು ಎಂದು ಹೇಳಬಹುದು.

ದೇಹದಲ್ಲಿ ಥೈರಾಯ್ಡ್ ಹಾರ್ಮೋನ್‌ನಲ್ಲಿ ವ್ಯತ್ಯಾಸವಾದಾಗ ಈ ರೋಗ ಕಂಡುಬರುತ್ತದೆ. ಈ ಹಾರ್ಮೋನ್‌ಗಳು ತುಂಬಾ ಚಟುವಟಿಕೆಯಿಂದ ಕೂಡಿದ್ದರೆ ಹೈಪರ್ ಥೈರಾಯ್ಡ್ ಮತ್ತು ಕಡಿಮೆ ಚಟುವಟಿಕೆಯಿಂದ ಇದ್ದರೆ ಹೈಪೋ ಥೈರಾಯ್ಡ್. 
 
ಈ ಥೈರಾಯ್ಡ್ ಹಾರ್ಮೋನ್‌ಗಳ ಉತ್ಪತ್ತಿಯನ್ನು ಸರಿಯಾದ ಪ್ರಮಾಣದಲ್ಲಿಡುವ ಸಾಮರ್ಥ್ಯವು ಕೆಲವು ಆಹಾರಗಳಿಗಿವೆ. ಅಂತಹ ಆಹಾರಗಳನ್ನು ಸೇವಿಸಿದರೆ ಅಧಿಕ ಪ್ರಯೋಜನಗಳನ್ನು ನಾವು ಪಡೆಯಬಹುದು.
* ಮೊಸರು: ಥೈರಾಯ್ಡ್ ಸಮಸ್ಯೆಯ ನಿಯಂತ್ರಣಕ್ಕೆ ಜೀರ್ಣಕ್ರಿಯೆಯು ಸರಾಗವಾಗಿ ನಡೆಯಬೇಕು. ಮೊಸರಿನಲ್ಲಿ ವಿಟಾಮಿನ್ ಡಿ ಇದ್ದು ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
 
* ಪಾಲಾಕ್ : ಪಾಲಾಕ್‌ನಲ್ಲಿರುವ ಕಬ್ಬಿಣದ ಅಂಶ, ವಿಟಾಮಿನ್ ಬಿ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಗೆ ಸಹಾಯಕಾರಿಯಾಗಿದೆ.
 
* ಸ್ಟ್ರಾಬೆರಿ : ಸ್ಟ್ರಾಬೆರಿಯಲ್ಲಿ ಅಯೋಡಿನ್ ಅಂಶವಿರುವುದರಿಂದ ಥೈರಾಯ್ಡ್ ಸಮಸ್ಯೆಗೆ ಸ್ಟ್ರಾಬೆರಿ ತಿನ್ನುವುದು ಉತ್ತಮ.
 
* ಅಣಬೆ: ಸಾಮಾನ್ಯವಾಗಿ ಸೆಲೆನಿಯೊಮ್ ಕೊರತೆಯಿಂದ ಥೈರಾಯ್ಡ್ ಸಮಸ್ಯೆ ಉಂಟಾಗುವ ಸಂಭವವಿರುತ್ತದೆ. ಅಣಬೆಯಲ್ಲಿ ಸೆಲೆನಿಯೊಮ್ ಅಧಿಕವಾಗಿರುವುದರಿಂದ ಅಣಬೆಯನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
 
* ಮೊಟ್ಟೆ: ಮೊಟ್ಟೆಯಲ್ಲಿ ಕ್ಯಾಲ್ಸಿಯಂ ಮಾತ್ರವಲ್ಲ, ಅಯೊಡೈಡ್ ಕೂಡಾ ಇರುವುದರಿಂದ ಥೈರಾಯ್ಡ್ ಸಮಸ್ಯೆಗೆ ಇದು ಪ್ರಯೋಜನಕಾರಿಯಾಗಿದೆ.
 
* ಬಾದಾಮಿ : ಬಾದಾಮಿಯಲ್ಲಿ ಕಬ್ಬಿಣದ ಅಂಶ, ಪ್ರೋಟೀನ್ ಮತ್ತು ಸತುವಿನ ಅಂಶವಿರುವುದರಿಂದ ಇದು ಥೈರಾಯ್ಡ್ ಸಮಸ್ಯೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.
 
* ಸೇಬು : ಸೇಬಿನಲ್ಲಿರುವ ಪೆಕ್ವಿನ್ ನಾರಿನಂಶವು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಇದು ಥೈರಾಯ್ಡ್ ಸಮಸ್ಯೆಗೆ ಬಹಳ ಒಳ್ಳೆಯದು.
 
* ಟೊಮೆಟೊ : ಟೊಮಟೊದಲ್ಲಿ ವಿಟಾಮಿನ್ ಸಿ ಇದೆ. ವಿಟಾಮಿನ್ ಸಿ ಇರುವ ಆಹಾರಗಳು ದೇಹದಲ್ಲಿ ಕಬ್ಬಿಣದಂಶವನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಇದು ಥೈರಾಯ್ಡ್ ಸಮಸ್ಯೆಗೆ ಪ್ರಯೋಜನಕಾರಿಯಾಗಿದೆ.
 
* ಮೀನು : ಮೀನಿನಲ್ಲಿ ಐಯೋಡಿನ್ ಅಂಶವಿರುವುದರಿಂದ ಥೈರಾಯ್ಡ್ ಸಮಸ್ಯೆಗೆ ರಾಮಬಾಣವಾಗಿದೆ. ಪ್ರತಿದಿನ ಮೀನು ತಿಂದರೆ ಥೈರಾಯ್ಡ್ ಮಾತ್ರೆ ತೆಗೆದುಕೊಳ್ಳದಿದ್ದರೂ ಥೈರಾಯ್ಡ್ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡುತ್ತದೆ.
 
* ಧಾನ್ಯಗಳು : ಬಾರ್ಲೆ, ಓಟ್ಸ್, ಕೆಂಪಕ್ಕಿ ಅನ್ನ ಇವುಗಳಲ್ಲಿ ವಿಟಾಮಿನ್ ಬಿ ಅಧಿಕವಾಗಿರುತ್ತದೆ ಇದು ಕುತ್ತಿಗೆ ದಪ್ಪವಾಗುವುದನ್ನು ತಡೆಯುತ್ತದೆ. ಇಂತಹ ಆಹಾರ ಪದಾರ್ಥಗಳನ್ನು ನಮ್ಮ ದಿನನಿತ್ಯದ ಅಡಿಗೆಗಳಲ್ಲಿ ಬಳಸುವುದರಿಂದ ಥೈರಾಯ್ಡ್ ಸಮಸ್ಯೆಯನ್ನು ತಡೆಗಟ್ಟಬಹುದು. ಆದರೆ ಯಾವುದೇ ಆಹಾರದ ಸಮಸ್ಯೆಗಳಿಗೆ ಏಕಾಏಕಿ ನಾವೇ ವೈದ್ಯರಾಗುವ ಬದಲು ತಜ್ಞವೈದ್ಯರನ್ನು ಒಮ್ಮೆ ಸಂಪರ್ಕ ಮಾಡಿ ಆರೋಗ್ಯದ ಕುರಿತು ಪರೀಕ್ಷಿಸುವುದು ಒಳಿತು. ಆದರೆ ಥೈರಾಯ್ಡ ಸಮಸ್ಯೆಯನ್ನು ಕಡೆಗಾಣಿಸದೇ ವೈದ್ಯರನ್ನು ಸಂಪರ್ಕಿಸಿ ಅವರು ಸೂಚಿಸುವ ಔಷಧಿಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಸ್ವಾಸ್ಥ್ಯ ಬದುಕನ್ನು ನಡೆಸೋಣ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೆಳ್ಳಿ ಸಾಮಾಗ್ರಿಗಳು ಇಟ್ಟಲ್ಲೇ ಕಪ್ಪಾಗಿದೆಯಾ? ಚಿಂತಿಸಬೇಡಿ ಮತ್ತೆ ಹೊಳಪಾಗಿಸಲು ಹೀಗೆ ಮಾಡಿ

ಬೆಂಗಳೂರು : ಸದ್ಯದಲ್ಲೇ ವರಮಹಾಲಕ್ಷ್ಮೀ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಲಕ್ಷ್ಮೀ ಪೂಜೆಗೆಂದು ...

news

ಈ ದೇಶದಲ್ಲಿ ಸದ್ಯಕ್ಕೆ ಲೈಂಗಿಕ ಸಮಾಗಮ ನಡೆಸುವಂತಿಲ್ಲ! ಕಾರಣವೇನು ಗೊತ್ತಾ?!

ನವದೆಹಲಿ: ಕೊಲಂಬಿಯಾ ದೇಶದಲ್ಲಿ ಸದ್ಯಕ್ಕೆ ಯಾರೂ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತಿಲ್ಲ! ಹಾಗಂತ ಸರ್ಕಾರವೇ ...

news

ಇಲ್ಲಿದೆ ನೋಡಿ ಜೀರಿಗೆ ನೀರಿನ 5 ಉಪಯೋಗಗಳು..!!

ಮನುಷ್ಯ ಬಳಸತೊಡಗಿದ ಅತ್ಯ೦ತ ಹಳೆಯ ಮಸಾಲೆ ವಸ್ತುಗಳಲ್ಲಿ ಜೀರಿಗೆಯೂ ಒಂದು. ಜೀರಿಗೆ ಅತೀ ಹೆಚ್ಚಿನ ...

news

ನಿಮ್ಮ ಕಿಡ್ನಿ ಕ್ಲೀನ್ ಮಾಡಿಕೊಳ್ಳಲು ಕೇವಲ ಐದು ರೂಪಾಯಿ ಸಾಕು

ನಮ್ಮ ದೇಹದಲ್ಲಿರುವ ಕಿಡ್ನಿ ಹಲವು ವರ್ಷಗಳಿಂದ ದೇಹದಲ್ಲಿ ಜಮಾವಣೆಗೊಂಡಿರುವ ಉಪ್ಪಿನಾಂಶ ಮತ್ತು ಅನಗತ್ಯ ...

Widgets Magazine