ನೆಲ್ಲಿಕಾಯಿ ಬಳಸಿ ಆರೋಗ್ಯ ವರ್ಧಿಸಿಕೊಳ್ಳಿ

ಬೆಂಗಳೂರು, ಮಂಗಳವಾರ, 4 ಸೆಪ್ಟಂಬರ್ 2018 (13:58 IST)

ನೆಲ್ಲಿಕಾಯಿಯಲ್ಲಿ ಸಿ ಜೀವಸತ್ವವು ಹೇರಳವಾಗಿದೆ.  ಇದರಿಂದ ಪ್ರಯೋಜನಗಳು ಅನೇಕ. ಇನ್ನೊಂದು ವಿಶೇಷತೆ ಏನೆಂದರೆ ನೆಲ್ಲಿಕಾಯಿಯ ಕಾಯಿ ಮಾತ್ರ ಅಲ್ಲ ಇದರ ತೊಗಟೆ, ಬೇರು, ಎಲೆ ಎಲ್ಲವೂ ಪ್ರಯೋಜನಕಾರಿಯಾಗಿದೆ. ನೆಲ್ಲಿಕಾಯಿಯು ಕೇವಲ ಆರೋಗ್ಯ ವರ್ಧನೆಗೆ ಮಾತ್ರವಲ್ಲದೇ ಸೌಂದರ್ಯ ವರ್ಧನೆಗೂ, ಗರ್ಭಿಣಿಯರ ಆರೋಗ್ಯಕ್ಕೂ ಒಳ್ಳೆಯದು. ಹಾಗಾದರೆ ಈ ಪುಟ್ಟ ಪುಟ್ಟ ನೆಲ್ಲಿಕಾಯಿಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ಒಂದೊಂದಾಗಿ ತಿಳಿದುಕೊಳ್ಳೋಣ...
- ಕೂದಲಿಗೆ ಹೊಳಪು ಬರಲು ಮತ್ತು ಕೂದಲು ಮೃದುವಾಗಲು ನೆಲ್ಲಿಕಾಯಿಯ ರಸವನ್ನು ಆಗಾಗ್ಗೆ ತಲೆಗೂದಲಿಗೆ ಲೇಪನ ಮಾಡಿಕೊಳ್ಳುತ್ತಿರಬೇಕು.
 
- ಬೆಟ್ಟದ ನೆಲ್ಲಿಕಾಯಿಯ ಸೇವನೆಯು ಗರ್ಭಿಣಿಯರಲ್ಲಿ ಕಂಡುಬರುವ ಮೂಡ್ ಸ್ವಿಂಗ್ ಅಥವಾ ಬೇಸರವನ್ನು ನಿಯಂತ್ರಿಸುತ್ತದೆ. 
 
- ನೆಲ್ಲಿಕಾಯಿಯು ಮಗುವಿನ ನೆನಪಿನ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 
- ನೆಲ್ಲಿಕಾಯಿಯಲ್ಲಿ ಯಥೇಚ್ಛವಾಗಿ ಕಬ್ಬಿಣಾಂಶವು ಇರುವುದರಿಂದ ಇದು ಅನಿಮಿಯಾ ಬರದಂತೆ ತಡೆಯಲು ನೆರವಾಗುತ್ತದೆ.
 
- ಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ ನೆಲ್ಲಿಚೆಟ್ಟಿನ ಕಷಾಯಕ್ಕೆ ಸಕ್ಕರೆ ಬೆರೆಸಿ 3 ಬಾರಿ ಕುಡಿಯುವುದರಿಂದ ರಕ್ತ ಹೋಗುವುದು ನಿಂತು ಹೋಗುತ್ತದೆ.
 
- ಅಂಗಾಲು ಉರಿಯುತ್ತಿದ್ದರೆ ನೆಲ್ಲಿಕಾಯಿ ಪುಡಿಯನ್ನು ಪೇಸ್ಟ್‌ನಂತೆ ಮಾಡಿಕೊಂಡು ಅಂಗಾಲು, ಹಿಮ್ಮಡಿ, ಅಂಗೈಗಳಿಗೆ ಲೇಪಿಸಿದರೆ ಉರಿ ಕಡಿಮೆಯಾಗುತ್ತದೆ.
 
- ನೆಲ್ಲಿಕಾಯಿಯು ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಆಮ್ಲಜನಕ ಮತ್ತು ರಕ್ತದ ಪೂರೈಕೆ ಮಾಡುತ್ತದೆ.
 
- ಒಣಗಿದ ನೆಲ್ಲಿಕಾಯಿಯನ್ನು ತೆಂಗಿನೆಣ್ಣೆಯಲ್ಲಿ ಬಿಸಿ ಮಾಡಿ ಆ ಎಣ್ಣೆಯನ್ನು ತಲೆಗೆ ಮಸಾಜ್ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
 
- 1 ಚಮಚ ನೆಲ್ಲಿಚೆಟ್ಟಿನ ಪುಡಿಗೆ ಅಷ್ಟೇ ಪ್ರಮಾಣದ ಬೆಲ್ಲವನ್ನು ಬೆರೆಸಿ ದಿನಕ್ಕೆರಡು ಬಾರಿ 2 ತಿಂಗಳ ತನಕ ಸೇವಿಸುವುದರಿಂದ ಸಂಧಿವಾತ ಮತ್ತು ಕೀಲುನೋವುಗಳು ಕಡಿಮೆಯಾಗುತ್ತದೆ.
 
- ನೆಲ್ಲಿಕಾಯಿಯು ಕೈ ಮತ್ತು ಕಾಲುಗಳ ಊತವನ್ನು ಕಡಿಮೆ ಮಾಡುತ್ತದೆ. ಇದು ಉತ್ಕರ್ಷಣಾ ನಿರೋಧಿ ಅಂಶಗಳನ್ನು ಹೊಂದಿದ್ದು ಅಧಿಕ ತೂಕದಿಂದ ಉಂಟಾಗುವ ಕೈ ಕಾಲುಗಳ ಬಾವನ್ನು ಇದು ನಿವಾರಿಸುತ್ತದೆ.
 
- ಕೆಲವರಿಗೆ ಬೆಳಗಿನ ಸಮಯದಲ್ಲಿ ವಾಕರಿಕೆ, ತಲೆಸುತ್ತಿನಂತಹ ಸಮಸ್ಯೆ ಇರುತ್ತದೆ. ಈ ಸಮಸ್ಯೆಗಳಿಗೆ ನೆಲ್ಲಿಕಾಯಿಯ ಸೇವನೆಯು ರಾಮಬಾಣವಾಗಿದೆ.
 
- 10 ಗ್ರಾಂನಷ್ಟು ನೆಲ್ಲಿಕಾಯಿ ಚೂರ್ಣಕ್ಕೆ 1 ಚಮಚ ಜೇನುತುಪ್ಪ, 1 ಚಮಚ ಸಕ್ಕರೆ ಬೆರೆಸಿ ದಿನಕ್ಕೆ 3 ಬಾರಿ ಸೇವಿಸುವುದರಿಂದ ಸ್ತ್ರೀಯರಲ್ಲಿ ಬಿಳಿಸೆರಗು ನಿವಾರಣೆಯಾಗುತ್ತದೆ. 
 
- ಗರ್ಭದಲ್ಲಿರುವ ಮಗುವಿನ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಯಲ್ಲಿ ಕ್ಯಾಲ್ಸಿಯಂ ಅತ್ಯವಶ್ಯವಾಗಿರುತ್ತದೆ. ಈ ಸಮಯದಲ್ಲಿ ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಮಗುವಿಗೆ ಕ್ಯಾಲ್ಯಿಯಂ ಸಿಗುತ್ತದೆ
 
- ನೆಲ್ಲಿಕಾಯಿಯಲ್ಲಿರುವ ಫೈಬರ್ ಅಂಶವು ಮಲಬದ್ಧತೆಯ ನಿವಾರಣೆಗೆ ಸಹಕಾರಿಯಾಗಿದೆ.
 
- ನೆಲ್ಲಿಕಾಯಿಯ ಎಣ್ಣೆಯಲ್ಲಿ ಕ್ಯಾರೊಟಿನ್ ಅಂಶವಿದ್ದು ಇದು ತುರಿಕೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯಕಾರಿಯಾಗಿದೆ.
 
- 12 ಗ್ರಾಂ ನೆಲ್ಲಿಚೆಟ್ಟು, 12 ಗ್ರಾಂ ಲಾವಂಚ, 12 ಗ್ರಾಂ ಸೊಗದೆಬೇರು ಇವುಗಳನ್ನು ಬೇರೆ ಬೇರೆಯಾಗಿ ಪುಡಿಮಾಡಿ ಚೂರ್ಣದ ಎಂಟು ಪಟ್ಟು ನೀರು ಸೇರಿಸಿ ಕುದಿಸಿ 1/8 ಪಾಲಿಗೆ ಇಳಿಸಿದ ಕಷಾಯವನ್ನು ದಿನಕ್ಕೆರಡು ಬಾರಿ ಎರಡು ಚಮಚದಷ್ಟುನ್ನು 21 ದಿನ ಸೇವಿಸುವುದರಿಂದ ಸರ್ಪಸುತ್ತು ನಿವಾರಣೆಯಾಗುತ್ತದೆ.
 
- ಬೆಟ್ಟದ ನೆಲ್ಲಿಕಾಯಿಯು ಜೀರ್ಣಾಂಗ ಕ್ರಿಯೆಯನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದಲ್ಲದೇ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಸಾಗುವಂತೆ ಮಾಡುತ್ತದೆ.
 
- ನೆಲ್ಲಿಕಾಯಿಯ ಎಣ್ಣೆಯು ಕೂದಲಿನ ಆಳಕ್ಕೆ ಇಳಿದು ಕೂದಲನ್ನು ಸದೃಢವಾಗಿಸುವುದಲ್ಲದೇ ಇವು ನೆರೆಗೂದಲು ಆಗುವುದನ್ನು ತಡೆಯುತ್ತದೆ. ಈ ಎಣ್ಣೆಯನ್ನು ನಿತ್ಯವೂ ಬಳಸುವುದರಿಂದ ಕೂದಲಿನ ಅರೋಗ್ಯವೂ ಕೂಡಾ ವರ್ಧಿಸುತ್ತದೆ.
 
ನೆಲ್ಲಿಕಾಯಿಯನ್ನು ಕೆಲವು ಆಯುರ್ವೇದ ಚಿಕಿತ್ಸಕಗಳಲ್ಲಿಯೂ ಬಳಸಲಾಗುತ್ತದೆ. ಅದಲ್ಲದೇ ಸೌಂದರ್ಯ ವರ್ಧಕದ ತಯಾರಿಕೆಯಲ್ಲಿಯೂ ಇದನ್ನು ಬಳಸಲಾಗುತ್ತಿದೆ. ಎಷ್ಟೋ ಸಂದರ್ಭದಲ್ಲಿ ನಾವು ರೋಗವನ್ನು ನಿರ್ಲಕ್ಷಿಸುತ್ತೇವೆ. ಆಗ ರೋಗವು ಉಲ್ಬಣಿಸಿ ಮಾರಣಾಂತಕವಾಗುವ ಸಂದರ್ಭವೂ ಎದುರಾಗುತ್ತದೆ. ಕೆಲವು ಪ್ರಥಮ ಚಿಕಿತ್ಸೆಗಳು ನಮಗೆ ಮೊದಲೇ ತಿಳಿದಿದ್ದರೆ ನಾವು ಇಂತವುಗಳಿಂದ ಪಾರಾಗಬಹುದು. ಆದರೆ ಕೆಲವೊಂದು ರೋಗಗಳಿಗೆ ನಾವೇ ವೈದ್ಯರಾಗುವುದಕ್ಕಿಂತ ನುರಿತ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ರೋಗವು ಬರದೇ ಬರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜಾಣತನ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ನಂತರ ಸ್ನಾನ ಎಂತಹಾ ಮ್ಯಾಜಿಕ್ ಮಾಡುತ್ತೆ ಗೊತ್ತಾ?!

ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಎರಡು ದೇಹಗಳು ಮಾತ್ರವಲ್ಲ, ಮನಸ್ಸೂ ಬೆಸೆಯುವ ಕ್ರಿಯೆ. ಇದು ...

news

ಮೊಳಕೆ ಬರಿಸಿದ ಕಾಳುಗಳಿಂದ ಮತ್ತು ಧಾನ್ಯಗಳಿಂದ ಆರೋಗ್ಯ ವರ್ಧನೆ!!!

ಉತ್ತಮವಾದ ಆರೋಗ್ಯಕರವಾದ ಜೀವನವನ್ನು ನಡೆಸುವುದು ಈಗಿನ ವಿದ್ಯಮಾನದಲ್ಲಿ ಕಷ್ಟಕರವಾಗಿದೆ. ಎಲ್ಲೆಲ್ಲಿಯೂ ...

news

ಗರ್ಭಕೋಶದ ಆರೋಗ್ಯ ಕಾಪಾಡುತ್ತದೆಯಂತೆ ಹೆಣ್ಣು ಮಕ್ಕಳು ಧರಿಸುವ ಈ ವಸ್ತು

ಬೆಂಗಳೂರು : ನಮ್ಮ ಹಿರಿಯರು ಆಚರಿಸುವ ಆಚರಣೆಗಳಲ್ಲಿ ಒಂದು ವೈಜ್ಞಾನಿಕ ಕಾರಣಗಳಿರುತ್ತದೆ. ಅದರಲ್ಲಿ ಮದುವೆ ...

news

ಚ್ಯೂಯಿಂಗ್ ಸೇವನೆ ಕೆಟ್ಟದ್ದು ಯಾಕೆ ಗೊತ್ತಾ?

ಬೆಂಗಳೂರು: ಚ್ಯುಯಿಂಗ್ ಸೇವನೆಯಿಂದ ಬಾಯಿಗೆ ವ್ಯಾಯಾಮ ಸಿಗುತ್ತದೆ ಎಂಬ ನಂಬಿಕೆಯಿದೆ. ಆದರೆ ಚ್ಯುಯಿಂಗ್ ಗಮ್ ...

Widgets Magazine