ಕೋಪ ಬಂದರೆ ಇದನ್ನು ತಪ್ಪದೇ ಮಾಡಿ ನೋಡಿ

ಬೆಂಗಳೂರು, ಭಾನುವಾರ, 10 ಸೆಪ್ಟಂಬರ್ 2017 (07:59 IST)

ಬೆಂಗಳೂರು: ಸಿಟ್ಟು.. ಯಾರಿಗೆ ತಾನೇ ಬರಲ್ಲ? ಕೆಲವರು ಸಣ್ಣ ಪುಟ್ಟ ವಿಷಯಕ್ಕೂ ಅತಿಯಾಗಿ ಸಿಟ್ಟು ಮಾಡಿಕೊಂಡು ಸಂಬಂಧವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಹಾಗಾದರೆ ಸಿಟ್ಟು ಕಂಟ್ರೋಲ್ ಮಾಡಬೇಕಾದರೆ ಇವುಗಳನ್ನು ಮಾಡಿ ನೋಡಿ.


 
ಮಾತಾಡುವ ಮೊದಲು ಯೋಚಿಸಿ
ಮಾತು ಆಡಿದರೆ ಮುತ್ತು, ಒಡೆದರೆ ಹೋಯ್ತು ಅಂತಾರೆ. ಹಾಗಾಗಿ ಯಾರೊಂದಿಗೆ ಏನೇ ಮಾತನಾಡಬೇಕಾದರೂ ಯೋಚಿಸಿ ಮಾತನಾಡಿ. ಎಲ್ಲರೊಂದಿಗೂ ನಾನು ಹೀಗೇ ಮಾತನಾಡುವುದು ಎಂಬ ಉದ್ಧಟತನ ತೋರಬೇಡಿ. ಸಮಯ ಸಂದರ್ಭಕ್ಕೆ ತಕ್ಕಂತೆ ಮಾತು, ವರ್ತನೆ ಇರಲಿ.
 
ಮೌನವಾಗಿರಿ
ಬಂದಾಗ ಮೌನವಾಗಿರುವುದೇ ಒಳ್ಳೆಯದು. ಕೋಪದ ಭರದಲ್ಲಿ ಕೈಗೊಳ್ಳುವ ನಿರ್ಧಾರಗಳು ಯಾವತ್ತೂ ಸೂಕ್ತವಾಗಿರುವುದಿಲ್ಲ. ಹಾಗಾಗಿ ಮಾತನಾಡುವ ಬದಲು ಮೌನವಾಗಿದ್ದು, ನಂತರ ನಿಮಗೆ ಏಕೆ ಕೋಪ ಬಂದಿದೆ ಎಂಬುದನ್ನು ವಿಮರ್ಶಿಸಿ. ಸಾಧ್ಯವಾದರೆ ನಿಮ್ಮ ಕೋಪಕ್ಕೆ ಕಾರಣವಾದವರೊಂದಿಗೆ ಶಾಂತವಾದೊಡನೆ ಕಾರಣ ಚರ್ಚಿಸಿ.
 
ಹೊರಗೆ ಹೋಗಿ
ಕೋಪ ಬಂದ ತಕ್ಷಣ ಕೂಗಾಡುವ ವ್ಯಕ್ತಿಗಳು ನೀವಾಗಿದ್ದರೆ, ಆ ಸ್ಥಳದಿಂದ ಜಾಗ ಖಾಲಿ ಮಾಡುವುದು ಒಳ್ಳೆಯದು. ಆ ಸಂದರ್ಭದಲ್ಲಿ ಹೊರಗಡೆ ಒಂದು ವಾಕಿಂಗ್ ಹೋಗಿ. ಇದರಿಂದ ಮನಸ್ಸೂ ಸ್ವಲ್ಪ ಹಗುರವಾಗುತ್ತದೆ. ಹಾಗೆಯೇ ಕೋಪವೂ ಕರಗುತ್ತದೆ.
 
ಇದನ್ನೂ ಓದಿ.. ‘ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸ್ವಲ್ಪ ರಜಾ ಕೊಡಿ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅರಸಿನ ಪುಡಿ ಹೆಚ್ಚು ತಿನ್ನುವುದೂ ಅಪಾಯ! ಏನಾಗುತ್ತೆ?

ಬೆಂಗಳೂರು: ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ಆದರೆ ಅತಿಯಾದರೆ ...

news

ಗರ್ಭಿಣಿಯರು ನಿಜವಾಗಿಯೂ ಮೊಬೈಲ್ ಬಳಸುವುದು ಹಾನಿಕಾರಕವೇ?!

ಬೆಂಗಳೂರು: ಗರ್ಭಿಣಿ ಮಹಿಳೆಯರು ಮೊಬೈಲ್ ಫೋನ್ ಬಳಸಬಾರದು. ಮೊಬೈಲ್ ಬಳಕೆ ಹುಟ್ಟುವ ಮಗುವಿನ ಮೇಲೆ ಪರಿಣಾಮ ...

news

ಹಾಗಲಕಾಯಿ ಜ್ಯೂಸ್ ಕುಡಿದು ಮ್ಯಾಜಿಕ್ ನೋಡಿ!

ಬೆಂಗಳೂರು: ಹಾಗಲಕಾಯಿ ಕಹಿ ಎಂದು ದೂರ ತಳ್ಳುವವರೇ ಜಾಸ್ತಿ. ಆದರೆ ಹಾಗಲಕಾಯಿ ನಮ್ಮ ಆರೋಗ್ಯಕ್ಕೆ ನೀಡುವ ಲಾಭ ...

news

ಹಲ್ಲು ಹಳದಿಗಟ್ಟಿದೆಯೇ? ಬಿಳಿ ಹಲ್ಲು ನಿಮ್ಮದಾಗಬೇಕಿದ್ದರೆ ಇದನ್ನು ಟ್ರೈ ಮಾಡಿ!

ಬೆಂಗಳೂರು: ಹೆಚ್ಚಿನವರಿಗೆ ಇದೇ ಸಮಸ್ಯೆ. ಹಲ್ಲು ಹಳದಿಗಟ್ಟಿ ಎಲ್ಲರ ಎದುರು ಹೃದಯ ಪೂರ್ವಕವಾಗಿ ನಗಲೂ ...

Widgets Magazine