ಕಬ್ಬಿನ ಹಾಲಿನ ಮಹತ್ವ ನಿಮಗೆ ಗೊತ್ತಾ...!!!

ಅತಿಥಾ 

ಬೆಂಗಳೂರು, ಗುರುವಾರ, 25 ಜನವರಿ 2018 (13:16 IST)

ಬೇಸಿಗೆ ಬಂತೆಂದರೆ ಸಾಕು ಬಾಯಾರಿಕೆ ಆಗುವುದು ಸಹಜ ಅಲ್ಲದೇ ದೂರದ ಊರುಗಳಿಗೋ ಅಥವಾ ಎಲ್ಲಿಯಾದರೂ ಪ್ರಯಾಣ ಮಾಡುತ್ತಿರುತ್ತೇವೆ ಎಂದಿಟ್ಟುಕೊಳ್ಳಿ ಬಾಯಾರಿಕೆಯಾದಾಗ ಸಾಮಾನ್ಯವಾಗಿ ಸೊಪ್ಟ್ ಡ್ರಿಂಕ್ ಮೊರೆ ಹೋಗುವುದು ಸಾಮಾನ್ಯ.

ಆದರೆ ಅದು ನಮ್ಮ ಆರೋಗ್ಯಕ್ಕೆ ಮಾರಕ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ ಅದಕ್ಕಿಂತ ನಾವು ಎಳೆನೀರೋ ಇಲ್ಲವೇ ಕಬ್ಬಿನ ಹಾಲಿನಂತಹ ನೈಸರ್ಗಿಕ ಪಾನೀಯವನ್ನು ಸೇವಿಸಬಹುದು ಇದರಿಂದ ಆಯಾಸ ಕಮ್ಮಿಯಾಗುವುದರ ಜೊತೆಗೆ ದೇಹದ ಆರೋಗ್ಯಕ್ಕೂ ಇದು ಉತ್ತಮ ಎಂದೇ ಹೇಳಬಹುದು.
 
ಹಾಗಾದರೆ ಕಬ್ಬಿನ ಹಾಲಿನಲ್ಲಿ ಅಂತಹ ವಿಶೇಷವೇನಿದೆ ಎಂದು ನೀವು ಕೇಳಬಹುದು. ಅದಕ್ಕಾಗಿ ಅದರ ಆರೋಗ್ಯಯುತ ಅಂಶಗಳು  ಏನೆಂಬುದನ್ನು ಹೇಳ್ತಿವಿ ಓದಿ...
 
ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟುಗಳು, ಪ್ರೋಟೀನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಸತು ಮತ್ತು ಪೊಟ್ಯಾಶಿಯಂನಂತಹ ಖನಿಜಾಂಶಗಳ ಸಹಿತ ಹಲವಾರು ಅವಶ್ಯಕ ಪೋಷಕಾಂಶಗಳಿವೆ. ಸಕ್ಕರೆ ಬೆರೆಸಿದ ಹಣ್ಣಿನ ರಸಗಳಿಗಿಂತಲೂ ಕಬ್ಬಿನ ಹಾಲನ್ನು ಸೇವಿಸುವುದೇ ಹೆಚ್ಚು ಆರೋಗ್ಯಕರ ಎನ್ನುತ್ತಾರೆ ವೈದ್ಯರು. ಕಬ್ಬಿನ ಹಾಲಿನ ನಿಯಮಿತ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳ ಕುರಿತು ತಿಳಿಯೋಣ...
 
ಕಬ್ಬಿನ ಹಾಲಿನ ಲಾಭಗಳು
 
- ಕಬ್ಬಿನ ಹಾಲು ದೇಹದಲ್ಲಿನ ನಿರ್ಜಲೀಕರಣ ಸಮಸ್ಯೆಯನ್ನು ತಡೆಯುವುದರೊಂದಿಗೆ ದೇಹದಲ್ಲಿ ನೀರಿನ ಪ್ರಮಾಣವನ್ನು ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ.
 
- ಇದು ಮೂತ್ರಕೋಶದ ಸೋಂಕುಗಳು ಮತ್ತು ಕಿಡ್ನಿ ಹರಳುಗಳನ್ನು ನಿವಾರಿಸುವುವಲ್ಲಿ ಸಹಾಯಕಾರಿಯಾಗಿದೆ. 
 
- ಉರಿ ಮೂತ್ರ, ಗುಪ್ತಕಾಯಿಲೆ, ಎದೆಯುರಿ, ಹೊಟ್ಟೆಯುರಿ ಮೊದಲಾದ ಸಮಸ್ಯೆಗಳನ್ನು ಕೂಡ ಕಬ್ಬಿನ ಹಾಲು ಸೇವನೆಯಿಂದ ತಡೆಗಟ್ಟಲು ಸಹಾಯವಾಗುತ್ತದೆ.
 
- ಕಬ್ಬಿನ ಹಾಲನ್ನು ಕುಡಿಯುವುದಕ್ಕಿಂತ ಕಬ್ಬಿನ ಜಲ್ಲೆಯನ್ನು ಜಗಿದು ರಸ ಹೀರುವ ಮೂಲಕ ಹಲ್ಲು ಮತ್ತು ಒಸಡುಗಳು ಗಟ್ಟಿಗೊಳ್ಳುತ್ತವೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸಲು ನೆರವಾಗುತ್ತದೆ.
 
- ಕಬ್ಬಿನ ಹಾಲಿನ ಸೇವನೆಯಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ರಕ್ತವು ಶುದ್ಧವಾಗುವ ಕಾರಣ ಆರೋಗ್ಯವೃದ್ಧಿ ಸಾಧ್ಯ.
 
- ಹೃದಯದ ಆರೋಗ್ಯವನ್ನು ಕಾಪಾಡುವ ಟ್ರೈಗ್ಲಿಸರೈಡ್‌ಗಳ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
 
- ಈ ರಸದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದ ಹಲವಾರು ಸೋಂಕುಗಳ ವಿರುದ್ಧ ಹೋರಾಡುವ ಗುಣ ಹೊಂದಿದ್ದು. ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ.
 
- ಕಬ್ಬಿನ ಹಾಲಿನ ಸೇವನೆಯಿಂದ ದೇಹದ ಪೋಷಕಾಂಶಗಳ ಕೊರತೆ ನೀಗುವುದಲ್ಲದೇ ಇದರಲ್ಲಿರುವ ಪ್ರೋಟೀನುಗಳು ಘಾಸಿಗೊಂಡಿದ್ದ ಜೀವಕೋಶಗಳನ್ನು ಪುನರ್ಜೀವಗೊಳಿಸಲು ನೆರವಾಗುತ್ತದೆ.
 
- ಕಬ್ಬಿನ ಹಾಲಿನಲ್ಲಿರುವ ಕ್ಯಾಲ್ಸಿಯಂ, ಮೆಗ್ನೇಶಿಯಂ, ಪೊಟ್ಯಾಶಿಯಮ್, ಕಬ್ಬಿಣ ಹಾಗೂ ಮ್ಯಾಂಗನೀಸ್ ಮೊದಲಾದ ಖನಿಜಗಳಿರುವ ಕಾರಣ ಇದು ಕೊಂಚ ಕ್ಷಾರೀಯವಾಗಿದ್ದು, ಇದರಲ್ಲಿರುವ ಫ್ಲೇವನಾಯ್ಡುಗಳು ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಕಣಗಳ ವಿರುದ್ಧ ಹೋರಾಡುವ ಮೂಲಕ ವಿಶೇಷವಾಗಿ ಸ್ತನ ಹಾಗೂ ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ವಿರುದ್ಧ ರಕ್ಷಣೆ ಒದಗಿಸುತ್ತದೆ.
 
- ಕಬ್ಬಿನ ಹಾಲು ಕಾಮಾಲೆ ಇರುವವರೆಗೆ ನೈಸರ್ಗಿಕವಾದ ಔಷಧಿಯಾಗಿದೆ. ಲಿವರ್ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಈ ಕಾಯಿಲೆ ಬರುತ್ತದೆ.
 
- ಶೀತ, ಗಂಟಲುನೋವು, ಗಂಟಲು ಕೆರೆತ ಮುಂತಾದ ಸಮಸ್ಯೆಗಳಿದ್ದರೆ ಬೇರೆ ಔಷಧಿಗಳಿಗೆ ಮೊರೆ ಹೋಗುವ ಬದಲು ಕಬ್ಬಿನ ಹಾಲು ಕುಡಿದರೆ ಬೇಗನೆ ಶಮನವಾಗುತ್ತದೆ.
 
- ಕಬ್ಬಿನ ಹಾಲು ಎಷ್ಟೇ ಸಿಹಿಯಾಗಿರಲಿ ಅದು ಮಧುಮೇಹಿಗಳಿಗೆ ಉತ್ತಮವಾಗಿದೆ ಇದರಲ್ಲಿರುವ ಗ್ಲೈಸಮಿಕ್ ಇಂಡೆಕ್ಸ್ ನೈಸರ್ಗಿಕ ಸಕ್ಕರೆಯ ಅಂಶವನ್ನು ಒಳಗೊಂಡಿದ್ದು ಇದು ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು  ಇದು ಸಹಾಯ ಮಾಡುತ್ತದೆ.
 
ಕಬ್ಬಿನಿಂದಾಗುವ ಪ್ರಯೋಜನದ ಬಗ್ಗೆ ತಿಳಿದ ಮೇಲೆ ಬಿಸಿಲಿಗೆ ಓಡಾಡುವಾಗ ಇಲ್ಲವೇ ಹೊರಗೆ ಎಲ್ಲಿಯಾದರೂ ಪ್ರಯಾಣಿಸುವಾಗ ಏನಾದರು ಕುಡಿಯಬೇಕೆನಿಸಿದರೆ ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯಗಳಿಗೆ ಮಾರು ಹೋಗುವ ಬದಲು ಕಬ್ಬಿನ ರಸ ಕುಡಿದು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸುವಾಸನೆ, ರುಚಿಯನ್ನು ಹೆಚ್ಚಿಸಲು ಶುಂಠಿ ಬಳಕೆ

ಆಹಾರದಲ್ಲಿ ಶುಂಠಿ ಬಳಸುವುದರಿಂದ ಅದರ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಆರೋಗ್ಯ ...

news

ಆರೋಗ್ಯದ ಸುಧಾರಣೆಗೆ ಅತ್ಯುತ್ತಮ ಎಣ್ಣೆ ತೆಂಗಿನೆಣ್ಣೆ

ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಅತ್ಯುತ್ತಮ ಎಣ್ಣೆ ತೆಂಗಿನೆಣ್ಣೆ, ಆರೋಗ್ಯದ ಸುಧಾರಣೆಗೆ, ಕುರುಕಲು ...

news

ಏಲಕ್ಕಿ ಚಹಾದ ಪ್ರಯೋಜನಗಳು

ಭಾರತೀಯ ಅಡುಗೆಯಲ್ಲಿ ತನ್ನ ಚಮತ್ಕಾರವನ್ನು ತೋರುವ ಏಲಕ್ಕಿ, ಆಯುರ್ವೇದದಲ್ಲಿ ದಿವ್ಯೌಷಧವಾಗಿದೆ. ನಿಮ್ಮ ...

news

ಸ್ವಾದಿಷ್ಠ ಬೀಟ್‎ರೂಟ್ ಪಲಾವ್

ಕುಕ್ಕರ್ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ, ಬೇ ಲೀವ್ಸ್, ಜೀರಿಗೆ ಮತ್ತು ಹಸಿಮೆಣಸು, ಗರಂ ಮಸಾಲಾ, ...

Widgets Magazine
Widgets Magazine