ಈ ಆಹಾರಗಳನ್ನು ಸೇವಿಸದಿದ್ದರೆ ತೂಕ ಹೆಚ್ಚುವುದು ಖಂಡಿತಾ!

ಬೆಂಗಳೂರು, ಸೋಮವಾರ, 9 ಅಕ್ಟೋಬರ್ 2017 (08:23 IST)

ಬೆಂಗಳೂರು: ತೂಕ ಇಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಈ ಕೆಲವು ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಲು ಮರೆಯದಿರಿ.


 
ಮೊಟ್ಟೆ
ಮೊಟ್ಟೆ ಎಲ್ಲಾ ರೀತಿಯಿಂದಲೂ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ನಮ್ಮ ಹಸಿವು ನಿಯಂತ್ರಿಸುತ್ತದೆ. ಹೀಗಾಗಿ ಬೇಕಾಬಿಟ್ಟಿ ತಿನ್ನುವ ಪ್ರಮೇಯ  ಬರುವುದಿಲ್ಲ. ಮೊಟ್ಟೆಯಲ್ಲಿ 70 ರಿಂದ 78 ಕ್ಯಾಲೋರಿ ಇದೆ.
 
ಸೊಪ್ಪು ತರಕಾರಿಗಳು
ಇತರ ಆಹಾರಗಳಿಗೆ ಹೋಲಿಸಿದರೆ ಸೊಪ್ಪು ತರಕಾರಿಗಳಲ್ಲಿ ಕ್ಯಾಲೊರಿ ಕಡಿಮೆ. ಅಲ್ಲದೆ ಇದರಲ್ಲಿ ಪೋಷಕಾಂಶ ಹೇರಳವಾಗಿದೆ. ಇದನ್ನು ಸಲಾಡ್ ರೂಪದಲ್ಲಿ ತಿನ್ನುವುದು ಒಳ್ಳೆಯದು.
 
ಧಾನ್ಯಗಳು
ಇಡೀ ಧಾನ್ಯಗಳಲ್ಲಿ ಫೈಬರ್ ನ ಅಂಶ ಹೆಚ್ಚು. ಹೀಗಾಗಿ ಇದು ಶರೀರದಲ್ಲಿ ಬೇಡದ ಕೊಬ್ಬು ಕರಗಿಸುತ್ತದೆ. ಇದರಿಂದಾಗಿ ಸುಲಭವಾಗಿ ತೂಕ ಇಳಿಸಬಹುದು. ಅಷ್ಟೇ ಅಲ್ಲದೆ, ಧಾನ್ಯಗಳಲ್ಲಿ ಪೋಷಕಾಂಶಗಳೂ ಹೆಚ್ಚು.
 
ಮೀನು
ಮೀನಿನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಮತ್ತು ಇತರ ಪೋಷಕಾಂಶಗಳು ಹೇರಳವಾಗಿದೆ. ಇದು ನಮ್ಮ ತೂಕ ನಿಯಂತ್ರಿಸಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ, ಇದರಲ್ಲಿರುವ ಪೋಷಕಾಂಶ ನಮ್ಮ ಹೃದಯ, ಮೆದುಳು ಮತ್ತು ಇತರ ಶರೀರದ ಭಾಗಗಳ ಬೆಳವಣಿಗೆಗೆ ಉತ್ತಮ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರಾತ್ರಿ ಊಟದ ಬಳಿಕ ಈ ಆಹಾರಗಳನ್ನು ಸೇವಿಸಲೇಬೇಡಿ

ಬೆಂಗಳೂರು: ರಾತ್ರಿ ಊಟವಾದ ಮೇಲೆ ಕೆಲವರಿಗೆ ಒಂದೊಂದು ಆಹಾರ ಸೇವಿಸುವ ಅಭ್ಯಾಸವಿರುತ್ತದೆ. ಆದರೆ ಕೆಲವೊಂದು ...

news

ಮಲಬದ್ಧತೆಯೇ? ಹಾಗಿದ್ದರೆ ಈ ಆಹಾರ ಸೇವಿಸಿ

ಬೆಂಗಳೂರು: ಮಲಬದ್ಧತೆಯೇ? ವೈದ್ಯರ ಬಳಿ ಹೋಗಿಯೂ ಪ್ರಯೋಜನವಾಗಿಲ್ಲವೇ? ಹಾಗಿದ್ದರೆ ಕೆಲವು ಮನೆ ...

news

ಹಾಲಿನ ಬದಲು ಇವೆರಡನ್ನು ಸೇವಿಸಿದರೆ ಸಾಕು!

ಬೆಂಗಳೂರು: ನಮ್ಮ ಶರೀರಕ್ಕೆ ಕ್ಯಾಲ್ಶಿಯಂ ತೀರಾ ಅನಿವಾರ್ಯ. ಅದು ಹೇರಳವಾಗಿ ಸಿಗುವುದು ಹಾಲಿನಲ್ಲಿ ಎಂದು ...

news

ಕರಿದ ಎಣ್ಣೆಯನ್ನು ಮರುಬಳಕೆ ಮಾಡುತ್ತೀರಾ? ಹಾಗಿದ್ದರೆ ಇದನ್ನು ಓದಿ!

ಬೆಂಗಳೂರು: ನಮ್ಮಲ್ಲಿ ಹೆಚ್ಚಿನವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಇದೇ ತಪ್ಪನ್ನು ಮತ್ತೆ ಮತ್ತೆ ...

Widgets Magazine
Widgets Magazine