ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಈ ಆಹಾರ ಸೇವಿಸಿ

ಬೆಂಗಳೂರು, ಬುಧವಾರ, 2 ಆಗಸ್ಟ್ 2017 (08:59 IST)

ಬೆಂಗಳೂರು: ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಸಹಜ ಸ್ಥಿತಿಯಲ್ಲಿರಲೇಬೇಕು. ಇಲ್ಲದಿದ್ದರೆ ಅನಿಮೀಯಾ, ಸುಸ್ತು, ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಬರುತ್ತವೆ. ಹಾಗಿದ್ದರೆ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುವ ಆಹಾರಗಳು ಯಾವುವು?


 
ಕಬ್ಬಿಣದಂಶ ಹೆಚ್ಚಿರುವ ಆಹಾರ
ಪ್ರತಿನಿತ್ಯ ಕಬ್ಬಿಣದಂಶ ಹೇರಳವಾಗಿರುವ ಹಣ್ಣು ಹಂಪಲುಗಳನ್ನು ಸೇವಿಸಿ. ಸಿಹಿಗುಂಬಳದ ಬೀಜ, ಸೊಪ್ಪು ತರಕಾರಿ, ಬಟಾಣಿ, ಮೀನು, ಬಾದಾಮಿ, ಮಾಂಸಾಹಾರಗಳಲ್ಲಿ ಕಬ್ಬಿಣದಂಶ ಹೆಚ್ಚಿರುತ್ತದೆ.
 
ವಿಟಮಿನ್ ಸಿ ಆಹಾರಗಳು
ಕಿತ್ತಳೆ, ನಿಂಬೆ ಹಣ್ಣು, ಸ್ಟ್ರಾಬೆರಿ,  ಪಪ್ಪಾಯದಂತಹ ಹಣ್ಣು ಹಂಪಲುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುತ್ತದೆ. ಇದು ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುವುದಲ್ಲದೆ, ಹಿಮೋಗ್ಲೋಬಿನ್ ಅಂಶ ಹೆಚ್ಚಲು ಕಾರಣವಾಗುತ್ತದೆ.
 
ಫೋಲಿಕ್ ಆಸಿಡ್ ಅಂಶ
ಕೆಂಪು ರಕ್ತಕಣಗಳ ಅಭಿವೃದ್ಧಿಗೆ ವಿಟಮಿನ್ ಬಿ ಅಗತ್ಯ. ಅಲ್ಲದೆ ಫೋಲಿಕ್ ಆಸಿಡ್ ಅಂಶ ಕಡಿಮೆಯಾದೊಡನೆ ಹಿಮೋಗ್ಲೋಬಿನ್ ಅಂಶವೂ ಕಡಿಮೆಯಾಗುವುದು. ಇದನ್ನು ಸುಧಾರಿಸುವುದಕ್ಕೆ ತಕ್ಕ ತರಕಾರಿಯೆಂದರೆ ಬೀಟ್ ರೂಟ್.
 
ಆಪಲ್ ಮತ್ತು ದಾಳಿಂಬೆ
ಆಪಲ್ ನಲ್ಲಿ ಆರೋಗ್ಯಕ್ಕೆ ಬೇಕಾದ ಎಲ್ಲಾ ಒಳ್ಳೆಯ  ಅಂಶಗಳೂ ಇವೆ. ಹಿಮೋಗ್ಲೋಬಿನ್ ಅಂಶ ಹೆಚ್ಚುವಂತಹ ಎಲ್ಲಾ ಅಂಶಗಳೂ ಆಪಲ್ ನಲ್ಲಿವೆ. ದ
ದಾಳಿಂಬೆಯಲ್ಲಿ ಕಬ್ಬಿಣದಂಶ, ಫೈಬರ್, ಕ್ಯಾಲ್ಶಿಯಂ ಹೇರಳವಾಗಿದೆ. ಹಾಗಾಗಿ ಶರೀರದಲ್ಲಿ ಹಿಮೋಗ್ಲೋಬಿನ್ ಅಂಶ ಸುಧಾರಿಸುತ್ತದೆ.
 
ಇದನ್ನೂ ಓದಿ..  ಮಾಜಿ ಆಟಗಾರರ ಕೈಲಾಗದ್ದು ಕೊಹ್ಲಿ ಪಡೆಗೆ ಸಾಧ್ಯವಾಯಿತೆಂದ ರವಿಶಾಸ್ತ್ರಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಾಲಿನೊಂದಿಗೆ ಇವುಗಳನ್ನು ಸೇವಿಸುವ ಮೊದಲು ಎಚ್ಚರಿಕೆ!

ಬೆಂಗಳೂರು: ಹಾಲು ಆರೋಗ್ಯಕ್ಕೆ ಉತ್ತಮ ಎನ್ನುವುದೇನೋ ನಿಜ. ಆದರೆ ಹಾಲು ಕುಡಿಯುವಾಗ ಜತೆಗೆ ಏನಾದರೂ ಸೇವಿಸುವ ...

news

ಡೆಲಿವರಿ ನಂತರ ಸೆಕ್ಸ್: ಮಹಿಳೆಯರು ಏಕೆ ಒಲ್ಲೆನೆಂತಾರೆ ಗೊತ್ತಾ?

ಬೆಂಗಳೂರು: ಹೆರಿಗೆ ಎನ್ನುವುದು ಹೆಣ್ಣಿನ ಜೀವನದಲ್ಲಿ ಪ್ರಮುಖ ಘಟ್ಟವಿದ್ದಂತೆ. ಹೆಚ್ಚಿನ ಮಹಿಳೆಯರು ...

news

ಆಲೂಗಡ್ಡೆ ಜ್ಯೂಸ್ ಕುಡಿಯುವದರಿಂದ ಎಷ್ಟೊಂದು ಲಾಭವಿದೆ ಗೊತ್ತಾ?

ಬೆಂಗಳೂರು: ಆಲೂಗಡ್ಡೆ ನಮ್ಮ ಅಡುಗೆ ಮನೆಗಳಲ್ಲಿ ಇರುವ ಸಾಮಾನ್ಯ ತರಕಾರಿ. ಆಲೂಗಡ್ಡೆಯಲ್ಲಿ ಹಲವು ಆರೋಗ್ಯಕರ ...

news

ಮಧುಮೇಹಿಗಳಿಗಾಗಿ ಈ ಹಣ್ಣುಗಳು

ಬೆಂಗಳೂರು: ಮಧುಮೇಹವಿದ್ದರೂ ಯಾವ ಹಣ್ಣು ತೆಗೆದುಕೊಳ್ಳಲೂ ಹಿಂಜರಿಯುತ್ತಾರೆ. ಹಾಗಿರುವಾಗ ಮಧುಮೇಹಿಗಳು ...

Widgets Magazine