ಹಲ್ಲುಗಳು ಫಳಫಳ ಹೊಳೆಯಲು ಹೀಗೆ ಮಾಡಿ..!!

ಅತಿಥಾ 

ಬೆಂಗಳೂರು, ಗುರುವಾರ, 25 ಜನವರಿ 2018 (13:43 IST)

ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಹಲ್ಲಿನ ಸಮಸ್ಯೆ ತಪ್ಪಿದ್ದಲ್ಲ. ಎಲ್ಲರಿಗೂ ಹಲ್ಲನ್ನು ಹೇಗೆ ಸ್ವಚ್ಛವಾಗಿ ಹೊಳೆಯುವಂತೆ ಇಟ್ಟುಕೊಳ್ಳುವುದು ಎನ್ನುವುದೇ ಸಮಸ್ಯೆ.

ದಿನಕ್ಕೆ 2-3 ಬಾರಿ ಬ್ರಶ್ ಮಾಡಿದರೂ ಸಹ ಕೆಲವರಿಗೆ ಹಲ್ಲುಗಳು ಹಳದಿ ಕರೆ ಕಟ್ಟುವುದು, ಹಲ್ಲಿನ ಹುಳುಕು ತಪ್ಪುವುದಿಲ್ಲ. ಅದರಿಂದ ಹೇಗೆ ಮುಕ್ತಿ ಪಡೆಯುವುದು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಓದಿ ತಿಳಿದುಕೊಳ್ಳಿ.
 
* ಒಂದು ಚಮಚ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಅದನ್ನು ಎಲ್ಲಾ ಹಲ್ಲುಗಳಿಗೂ ಸವರಿ. 5-10 ನಿಮಿಷಬಿಟ್ಟು ಬೆಚ್ಚಗಿನ ನೀರಿನಿಂದ ಬಾಯನ್ನು ಮುಕ್ಕಳಿಸಿ. ತೆಂಗಿನೆಣ್ಣೆಯಲ್ಲಿ ಲುರಿಕ್ ಆ್ಯಸಿಡ್‌ನ ಪ್ರಮಾಣ ಹೆಚ್ಚಾಗಿದ್ದು ಇದನ್ನು ದಿನವೂ ಹಲ್ಲಿಗೆ ಹಚ್ಚಿದರೆ ಬ್ಯಾಕ್ಟೀರಿಯಾಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
 
* ಎರಡು ಚಮಚ ನಿಂಬೆರಸದೊಂದಿಗೆ 1 ಚಮಚ ಬೇಕಿಂಗ್ ಸೋಡಾವನ್ನು ಮಿಕ್ಸ್ ಮಾಡಿ ಅದರಿಂದ ಬ್ರಶ್ ಮಾಡಿದರೆ ಹಲ್ಲಿನ ಮೇಲಿರುವ ಹಳದಿ ಕಲೆಯಿಂದ ಮುಕ್ತರಾಗಬಹುದು.
 
* ಒಂದು ಚಮಚ ಬೇಕಿಂಗ್ ಸೋಡಾದೊಂದಿಗೆ 2 ಚಮಚ ಹೈಡ್ರೋಜನ್ ಪೆರೊಕ್ಸೈಡ್‌ ಮಿಕ್ಸ್ ಮಾಡಿ ಅದರಿಂದ ದಿನವೂ ಬ್ರಶ್ ಮಾಡಿದರೆ ಹಲ್ಲುಗಳು ಸ್ವಚ್ಛವಾಗಿ ಬಿಳಿಯ ಹೊಳಪು ಬರುತ್ತದೆ ಮತ್ತು ಇದು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
 
* 2-3 ಚಮಚ ಆ್ಯಪಲ್ ಸೈಡರ್ ವಿನೆಗರ್ ಅನ್ನು ಸ್ವಲ್ಪ ನೀರಿಗೆ ಮಿಕ್ಸ್ ಮಾಡಿ ಅದರಿಂದ 3-4 ನಿಮಿಷ ಬಾಯಿ ಮುಕ್ಕಳಿಸಿ. ಇದರಲ್ಲಿ ಅಸೆಟಿಕ್ ಆ್ಯಸಿಡ್ ಇದ್ದು ಇದು ನಿಮ್ಮ ಬಾಯಲ್ಲಿನ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.
 
* ಆಹಾರದಲ್ಲಿ ಹೆಚ್ಚು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಬಳಸಿದರೆ ಅದು ನಿಮ್ಮ ಹಲ್ಲುಗಳನ್ನು ನೈಸರ್ಗಿಕವಾಗಿ ಬಿಳಿಯಾಗಿರುವಂತೆ ಮಾಡುತ್ತದೆ. ಸ್ಟ್ರಾಬೆರ್ರಿ ಮತ್ತು ಅನಾನಸ್ ಹಣ್ಣುಗಳನ್ನು ತಿಂದರೆ ಅದು ನಿಮ್ಮ ಹಲ್ಲುಗಳು ಬಿಳಿಯಾಗುವಂತೆ ಮಾಡುತ್ತದೆ.
 
ಈ ಸಲಹೆಗಳನ್ನು ನೀವೂ ಒಮ್ಮೆ ಪ್ರಯತ್ನಿಸಿ ನಿಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಎಗ್ ರೋಲ್

ಮೈದಾಕ್ಕೆ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಪರೋಟದ ಹದಕ್ಕೆ ಕಲೆಸಿ. ನಂತರ ಅದರಿಂದ ಮೀಡಿಯಂ ...

news

ಸ್ವಾದಿಷ್ಠ ಚಿಕನ್ ಪಕೋಡಾ

ಕೋಳಿ ಮಾಂಸವನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ಚೆನ್ನಾಗಿ ತೊಳೆದು ಪಾತ್ರೆಯೊಂದಕ್ಕೆ ಹಾಕಿ.

news

ಕಬ್ಬಿನ ಹಾಲಿನ ಮಹತ್ವ ನಿಮಗೆ ಗೊತ್ತಾ...!!!

ಬೇಸಿಗೆ ಬಂತೆಂದರೆ ಸಾಕು ಬಾಯಾರಿಕೆ ಆಗುವುದು ಸಹಜ ಅಲ್ಲದೇ ದೂರದ ಊರುಗಳಿಗೋ ಅಥವಾ ಎಲ್ಲಿಯಾದರೂ ಪ್ರಯಾಣ ...

news

ಸುವಾಸನೆ, ರುಚಿಯನ್ನು ಹೆಚ್ಚಿಸಲು ಶುಂಠಿ ಬಳಕೆ

ಆಹಾರದಲ್ಲಿ ಶುಂಠಿ ಬಳಸುವುದರಿಂದ ಅದರ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಆರೋಗ್ಯ ...

Widgets Magazine
Widgets Magazine