ನಿಮ್ಮ ಮೆದುಳು ಚುರುಕಾಗಬೇಕೇ, ಇಲ್ಲಿದೆ 8 ವಿಧಾನಗಳು

ಬೆಂಗಳೂರು, ಶನಿವಾರ, 30 ಡಿಸೆಂಬರ್ 2017 (14:12 IST)

ನೀವು ಇತರರಿಗಿಂತ ಬುದ್ಧಿವಂತರಾಗಬೇಕು ಎಂಬ ಅಭಿಲಾಷೆ ಇಲ್ಲವೇ? ಆದರೆ ವಯಸ್ಸು ಏರುತ್ತಿದ್ದಂತೆ ನಮ್ಮ ಕೀಲುಗಳು ಮತ್ತು ಶ್ವಾಸಕೋಶಗಳ ಸಾಮರ್ಥ್ಯ ಕೂಡ ಕುಸಿಯಲಾರಂಭಿಸುತ್ತದೆ. ಆದರೆ ನಮ್ಮ ಮೆದುಳು ಕೂಡ ವಯಸ್ಸಾದಂತೆಲ್ಲ ಶಕ್ತಿ ಕಳೆದುಕೊಳ್ಳುತ್ತದೆಂದು ಯೋಚಿಸಿದರೆ ಭಯವಾಗುವುದಿಲ್ಲವೇ? . ಹಾಗಾದರೆ ವಯಸ್ಸು ಹೆಚ್ಚುತ್ತಿದ್ದರೂ ಮೆದುಳನ್ನು ಕ್ರಿಯಾಶೀಲವಾಗಿಸಲು ಏನು ಮಾಡಬೇಕು? ಗಡಿಯಾರದ ಮುಳ್ಳಿನಂತೆ ಮೆದುಳು ಸದಾ ಟಿಕ್ ಟಿಕ್ ಎನ್ನಲು ಇಲ್ಲಿದೆ ಕೆಲವು ಸೂತ್ರಗಳು-
ದೇಹವನ್ನು ಚಲನೆಯ ಸ್ಥಿತಿಯಲ್ಲಿಡಿ
 
ನಿಯಮಿತ ಏರೋಬಿಕ್ ವ್ಯಾಯಾಮಗಳಿಂದ ನಿಮ್ಮ ಮೆದುಳಿಗೆ ಸುದೀರ್ಘ ಆರೋಗ್ಯವನ್ನು ನೀಡಬಹುದು. ಮಾನಸಿಕ ದಾರ್ಢ್ಯತೆಗೆ ವಾರಕ್ಕೆ ಮೂರು ಬಾರಿಯಾದರೂ 30 ನಿಮಿಷಗಳ ದೈಹಿಕ ಚಟುವಟಿಕೆ ನಡೆಸಿ. ಟೆನ್ನಿಸ್, ಕ್ರಿಕೆಟ್ ಅಥವಾ ಸ್ಕ್ವಾಷ್, ಷಟಲ್ ಮಂತಾದ ಆಟವಾಡುವುದರಿಂದ ಏಕಾಗ್ರತೆ ಮತ್ತು ಮಾನಸಿಕ ಜಾಗ್ರತೆ ಸುಧಾರಿಸುತ್ತದೆ. ನಿಮ್ಮ ರಕ್ತಪರಿಚಲನೆ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿರಿಸಲು ವ್ಯಾಯಾಮ ಉತ್ತಮ ವಿಧಾನವಾಗಿದೆ. ಸಿಗರೇಟ್ ಸೇವನೆ ತ್ಯಜಿಸುವುದು ಮತ್ತು ಸ್ಯಾಚ್ಯುರೇಟೆಡ್ ಕೊಬ್ಬಿನ ಸೇವನೆ ತಪ್ಪಿಸುವುದರಿಂದ ಮೆದುಳಿಗೆ ವಯಸ್ಸಿಗೆ ಸಂಬಂಧಿಸಿದ ಹಾನಿ ತಪ್ಪುತ್ತದೆ.
 
ಕಾಫಿ ಅಥವಾ ಚಹಾ ಸೇವಿಸಿ ಪರ್ವಾಗಿಲ್ಲ
ನೀವು ಕಾಫಿ ಸೇವನೆ ಇಷ್ಟಪಡುವುದಾದರೆ ಅದಕ್ಕೆ ಉತ್ತೇಜನ ನೀಡುವುದರಲ್ಲಿ ತಪ್ಪಿಲ್ಲ. ದಿನಕ್ಕೆ ಎರಡು ಕಪ್ ಕಾಫಿ ಅಲ್ಜಮೇರ್ ಕಾಯಿಲೆಯನ್ನು ಶೇ. 30ರಿಂದ 60ರಷ್ಟು ಕಡಿಮೆಮಾಡುತ್ತದೆ. ಕಾಫಿ ಮತ್ತು ಚಹಾದಲ್ಲಿರುವ ಕೆಫೀನ್ ಅಥವಾ ಆಂಟಿಆಕ್ಸಿಡೆಂಟ್ ಇದಕ್ಕೆ ಕಾರಣವಿರಬಹುದೆಂದು ಭಾವಿಸಲಾಗಿದೆ.
 
ನಿಮ್ಮ ಮೆದುಳಿಗೆ ಕಸರತ್ತು ಕೊಡಿ
ಕ್ರಾಸ್‌ವರ್ಡ್‌ಗಳು, ಒಗಟುಗಳು, ಸುಡೋಕು ಮತ್ತಿತರ ಮೆದುಳಿಗೆ ಕಸರತ್ತು ಕೊಡುವ ಕ್ರಿಯೆಗಳಿಂದ ನಿಮ್ಮ ಮೆದುಳು ಹರಿತಗೊಳ್ಳುತ್ತದೆ. ನೀವು ಹೆಚ್ಚು ಕಲಿಯುವುದಕ್ಕೆ ಆಸಕ್ತಿ ತೋರಿದರೆ ವೃದ್ಧಾಪ್ಯದಲ್ಲಿ ಮೆದುಳು ಸುಸ್ಥಿತಿಯಲ್ಲಿರುತ್ತದೆ.
 
ಆಹಾರ ಸೇವನೆ
ಅಧಿಕ ನಾರಿನ ಅಂಶದ ಆಹಾರ ಸೇವನೆ ಜತೆಗೆ ಸಾಧಾರಣ ಕೊಬ್ಬು ಮತ್ತು ಪ್ರೋಟೀನ್ ಆಹಾರ ಸೇವನೆ ನಿಧಾನವಾಗಿ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಕರುಳಿನಲ್ಲಿ ಸ್ಥಿರಗತಿಯಲ್ಲಿ ಜೀರ್ಣಕ್ರಿಯೆಯಾಗುವುದು ಮೆದುಳಿಗೆ ಶಕ್ತಿಯ ಹರಿವನ್ನು ನೀಡುತ್ತದೆ. ಇದರಿಂದ ಮೆದುಳಿನ ಸುದೀರ್ಘ ಆರೋಗ್ಯ ಮತ್ತು ಕಾರ್ಯನಿರ್ವಹಣೆಗೆ ನೆರವಾಗುತ್ತದೆ. ಅತಿಯಾದ ಆಹಾರ ಸೇವನೆ ಮೆದುಳಿಗೆ ಹಾನಿಕರ, ಅತಿ ಕಡಿಮೆ ಕ್ಯಾಲರಿಗಳ ಸೇವನೆ ಕೂಡ ಮೆದುಳಿನ ಕ್ರಿಯೆಯನ್ನು ಕುಂಠಿತಗೊಳಿಸುತ್ತದೆ. 
ಚೆನ್ನಾಗಿ ನಿದ್ರೆ ಮಾಡಿ
 
ನಾವು ಚೆನ್ನಾಗಿ ನಿದ್ರೆ ಮಾಡುವುದಿಂದ ಜ್ಞಾಪಕ ಶಕ್ತಿ ಚೆನ್ನಾಗಿರುತ್ತದೆ. ನಾವು ನಿದ್ರೆ ಮಾಡದಿದ್ದರೆ, ಪ್ರೊಟೀನ್ ನರಕೋಶ ಸಂಗಮಗಳಲ್ಲಿ ಸಂಗ್ರಹವಾಗಿ ಯೋಚನೆ ಶಕ್ತಿ ಕುಂಠಿತಗೊಳಿಸುತ್ತದೆ. ಅನೇಕ ದಿನಗಳವರೆಗೆ ಸರಿಯಾಗಿ ನಿದ್ರೆಮಾಡದಿರುವುದು ಇಳಿ ವಯಸ್ಸಿನಲ್ಲಿ ಜ್ಞಾಪಕ ಶಕ್ತಿ ಕುಂದುವಂತೆ ಮಾಡುತ್ತದೆ.
ಸ್ವಲ್ಪ ಮೀನು ಸೇವಿಸಿ
 
ನೀವು ಮಾಂಸಾಹಾರಿಯಾಗಿದ್ದರೆ, ಸ್ವಲ್ಪ ಮೀನು ಸೇವಿಸುವುದು ಒಳ್ಳೆಯದು.ಓಮೇಗಾ 3 ಮುಂತಾದ ಅವಶ್ಯಕ ಫ್ಯಾಟಿ ಆಸಿಡ್ ಮೆದುಳಿನ ಕ್ರಿಯಾಶೀಲತೆಗೆ ಒಳ್ಳೆಯದಾಗಿದ್ದು, ಖಿನ್ನತೆ ಮುಂತಾದ ಕಾಯಿಲೆಗಳನ್ನು ನಿವಾರಿಸುತ್ತದೆ.
 
ಪೂರಕಗಳನ್ನು ಸೇವಿಸಬೇಡಿ
ಮೇಲಿನ ಎಲ್ಲ ವಿಧಾನಗಳನ್ನು ಅಳವಡಿಸಿಕೊಳ್ಳಿ, ಆದರೆ ಜ್ಞಾಪಕಶಕ್ತಿ ವೃದ್ಧಿಗೆ ಯಾವುದೇ ಮಾತ್ರೆಗಳನ್ನು ಸೇವಿಸಬೇಡಿ. ಏಕೆಂದರೆ ಅವು ಯಾವುದೇ ಅಡ್ಡಪರಿಣಾಮಗಳಿಂದ ಮುಕ್ತವಾಗಿಲ್ಲ. ಉದಾಹರಣೆಗೆ ಅಧಿಕ ರಕ್ತದ ಒತ್ತಡ, ಜೀರ್ಣಕ್ರಿಯೆಗೆ ತೊಂದರೆ, ಫಲವತ್ತತೆ ಸಮಸ್ಯೆಗಳು ಮತ್ತು ಖಿನ್ನತೆ ಉಂಟಾಗಬಹುದು. ಒಂದು ಮುಷ್ಠಿ ಗಾತ್ರದಷ್ಟು ಬಾದಾಮಿಯನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ಇದು ಜ್ಞಾಪಕಶಕ್ತಿ ವೃದ್ಧಿಯ ಆಹಾರವೆಂದು ಪರಿಗಣಿಸಲಾಗಿದೆ.
ಟೇಕ್ ಇಟ್ ಈಸಿ.
 
ಯಾವುದೇ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಬೇಡಿ. ಮಾನಸಿಕ ಒತ್ತಡ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಜ್ಞಾಪಕಶಕ್ತಿಯಲ್ಲಿ ಒಳಗೊಂಡಿರುವ ಮೆದುಳಿನ ಹಿಪ್ಪೋಕ್ಯಾಂಪಸ್ ಮತ್ತಿತರ ಸ್ಥಳಗಳಲ್ಲಿರುವ ರಾಸಾಯನಿಕಗಳನ್ನು ಅವು ಅಳಿಸಿಹಾಕುತ್ತವೆ. ಸಮತೋಲಿತ ಜೀವನಶೈಲಿ, ಸದಾ ಯಾವುದಾದರೂ ಹಾಬಿ ರೂಢಿಸಿಕೊಂಡು, ಸಂಗೀತ ಕೇಳುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಯೋಗ ಮತ್ತು ಧ್ಯಾನ ನಿಮ್ಮ ನರಗಳನ್ನು ಶಾಂತಗೊಳಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ನಿಂದ ಆರೋಗ್ಯಕ್ಕೆ ಈ ಲಾಭ ಗ್ಯಾರಂಟಿ!

ಬೆಂಗಳೂರು: ಸೆಕ್ಸ್ ಎನ್ನುವುದು ಕೇವಲ ದೈಹಿಕ ಕಾಮನೆಗಳನ್ನು ಪೂರೈಸುವ ಪ್ರಕ್ರಿಯೆ ಮಾತ್ರವಲ್ಲ. ಈ ಬೆಡ್ ರೂಂ ...

news

ಯಾವುದೇ ಖರ್ಚಿಲ್ಲದೇ ಮನೆಯಲ್ಲೇ ಸುಲಭವಾಗಿ ಕೂದಲಿಗೆ ಕಲರ್ ನೀಡಿ

ಬೆಂಗಳೂರು: ಕೂದಲಿಗೆ ಕಲರ್ ಮಾಡಲು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಬ್ಯೂಟಿ ಪ್ರೊಡಕ್ಟ್ ಗಳು ಸಿಗುತ್ತವೆ. ...

news

ಕಣ್ಣಿನ ದೃಷ್ಟಿ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಬೆಂಗಳೂರು: ಈಗ ಹೆಚ್ಚಿನವರಿಗೆ ಕಣ್ಣಿನ ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ಎದುರುಗಡೆ ಇರುವ ವ್ಯಕ್ತಿ, ...

news

ಈ ಐದು ಲಕ್ಷಣಗಳಿಂದ ನೀವು ಗರ್ಭಿಣಿಯಾಗಿದ್ದೀರಿ ಎಂದು ಸುಲಭವಾಗಿ ತಿಳಿಯಬಹುದು

ಬೆಂಗಳೂರು: ಮದುವೆ ಮುಗಿದ ತಿಂಗಳು ಕಳೆದರೆ ಹುಡುಗಿ ವಾಂತಿ ಮಾಡಿದಾಕ್ಷಣ ಮನೆಯವರು ಆಕೆ ಗರ್ಭಿಣಿ ಎಂದು ...

Widgets Magazine
Widgets Magazine