ಪುರುಷರ ಅಂದವನ್ನು ಹೆಚ್ಚಿಸಲು ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು, ಗುರುವಾರ, 11 ಜನವರಿ 2018 (07:32 IST)

Widgets Magazine

ಬೆಂಗಳೂರು : ಅಂದವಾಗಿ ಕಾಣಬೇಕೆಂಬ  ಹಂಬಲ ಎಲ್ಲರಿಗೂ ಇರುತ್ತದೆ. ಇದರಲ್ಲಿ ಲಿಂಗ  ಭೇಧವಿಲ್ಲ. ಹುಡುಗಿಯರ ಮುಖದಲ್ಲಿ ಕಲೆಗಳಿರುವಂತೆ  ಹುಡುಗರ ಮುಖದಲ್ಲೂ ಕೂಡ ಕಲೆಗಳು ಕಂಡುಬರುತ್ತದೆ. ಆದರೆ ಹುಡುಗಿಯರು ಅಂದವಾಗಿ ಕಾಣಲು ಅನೇಕ ಮೇಕಪ್ ಸಾಮಾಗ್ರಿಗಳನ್ನು ಬಳಸಿ ಕಲೆಗಳನ್ನು ಮುಚ್ಚಿಕೊಳ್ಳುತ್ತಾರೆ. ಹುಡುಗರು ಮಾತ್ರ ಕಲೆಗಳನ್ನು ನಿವಾರಿಸಲು ಹರಸಾಹಸ ಮಾಡುತ್ತಾರೆ. ಪುರುಷರು ಹೊರಗಡೆ ಹೆಚ್ಚಾಗಿ ತಿರುಗುವುದರಿಂದ ಮುಖದ ಅಂದ ಕೆಡುವುದು ಸಹಜ. ಹುಡುಗಿಯರ ಬ್ಯೂಟಿ ಟ್ರಿಟ್ ಮೆಂಟ್ ಗಳು ಹುಡುಗರಿಗೆ ಸರಿಯಾಗಲ್ಲ. ಯಾಕೆಂದರೆ ಅವರ ಚರ್ಮ ಗಡಸಾಗಿರುತ್ತದೆ. ಅವರು ಕೂಡ ಕೆಲವು  ಮನೆಮದ್ದನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು.


1 ನಿಂಬೆಹಣ್ಣೀನ ರಸ ತೆಗೆದು ಅದನ್ನು 1 ಚಮಚ ಮೊಸರಿನೊಂದಿಗೆ ಸೇರಿಸಿ ಚೆನ್ನಾಗಿ ಮಾಡಿ ಅದನ್ನು ಮುಖಕ್ಕೆ ಹಚ್ಚಿಕೊಂಡು 20-25 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಇದನ್ನು ವಾರದಲ್ಲಿ ಮೂರು ಬಾರಿಯಾದರೂ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.


2 ಚಮಚ ಆಲಿವ್ ಆಯಿಲ್ ಹಾಗು 1 ಚಮಚ ವಿನೆಗರ್ ತೆಗೆದುಕೊಂಡು ಎರಡನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಚ್ಚವಾಗಿರುವ ಚರ್ಮದ ಮೇಲೆ ಹಚ್ಚಿಕೊಳ್ಳಿ. ½ ಗಂಟೆಹಾಗೆ ಬಿಟ್ಟು ನಂತರ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ. ವಾರದಲ್ಲಿ 2 ಬಾರಿ ಮಾಡಿ.


2ಚಮಚ ಕಡಲೆಹಿಟ್ಟು, 1ಚಮಚ ಮಜ್ಜಿಗೆ, 1 ಚಮಚ ಟೊಮೆಟೊ ಜ್ಯೂಸ್, ½ ಚಮಚ ಅರಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಹಾಗೆ ಬಿಡಿ. ನಂತರ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ. ಇದನ್ನು ಪ್ರತಿದಿನ ಮಾಡಿದರೆ ಪುರುಷರ ಚರ್ಮದ ಕಾಂತಿ ಹೆಚ್ಚಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಮಕ್ಕಳ ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಮಕ್ಕಳು ಎಲ್ಲಾ ರೀತಿಯ ತಿಂಡಿ ತಿನಿಸುಗಳನ್ನು ತಿನ್ನುವುದರಿಂದ ಅವರಿಗೂ ಕೂಡ ಗ್ಯಾಸ್ಟ್ರಿಕ್ ...

news

ಅವಳಿ ಮಕ್ಕಳು ಜನಿಸಲು ಕಾರಣವಾಗುವ ಅಂಶಗಳು ಏನು ಗೊತ್ತಾ…?

ಬೆಂಗಳೂರು : ಕೆಲವು ಮಹಿಳೆಯರು ಅವಳಿ ಮಕ್ಕಳನ್ನು ಪಡೆಯಲು ಬಯಸುತ್ತಾರೆ. ಕೆಲವರಿಗೆ ಸಮಯದ ಅಭಾವ, ಕೆಲವರಿಗೆ ...

news

ಕಾರ್ನ್ ಕಬಾಬ್

ಒಂದು ಬಟ್ಟಲಲ್ಲಿ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿ

news

ಪಪ್ಪಾಯಿ ಹಣ್ಣಿನ ಪ್ರಯೋಜನಗಳು

ಪಪ್ಪಾಯದ ಆರೋಗ್ಯ ಪ್ರಯೋಜನಗಳು ಉತ್ತಮ ಜೀರ್ಣಕ್ರಿಯೆ, ಹಲ್ಲುನೋವು, ನಿಯಂತ್ರಿತ ಮುಟ್ಟಿನಿಂದ ಉಂಟಾಗುವ ಶಮನ, ...

Widgets Magazine