ನಾಲಿಗೆಯಲ್ಲಿ ಮೂಡಿರುವ ಬೊಕ್ಕೆಗಳ ನಿವಾರಣೆಗೆ ಇಲ್ಲಿದೆ ಮನೆಮದ್ದು

ಬೆಂಗಳೂರು, ಗುರುವಾರ, 1 ಫೆಬ್ರವರಿ 2018 (06:14 IST)

ಬೆಂಗಳೂರು : ತುಂಬಾ ಬಿಸಿಯಾಗಿರುವ ಸೇವನೆನಯಿಂದಾಗಿ ನಾಲಗೆ ಸುಡುತ್ತದೆ. ಇದರಿಂದ ನಾಲಗೆ ಮೇಲೆ ಬೊಕ್ಕೆಗಳು ಮೂಡುತ್ತದೆ.. ಇದು ಗುಣವಾಗಲು ಕೆಲವು ದಿನಗಳೇ ಬೇಕಾಗುವುದು. ಕೆಲವೊಮ್ಮೆ ಆಹಾರ ಜಗಿಯುವಾಗ ಅಥವಾ ಮಾತನಾಡುವಾಗ ಕೂಡ ನಾಲಗೆ ಕಚ್ಚಿ ಹೋಗುವುದು ಇದೆ. ನಾಲಗೆಯಲ್ಲಿ ಬೊಕ್ಕೆಗಳು ಮೂಡಿದರೆ ಅದರಿಂದ ಏನೇ ತಿಂದರೂ ರುಚಿ ಸಿಗದು. ಈ ಸಮಸ್ಯೆ ಒಂದು ವಾರ ಕಾಲ ಇರುವುದು. ಆದರೆ ಮನೆಮದ್ದು ಬಳಸಿಕೊಂಡು ಇದನ್ನು ಬೇಗನೆ ನಿವಾರಿಸಬಹುದು.


ಉಪ್ಪು : ನಾಲಗೆಯಲ್ಲಿ ಮೂಡಿರುವ ಬೊಕ್ಕೆಗಳಿಗೆ ಉಪ್ಪು ತುಂಬಾ ಪರಿಣಾಮಕಾರಿ ಮನೆ ಔಷಧಿ. ಇದು ಉರಿಯೂತ ಮತ್ತು ನೋವು ನಿವಾರಣೆ ಮಾಡುವುದು. ಇದು ಬ್ಯಾಕ್ಟೀರಿಯಾ ಕೊಲ್ಲುವುದು ಮತ್ತು ಸೋಂಕು ತಡೆಯುವುದು. ಒಂದು ಚಮಚ ಉಪ್ಪನ್ನು ಉಗುರುಬೆಚ್ಚಗಿನ ನೀರಿಗೆ ಹಾಕಿ ಕಲಸಿ. ಇದನ್ನು ಬಾಯಿಗೆ ಹಾಕಿಕೊಂಡು ಸುಮಾರು 30 ಸೆಕೆಂಡು ಕಾಲ ಹಾಗೆ ಬಿಡಿ. ಬಳಿಕ ಉಗುಳಿ. ದಿನದಲ್ಲಿ ಐದು ಸಲ ಹೀಗೆ ಮಾಡಿದರೆ ಫಲಿತಾಂಶ ಸಿಗುವುದು.


ಅರಶಿನ : ನಾಲಗೆಯ ಬೊಕ್ಕೆಯಿಂದ ಉಂಟಾಗಿರುವಂತಹ ನೋವು ಹಾಗೂ ಉರಿಯೂತವನ್ನು ಅರಶಿನದಲ್ಲಿ ಇರುವಂತಹ ನಂಜುನಿರೋಧಕ ಗುಣವು ನಿವಾರಣೆ ಮಾಡುವುದು. ಅರ್ಧ ಚಮಚ ಅರಶಿನ ಹುಡಿಗೆ ಒಂದು ಚಮಚ ಹಾಕಿ ಕಲಸಿಕೊಂಡು ಅದನ್ನು ಬೊಕ್ಕೆಗಳಿಗೆ ಹಚ್ಚಿಕೊಳ್ಳಿ. ಮೂರು ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಎದೆ ಹಾಲುಣಿಸುವ ತಾಯಂದಿರ ಸ್ತನದ ತೊಟ್ಟಿನಲ್ಲಾಗುವ ನೋವಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಹಾಲುಣಿಸುವ ತಾಯಂದಿರಲ್ಲಿ ಕಂಡುಬರುವ ಸಮಸ್ಯೆಯೆಂದರೆ ಸ್ತನದ ತೊಟ್ಟಿನಲ್ಲಾಗುವ ನೋವು ಹಾಗು ...

news

ಮುಖದಲ್ಲಿ ಮೊಡವೆ ಇದೆಯೇ...? ಹಾಗಾದರೆ ಈ ಮದ್ದನ್ನು ಮಾಡಿನೋಡಿ

ಬೆಂಗಳೂರು : ಮುಖದಲ್ಲಿ ಒಂದು ಮೊಡವೆ ಕಂಡರೆ ಸಾಕು, ಮನಸ್ಸಿಗೆ ಏನೋ ಬಂದು ಬಗೆಯ ಕಿರಿಕಿರಿ. ಆ ಮೊಡವೆ ...

news

ಚಪಾತಿಗೆ ತುಪ್ಪ ಹಾಕಿ ತಿನ್ನುವುದು ಆರೋಗ್ಯಕರವೇ?

ಬೆಂಗಳೂರು: ಸಾಮಾನ್ಯವಾಗಿ ನಾವು ನಮ್ಮ ಆಹಾರದಲ್ಲಿ ಸಾಕಷ್ಟು ತುಪ್ಪ ಬಳಸುತ್ತೇವೆ. ತುಪ್ಪ ಹಾಕಿ ಚಪಾತಿ ...

news

ಟೊಮೆಟೋವನ್ನು ಫ್ರಿಡ್ಜ್ ನಲ್ಲಿಡುತ್ತಿದ್ದೀರಾ? ಹಾಗಿದ್ದರೆ ಇದನ್ನು ತಪ್ಪದೇ ಓದಿ!

ಬೆಂಗಳೂರು: ಸಾಮಾನ್ಯವಾಗಿ ಬೇಗನೇ ಕೊಳೆಯುವ ವಸ್ತು ಎನ್ನುವ ಕಾರಣಕ್ಕೆ ಟೊಮೆಟೋವನ್ನು ನಾವು ತುಂಬಾ ...

Widgets Magazine