ಅಂಡಾಣು ಬಿಡುಗಡೆಯಾಗಿದೆ ಎಂದು ಹೇಗೆ ತಿಳಿಯುವುದು ಗೊತ್ತಾ...?

ಬೆಂಗಳೂರು, ಬುಧವಾರ, 24 ಜನವರಿ 2018 (14:14 IST)

ಬೆಂಗಳೂರು : ಗರ್ಭ ಧರಿಸಬೇಕಾದರೆ ಅಂಡಾಣು ಬಿಡುಗಡೆಯಾಗಬೇಕು, ಮಹಿಳೆಯಲ್ಲಿ ಅಂಡಾಣು ತಿಂಗಳಿಗೆ ಒಮ್ಮೆ ಮಾತ್ರ ಬಿಡುಗಡೆಯಾಗುತ್ತದೆ. ಆದರೆ ಅಂಡಾಣು ಬಿಡುಗಡೆ ಸಮಯದಲ್ಲಿ ಮಹಿಳೆಯರಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ. ಅಂಡಾಣು ಬಿಡುಗಡೆಯಾಗಿದೆ ಎಂದು ಹೇಗೆ ಗೊತ್ತಾಗುತ್ತದೆ ಎಂಬುದು ತಿಳಿಯಬೇಕು.

 
ಯಾರೇ ಆಗಲಿ ಮುಟ್ಟಾದ ಮೊದಲ ದಿನದಿಂದ ಮತ್ತೆ ಮುಟ್ಟಾಗುವ ತನಕ ನಿತ್ಯ ಬೆಳಿಗ್ಗೆ ನಿದ್ದೆಯಿಂದ ಎದ್ದ ಕೂಡಲೆ ಥರ್ಮಾ ಮೀಟರ್ ನಿಂದ ಟೆಂಪರೇಚರ್ ಚೆಕ್ ಮಾಡಿಕೊಂಡು , ನಿತ್ಯ ಒಂದು ಪೇಪರ್ ನಲ್ಲಿ ಬರೆದುಕೊಳ್ಳಬೇಕು. ಆ ರೀತಿ ಸ್ವಲ್ಪ ದಿನಗಳವರೆಗೆ ಟೆಂಪರೇಚರ್ 96.6 ನಿಂದ 97.4 ಇರುತ್ತದೆ. ಆ ಬಳಿಕ ಇದ್ದಕ್ಕಿದ್ದಂತೆ ಒಂದು ದಿನ 99 ಡಿಗ್ರಿ ಫಾರನ್ ಹೀಟ್ ವರೆಗೂ ಜಾಸ್ತಿಯಾಗಿ ಕೆಲವು ದಿನ ಹೀಗೆಯೇ ಇರುತ್ತದೆ. ಹೀಗೆ 10 ರಿಂದ 12 ದಿನಗಳ ತನಕ ಇರುತ್ತದೆ. ಬಳಿಕ ಮತ್ತೆ ಟೆಂಪರೇಚರ್ ಕಡಿಮೆಯಾಗಿ ಎರಡು ಮೂರು ದಿನಗಳಲ್ಲಿ ಮುಟ್ಟಾಗುತ್ತದೆ. ಹೀಗೆ ಇದ್ದಕ್ಕಿದ್ದಂತೆ ಟೆಂಪರೇಚರ್ ಹೆಚ್ಚಾದ ದಿನ ಅಂಡಾಣು ಬಡುಗಡೆಯಾಗುತ್ತದೆ. ಇದರಿಂದ ಹೊಟ್ಟೆ ನೋವಿನಿಂದ ಕೆಲವು ಮಹಿಳೆಯರು ಬಳಲುತ್ತಿರುತ್ತಾರೆ. ಈ ಸಮಯದಲ್ಲಿ ಪ್ರೊಜೆಸ್ಟರಾನ್ ಎಂಬ ಹಾರ್ಮೋನ್ ಹೆಚ್ಚಾಗಿ ಬಿಡುಗಡೆಯಾಗುತ್ತದೆ.ಹಾಗಾಗಿ ದೇಹದ ಉಷ್ಣತೆ ಸಹ ಹೆಚ್ಚಾಗಿ ಅಂಡಾಣು ಬಿಡುಗಡೆಯಾಗುತ್ತದೆ. ಇವೆಲ್ಲಾ ಮಹಿಳೆಯಲ್ಲಿ ಅಂಡಾಣು ಬಿಡುಗಡೆಯಾಗುತ್ತಿದೆ ಎಂಬುದಕ್ಕೆ ಸೂಚನೆಗಳು. ಆದರೆ ಗರ್ಭಿಣಿಯರಲ್ಲಿ ದೇಹದ ಉಷ್ಣತೆ ಕಡಿಮೆಯಯಾಗದಂತೆ ಹಾಗೆಯೇ ಇರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಐ ಲವ್ ಯೂ ಹೇಳದೇ ಪ್ರಪೋಸ್ ಮಾಡುವುದು ಹೇಗೆ?

ಬೆಂಗಳೂರು: ಎಷ್ಟೋ ಪ್ರೇಮಿಗಳಿಗೆ ಒಬ್ಬರನ್ನು ಇಷ್ಟವಾದರೂ ಬಾಯಿ ಬಿಟ್ಟು ಐ ಲವ್ ಯೂ ಎನ್ನುವ ಮೂರು ಶಬ್ಧ ...

news

ಒಡೆದ ಹಿಮ್ಮಡಿಗೆ ಈ ಮನೆ ಮದ್ದು ಮಾಡಿ

ಬೆಂಗಳೂರು: ಚಳಿಗಾಲದಲ್ಲಿ ಹೆಚ್ಚಿನವರಿಗೆ ಕಾಲಿನ ಹಿಮ್ಮಡಿ ಒಡೆದು ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ...

news

ಕುರು ನೋವಿನಿಂದ ಬಳಲುತ್ತಿದ್ದೀರಾ...?ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಕೆಲವರ ಕಾಲಲ್ಲಿ ಕುರು ಆಗುವುದು ಕಂಡುಬರುತ್ತದೆ. ಅದು ತುಂಬಾ ನೋವನ್ನುಂಟುಮಾಡುತ್ತದೆ. ಇದು ...

news

ಬೇಗನೆ ಆರೋಗ್ಯಕರವಾಗಿ ಸಣ್ಣಗಾಗ ಬೇಕೆ…? ಈ ಮನೆಮದ್ದನ್ನು ಮಾಡಿ ನೋಡಿ

ಬೆಂಗಳೂರು : ಹಚ್ಚಿನವರಿಗೆ ದಪ್ಪ ಆಗಲು ಇಷ್ಟವಿರುವುದಿಲ್ಲ. ತಿನ್ನುವುದು ಎಷ್ಟೇ ಕಡಿಮಮಾಡಿದರೂ ಅವರ ದೇಹ ...

Widgets Magazine