ಕಪ್ಪಾಗಿರುವ ಚರ್ಮವನ್ನು ಬಿಳಿಯಾಗಿಸಿಕೊಳ್ಳುವುದು ಹೇಗೆ...!?

ಬೆಂಗಳೂರು, ಮಂಗಳವಾರ, 5 ಜೂನ್ 2018 (16:26 IST)

ಎಲ್ಲ ಯುವಕ ಯುವತಿಯರಿಗೂ ತಾವು ಶ್ವೇತವರ್ಣದವರಾಗಿರಬೇಕು ಎನ್ನುವ ಹಂಬಲವಿರುತ್ತದೆ. ಇನ್ನು ಕೆಲವರ ಚರ್ಮ ಬಿಳಿಯಾಗಿದ್ದರೂ ಸತತವಾಗಿ ಬಿಸಿಲಿನಲ್ಲಿ ಇರುವ ಕಾರಣ ಟ್ಯಾನ್ ಆಗಿ ಚರ್ಮದ ಬಣ್ಣ ಕಂದಾಗಿರುತ್ತದೆ.

ಆದರೆ ನೀವು ಮನೆಯಲ್ಲಿಯೇ ಕೆಲವು ಟಿಪ್‌ಗಳನ್ನು ಪಾಲಿಸಿ ಹೊಳೆಯುವ ಕಾಂತಿಯುತವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು. ಅದಕ್ಕಾಗಿ ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಿ ನೋಡಿ.
 
ಒಂದು ಚಿಕ್ಕ ಬೌಲ್‌ನಲ್ಲಿ 1 ಚಮಚ ಜೇನುತುಪ್ಪ, 3 ಚಮಚ ಕಿತ್ತಳೆ ರಸ ಮತ್ತು 1 ಚಮಚ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನಿಮ್ಮ ಟ್ಯಾನ್ ಆಗಿರುವ ಅಥವಾ ಕಪ್ಪಾಗಿರುವ ಚರ್ಮದ ಭಾಗಕ್ಕೆ ಹಚ್ಚಿ ಕಟ್ ಮಾಡಿದ ನಿಂಬೆ ಹಣ್ಣಿನ ಸಹಾಯದಿಂದ ಚೆನ್ನಾಗಿ ಸ್ಕ್ರಬ್ ಮಾಡಿ. ನಂತರ ಕಾಟನ್ ಸಹಾಯದಿಂದ ಅದನ್ನು ತೆಗೆಯಿರಿ.
 
3 ಚಮಚ ಅಕ್ಕಿ ಹಿಟ್ಟು, 1/2 ಚಮಚ ಹೈಡ್ರೋಜನ್ ಪೈರಾಕ್ಸೈಡ್, 4 ಚಮಚ ಶಿಯಾ ಬಟರ್, 2 ಚಮಚ ಕಿತ್ತಳೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನೀವು ಈ ಮೊದಲೇ ಸ್ಕ್ರಬ್ ಮಾಡಿರುವ ಚರ್ಮದ ಭಾಗಕ್ಕೆ ಹಚ್ಚಿ 30 ನಿಮಿಷ ಹಾಗೆಯೇ ಬಿಡಿ. ನಂತರ ನೀರನ್ನು ಸೋಕಿಸಿ ಚೆನ್ನಾಗಿ ತೊಳೆದುಕೊಳ್ಳಿ. ಶಿಯಾ ಬಟರ್ ಉತ್ತಮ ಮಾಯಿಶ್ಚರೈಸರ್‌ನ ಪ್ರಮಾಣವನ್ನು ಹೊಂದಿದ್ದು ಅದು ಚರ್ಮದ ಆರೋಗ್ಯಕ್ಕೆ ಉತ್ತಮವಾದುದಾಗಿದೆ. ಹೈಡ್ರೋಜನ್ ಪೈರಾಕ್ಸೈಡ್ ಅನ್ನು ನಿಮಗೆ ಇಷ್ಟವಿದ್ದರೆ ಮಾತ್ರವೇ ಬಳಸಿಕೊಳ್ಳಬಹುದು. ಹೀಗೆ ನೀವು ನಿರಂತರವಾಗಿ 30-40 ದಿನಗಳವರೆಗೆ ಮಾಡುತ್ತಾ ಬಂದರೆ ನಿಮ್ಮ ಚರ್ಮ ಕಾಂತಿಯುತವಾಗಿ ಬಿಳಿಯ ಬಣ್ಣಕ್ಕೆ ತಿರುಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಮ್ಮ ತಲೆಗೂದಲಿನ ಉತ್ತಮ ಆರೋಗ್ಯಕ್ಕಾಗಿ ಕೆಲವು ಸಲಹೆಗಳು...

ತಲೆ ಕೂದಲು ದಟ್ಟವಾಗಿ ಉದ್ದವಾಗಿದ್ದರೂ ಸಹ ಅದನ್ನು ಧೂಳು, ಬೆವರಿನಿಂದ ಕಾಪಾಡಿಕೊಳ್ಳುವುದು ಮತ್ತು ...

news

ನಿಮ್ಮ ಹೈಟ್ ಕಡಿಮೆಯಾಗಲು ಕಾರಣವೇನು ಗೊತ್ತಾ?

ಬೆಂಗಳೂರು : ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ದೇಹದ ಬೆಳವಣಿಗೆ ಕಡಿಮೆಯಾಗುತ್ತದೆ, ಕೆಲವೊಮ್ಮೆ ...

news

50 ದಾಟಿದ ಮೇಲೂ ಸೆಕ್ಸ್ ಮಾಡುವುದರಿಂದ ಭಾರೀ ಲಾಭವಿದೆಯಂತೆ!

ಬೆಂಗಳೂರು: ಲೈಂಗಿಕ ಕ್ರಿಯೆಗೆ ವಯಸ್ಸಿನ ಹಂಗಿಲ್ಲ. ಗಂಡ ಹೆಂಡಿರ ಮಧ್ಯೆ ಒಳ್ಳೆ ಬಾಂಧವ್ಯ, ...

news

ಸೆಕ್ಸ್ ‘ಸೂಪರ್ ಪವರ್’ ಪಡೆಯುವುದು ಹೇಗೆ?!

ಬೆಂಗಳೂರು: ಸೆಕ್ಸ್ ಎನ್ನುವುದು ಎರಡು ದೇಹಗಳು ಒಂದಾಗುವುದು ಮಾತ್ರವಲ್ಲ ಮನಸ್ಸೂ ಒಂದಾಗುವ ಕ್ರಿಯೆ. ...

Widgets Magazine