ಪ್ರೇಮಿಯನ್ನು ಸನಿಹ ಸೆಳೆಯಲು ಈ ಸೂತ್ರಗಳು ಸಾಕು!

ಬೆಂಗಳೂರು, ಭಾನುವಾರ, 3 ಡಿಸೆಂಬರ್ 2017 (08:22 IST)

ಬೆಂಗಳೂರು: ಪ್ರೀತಿಸುತ್ತಿರುವ ವ್ಯಕ್ತಿ ಅಥವಾ ಬಾಳ ಸಂಗಾತಿಯನ್ನು ಇನ್ನಷ್ಟು ಹತ್ತಿರ ಸೆಳೆಯಲು ಏನು ಮಾಡಬೇಕೆಂದು ಯೋಚಿಸುತ್ತಿರುವವರಿಗೆ ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ.
 

ನೃತ್ಯ ತರಗತಿಗೆ ಸೇರಿ
ಸಾಲ್ಸಾದಂತಹ ಹೆಚ್ಚು ಅಂಟಿಕೊಂಡೇ ಇರಲು ಸಾಧ್ಯವಾಗುವಂತಹ ನೃತ್ಯ ತರಗತಿಗೆ ಇಬ್ಬರೂ ಜಾಯಿನ್ ಆಗಿ. ಪರಸ್ಪರ ದೇಹಕ್ಕೆ ದೇಹ ಸ್ಪರ್ಶಿಸುತ್ತಿದ್ದರೆ ಇನ್ನಷ್ಟು ಹತ್ತಿರವಾಗುತ್ತೀರಿ.
 
ಕ್ಯಾಂಡಲ್ ಲೈಟ್ ಡಿನ್ನರ್
ಎಂದಿನ ಬ್ಯುಸಿ ಜೀವನದ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ಮನೆಯ ಟೆರೇಸ್ ಮೇಲೆಯೇ ರಾತ್ರಿ ಹೊತ್ತು ಬೆಳದಿಂಗಳ ರಾತ್ರಿಯಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿ. ಇದರಿಂದ ಪರಸ್ಪರ ಅರಿತಂತಾಗುತ್ತದೆ. ಹಾಗೆಯೇ ರೊಮ್ಯಾಂಟಿಕ್ ಫೀಲ್ ಇರುತ್ತದೆ.
 
ಲವ್ ಲೆಟರ್
ಲವ್ ಲೆಟರ್ ಬರೆಯೋದು ಈ ಜಮಾನಾದಲ್ಲಿ ಓಲ್ಡ್ ಫ್ಯಾಶನ್ ಎನಿಸಬಹುದು. ಆದರೂ ನಿಮ್ಮ ಮನದಲ್ಲಿ ಅವರ ಬಗ್ಗೆ ಇರುವ ಮನದಾಳದ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಿ ನೀಡಿದರೆ ಅದರ ಇಫೆಕ್ಟ್ ಬೇರೆಯೇ ಇರುತ್ತದೆ.
 
ಮೂವಿ ನೋಡಿ
ಒಟ್ಟಿಗೇ ಕೂತು ಒಂದು ರೊಮ್ಯಾಂಟಿಕ್ ಸಿನಿಮಾ ನೋಡಿ. ಇದರಿಂದ ಇಬ್ಬರ ಮನಸ್ಸೂ ಬೆಣ್ಣೆಯಂತಾಗುತ್ತದೆ. ಒಂದು ಡಿಮ್ ಲೈಟ್ ಬೆಳಕಿನಲ್ಲಿ ಕೈಯಲ್ಲಿ ಪಾಪ್ ಕಾರ್ನ್ ಪ್ಯಾಕೇಟ್ ಹಿಡ್ಕೊಂಡು ಸಂಗಾತಿಯ ಕೈಗೆ ಅಂಟಿಕೊಂಡು ಕೂತು ಸಿನಿಮಾ ನೋಡುವ ಮಜವೇ ಬೇರೆ.
 
ಪಿಕ್ ನಿಕ್
ನಿಮ್ಮ ಸಂಗಾತಿಗೆ ಇಷ್ಟವಾಗುವ ಸ್ಥಳಕ್ಕೆ ಪಿಕ್ ನಿಕ್ ಹೋಗಿ ಬನ್ನಿ. ಇದರಿಂದ ಒಬ್ಬರನ್ನು ಒಬ್ಬರು ಅರಿಯಲು ಸಹಾಯವಾಗುತ್ತದೆ ಮತ್ತು ನಿಮ್ಮನ್ನು ನೀವು ತೆರೆದುಕೊಳ್ಳಲು ಸುಲಭವಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕೂದಲು ಉದುರುವಿಕೆಗೆ ಪ್ರಮುಖವಾಗಿ ಏನು ಕಾರಣ ಗೊತ್ತಾ? ಇಲ್ಲಿದೆ ಸುಲಭ ಪರಿಹಾರ

ತಲೆಗೂದಲೆಂದರೆ ಸೌಂದರ್ಯದ ಪ್ರತೀಕ. ಹಾಗೆಂದು ಪ್ರತಿಯೊಬ್ಬರೂ ಪರಿಗಣಿಸಿರುವುದರಿಂದಲೇ ಕೂದಲು ಉದುರುವಿಕೆ ...

news

ದಪ್ಪವಿದ್ದೋರು, ಸ್ಲಿಮ್ ಆಗ್ಬೇಕೇ? ಇಲ್ಲಿದೆ ಆರು ಸೂತ್ರ!

ಹಳೆಯ ವರ್ಷ ಕಳೆದು ಹೊಸ ವರ್ಷ ಬರುವಾಗ ಈ ವರ್ಷ ಇಂಥದ್ದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಹೊಸ ವರ್ಷದ ...

news

ಇವು ಸೌಂದರ್ಯದ ಗಣಿ ಐಶ್ವರ್ಯಾ ರೈ ಬ್ಯೂಟಿ ಸೀಕ್ರೆಟ್ಸ್!

ಐಶ್ವರ್ಯಾ ರೈ! ಈ ಹೆಸರೇ ಹಾಗೆ. ಸೌಂದರ್ಯಕ್ಕೆ ಮತ್ತೊಂದು ಹೆಸರು ಎಂಬುದು ಜಗಜ್ಜಾಹೀರು. ವಯಸ್ಸು 39 ...

news

ಇದು ಸತ್ಯ...ಸೆಕ್ಸ್‌ನಿಂದ ನಿಮ್ಮ ಮೆದುಳು ಚುರುಕಾಗಲಿದೆ!

ಸಂಗಾತಿಯೊಡನೆ ಅಧಿಕೃತವಾಗಿ ನಡೆಸುವ ಲೈಂಗಿಕ ಸಂಪರ್ಕದಿಂದ ಪುರುಷ ಮತ್ತು ಮಹಿಳೆಯರ ಮೆದುಳಿಗೆ ಹೆಚ್ಚಿನ ...

Widgets Magazine
Widgets Magazine