ಎದೆ ಹಾಲುಣಿಸುವ ತಾಯಂದಿರ ಸ್ತನದ ತೊಟ್ಟಿನಲ್ಲಾಗುವ ನೋವಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು, ಗುರುವಾರ, 1 ಫೆಬ್ರವರಿ 2018 (06:06 IST)

ಬೆಂಗಳೂರು : ಹಾಲುಣಿಸುವ ತಾಯಂದಿರಲ್ಲಿ ಕಂಡುಬರುವ ಸಮಸ್ಯೆಯೆಂದರೆ ಸ್ತನದ ತೊಟ್ಟಿನಲ್ಲಾಗುವ ನೋವು ಹಾಗು ಬಿರುಕು. ಮಗು ಹಾಲು ಕುಡಿಯುವುದರಿಂದ ಸ್ತನದ ತೊಟ್ಟಲ್ಲಿ ಗಾಯಗಳಾಗಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರಕ್ತ ಕೂಡ ಬರುವ ಸಾಧ್ಯತೆ ಇರುತ್ತದೆ. ಇದಕ್ಕೆ ಮನೆಮದ್ದುಗಳನ್ನು ಮಾಡಿ ಹಚ್ಚಿದರೆ ನೋವು ಹಾಗು ಬಿರುಕು ಕಡಿಮೆಯಾಗುತ್ತದೆ.


ತುಳಸಿ ಎಲೆಗಳ ಪೇಸ್ಟ್ :- ತುಳಸಿ ಎಲೆಗಳು ಯಾವುದೇ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಉತ್ತಮವಾಗಿರುತ್ತವೆ. ಅವುಗಳು ಬ್ಯಾಕ್ಟೀರಿಯಾದ ಗುಣಲಕ್ಷಣಗಳಿಂದ ತುಂಬಿರುತ್ತವೆ, ಬಿರುಕುಗೊಂಡ ಚರ್ಮವನ್ನು ಸರಿಪಡಿಸಲು ಮಾಡುತ್ತದೆ ಮತ್ತು ನೋವಿಗೆ ಉಪಶಮನ ನೀಡುತ್ತದೆ. ತುಳಸಿ ಎಲೆಯನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಸ್ತನದ ತೊಟ್ಟುಗಳ ಮೇಲೆ ಹಚ್ಚಿ 10 ನಿಮಿಷಗಳ ನಂತರ ಅದನ್ನು ತೊಳೆಯಿರಿ. ಒಂದು ದಿನದಲ್ಲಿ ಹಲವಾರು ಬಾರಿ ಪುನರಾವರ್ತಿಸಿ.


ಎದೆಹಾಲು :- ಎದೆಹಾಲನಿಂದ ನಿಮ್ಮ ಈ ಸಮಸ್ಯೆ ನಿವಾರಣೆಯಾಗುತ್ತದೆ. ಎದೆಹಾಲು ಆಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಒಳಗೊಂಡಿರುವುದರಿಂದ ತೊಟ್ಟಿನ ನೋವು ಮತ್ತು ಬಿರುಕನ್ನು ಉಪಶಮನ ಮಾಡುತ್ತದೆ. ಎದೆಹಾಲನ್ನು ಸ್ವಲ್ಪ ತೆಗೆದುಕೊಂಡು ನಿಮ್ಮ ಸ್ತನದ ತೊಟ್ಟಿಗೆ ಮಸಾಜ್ ಮಾಡಿಕೊಳ್ಳಿ. ಅದನ್ನು ಮುಚ್ಚುವ ಮುನ್ನ ಸಂಪೂರ್ಣ ಒಣಗಲು ಬಿಡಿ. ದಿನದಲ್ಲಿ ಆಗಾಗ್ಗೆ ಈ ಕ್ರಿಯೆಯನ್ನು ಅನುಸರಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮುಖದಲ್ಲಿ ಮೊಡವೆ ಇದೆಯೇ...? ಹಾಗಾದರೆ ಈ ಮದ್ದನ್ನು ಮಾಡಿನೋಡಿ

ಬೆಂಗಳೂರು : ಮುಖದಲ್ಲಿ ಒಂದು ಮೊಡವೆ ಕಂಡರೆ ಸಾಕು, ಮನಸ್ಸಿಗೆ ಏನೋ ಬಂದು ಬಗೆಯ ಕಿರಿಕಿರಿ. ಆ ಮೊಡವೆ ...

news

ಚಪಾತಿಗೆ ತುಪ್ಪ ಹಾಕಿ ತಿನ್ನುವುದು ಆರೋಗ್ಯಕರವೇ?

ಬೆಂಗಳೂರು: ಸಾಮಾನ್ಯವಾಗಿ ನಾವು ನಮ್ಮ ಆಹಾರದಲ್ಲಿ ಸಾಕಷ್ಟು ತುಪ್ಪ ಬಳಸುತ್ತೇವೆ. ತುಪ್ಪ ಹಾಕಿ ಚಪಾತಿ ...

news

ಟೊಮೆಟೋವನ್ನು ಫ್ರಿಡ್ಜ್ ನಲ್ಲಿಡುತ್ತಿದ್ದೀರಾ? ಹಾಗಿದ್ದರೆ ಇದನ್ನು ತಪ್ಪದೇ ಓದಿ!

ಬೆಂಗಳೂರು: ಸಾಮಾನ್ಯವಾಗಿ ಬೇಗನೇ ಕೊಳೆಯುವ ವಸ್ತು ಎನ್ನುವ ಕಾರಣಕ್ಕೆ ಟೊಮೆಟೋವನ್ನು ನಾವು ತುಂಬಾ ...

news

ಸೆಕ್ಸ್ ಗೆ ಒಲ್ಲೆನೆಂದು ಮಹಿಳೆಯರು ಹೇಳುವುದು ಯಾವಾಗ?

ಬೆಂಗಳೂರು: ಮಹಿಳೆಯರು ಸೆಕ್ಸ್ ಬಗ್ಗೆ ಕೆಲವೊಮ್ಮೆ ಆಸಕ್ತಿ ಕಳೆದುಕೊಳ್ಳಬಹುದು. ಅದಕ್ಕೆ ಹಲವು ...

Widgets Magazine